/newsfirstlive-kannada/media/post_attachments/wp-content/uploads/2025/06/TRUMP-8.jpg)
ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ್ರೂ ಅಮೆರಿಕಾಕ್ಕೆ ಇರಾನ್ ಮಣ್ಣು ಮುಕ್ಕಿಸಿತಾ ಎಂಬ ಚರ್ಚೆ ಜಗತ್ತಿನಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣವಾಗಿದ್ದು ಇರಾನ್ ದೇಶದ ಸೀಕ್ರೆಟ್ ನಡೆ. ಅಮೆರಿಕ ದಾಳಿ ನಡೆಸುವ ಮುನ್ನವೇ 400 ಕೆಜಿ ಯುರೇನಿಯಂ ಅನ್ನು ಇರಾನ್ ಬೇರೆಡೆಗೆ ಶಿಫ್ಟ್ ಮಾಡಿದೆಯಂತೆ.
ನ್ಯೂಕ್ಲಿಯರ್ ಸೈಟ್ ಸ್ಥಳಗಳಿಂದ ಬೇರೆಡೆಗೆ 400 ಕೆಜಿ ಯುರೇನಿಂಯ ಶಿಫ್ಟ್ ಮಾಡಿದೆ! ಇದರಿಂದ ಇರಾನ್‌ನ ಅಣ್ವಸ್ತ್ರ ತಯಾರಿ ಪ್ರಯತ್ನಗಳಿಗೆ ಯಾವುದೇ ಹಿನ್ನಡೆಯಾಗಿಲ್ಲ. ಅಮೆರಿಕಾದ ತಂತ್ರವನ್ನು ವಿಫಲಗೊಳಿಸುವಲ್ಲಿ ಇರಾನ್ ಕೂಡ ಯಶಸ್ವಿಯಾಗಿದೆ. ಇರಾನ್ ಅಣ್ವಸ್ತ್ರ ಹೊಂದದಂತೆ ತಡೆಯಲು ಅಣ್ವಸ್ತ್ರ ತಯಾರಿ ಸ್ಥಳಗಳನ್ನು ನಾಶಪಡಿಸಲು ಅಮೆರಿಕಾ ದಾಳಿ ನಡೆಸಿತ್ತು. ಅಮೆರಿಕ, ಇರಾನ್ ಮೇಲೆ ದಾಳಿ ನಡೆಸಿದರೂ, ಗುರಿ ತಲುಪುವಲ್ಲಿ ವಿಫಲವಾಗಿದೆ. ಇರಾನ್ ನ್ಯೂಕ್ಲಿಯರ್ ಶಕ್ತಿಯನ್ನು ಸಂಪೂರ್ಣ ನಾಶಪಡಿಸಿದ್ದೇವೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದರು.
ಇದನ್ನೂ ಓದಿ: ಇರಾನ್ ದಿಕ್ಕು ತಪ್ಪಿಸಿ ಅಮೆರಿಕ ದಾಳಿ ನಡೆಸಿದ್ದೇಗೆ? ಮಿಡ್ ನೈಟ್ ಹ್ಯಾಮರ್ನ ರಹಸ್ಯ ರಿವೀಲ್..!
ಅಮೆರಿಕಾಕ್ಕೂ ಇರಾನ್ ಎಲ್ಲಿ ಯುರೇನಿಯಂ ಸಂಗ್ರಹಿಸಿಟ್ಟುಕೊಂಡಿದೆ ಎಂಬ ನಿಖರ ಮಾಹಿತಿ ಇಲ್ಲ ಅಂತ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ. ಇರಾನ್‌ನ ಯುರೇನಿಯಂ ಸಂಗ್ರಹಾಗಾರದ ನಿಖರ ಮಾಹಿತಿ ಇಲ್ಲ ಅಂತ ಉಪಾಧ್ಯಕ್ಷ ಸ್ಪಷ್ಟವಾಗಿ ಹೇಳಿದ್ದಾರೆ. ಇರಾನ್‌ನ ನ್ಯೂಕ್ಲಿಯರ್ ತಯಾರಿ ಸ್ಥಳಗಳಾದ ಪರ್ಡೋ, ನಟಜಾ, ಇಸಫಹಾನ್ ಮೇಲೆ ಅಮೆರಿಕಾದ ಏರ್ ಸ್ಟ್ರೈಕ್ ನಡೆಸಿದೆ. ಅಮೆರಿಕಾದ ದಾಳಿಯಿಂದ ಇರಾನ್ ಮೇಲೆ ಕನಿಷ್ಠ ಪ್ರಮಾಣದ ಡ್ಯಾಮೇಜ್ ಆಗಿದೆ ಅಂತ ಇರಾನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇರಾನ್ ದೇಶದ ನ್ಯೂಕ್ಲಿಯರ್ ಮೂಲಸೌಕರ್ಯ ಸಂಪೂರ್ಣ ಸುಭದ್ರವಾಗಿದೆ ಎಂದು ಇರಾನ್ ಸರ್ಕಾರ ಹೇಳಿಕೊಂಡಿದೆ. ಅಮೆರಿಕ ದಾಳಿಗೂ ಮುನ್ನ ಫರ್ಡೋ ಸ್ಥಳದಿಂದ 400 ಕೆಜಿ ಯುರೇನಿಯಂ ಬೇರೆಡೆಗೆ ಇರಾನ್ ಶಿಫ್ಟ್ ಮಾಡಿದೆ. ಹೀಗಾಗಿ ಫರ್ಡೋ ಮೇಲೆ ಅಮೆರಿಕಾ ಬಾಂಬ್ ಹಾಕಿದ್ರೂ ಇರಾನ್ಗೆ ನಷ್ಟವೇನೂ ಇಲ್ಲ. ಅಣ್ವಸ್ತ್ರ ತಯಾರಿಯಲ್ಲಿ ಬಳಸುವ ಶೇ.90 ರಷ್ಟು ಯುರೇನಿಯಂ ಬೇರೆಡೆಗೆ ಶಿಫ್ಟ್ ಆಗಿದೆ.
ಇದನ್ನೂ ಓದಿ: ಇರಾನ್ ಹೊರ್ಮುಜ್ ಜಲಸಂಧಿ ಬಂದ್ ಮಾಡಿದರೆ.. ಭಾರತದ ಮೇಲೆ ಏನೆಲ್ಲಾ ಪರಿಣಾಮ..?
ಇದರಿಂದಾಗಿ ಭಾನುವಾರ, ಮಾಧ್ಯಮಗೋಷ್ಠಿಯಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಸಂಪೂರ್ಣವಾಗಿ ಅಣ್ವಸ್ತ್ರ ನಾಶ ಮಾಡಿದ್ದೇವೆ ಎಂದು ಹೇಳಲಿಲ್ಲ. ಇರಾನ್ಗೆ ಭಾರೀ ಡ್ಯಾಮೇಜ್ ಮಾಡಿದ್ದೇವೆ ಎಂದು ಮಾತ್ರ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದರು. ಪಶ್ಚಿಮದ ರಾಷ್ಟ್ರಗಳು ನ್ಯೂಕ್ಲಿಯರ್ ಬಗ್ಗೆ ದ್ವಂದ್ವ ನೀತಿಯನ್ನು ಅನುಸರಿಸುತ್ತಿವೆ ಎಂದು ಇರಾನ್ ಹೇಳುತ್ತಿದೆ.
ನ್ಯೂಕ್ಲಿಯರ್ ಬಾಂಬ್ ತಯಾರಿಸುವ ಇರಾನ್ ಪ್ರಯತ್ನಕ್ಕೆ ಬ್ರೇಕ್ ಹಾಕಲು ಅಮೆರಿಕ ದಾಳಿ ನಡೆಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈಗಾಗಲೇ ಅಣ್ವಸ್ತ್ರ, ಅಣು ಬಾಂಬ್ ಹೊಂದಿರುವಾಗ ನಾವೇಕೆ ಹೊಂದಬಾರದು ಎಂಬುದು ಇರಾನ್ ಪ್ರಶ್ನೆ. ಸದ್ಯ ಇರಾನ್ ಬಳಿ 400 ಕೆಜಿ ಯಷ್ಟು ಭಾರಿ ಪ್ರಮಾಣದ ಯುರೇನಿಯಂ ಇದೆ. ಇದನ್ನು ಬಳಸಿಕೊಂಡು ಇರಾನ್ ಕೂಡ ಹೆಚ್ಚಿನ ಸಂಖ್ಯೆಯ ಅಣು ಬಾಂಬ್ ತಯಾರಿ ಮಾಡಬಹುದು. ಇರಾನ್ ಅಣ್ವಸ್ತ್ರ ಹೊಂದದಂತೆ ತಡೆಯಲು 2015 ರಲ್ಲಿ ಸಹಿ ಹಾಕಿದ್ದ ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದ ಈಗಾಗಲೇ ರದ್ದಾಗಿದೆ ಅಂತ ಇರಾನ್ ಹೇಳಿದೆ.
ಇದನ್ನೂ ಓದಿ: ‘ಬೆಂಗಳೂರು ಸಹವಾಸ ಸಾಕ್ರಿ’ ಎಂದ ಉದ್ಯಮಿ ದಂಪತಿ ವಿರುದ್ಧ ಭಾರೀ ಆಕ್ರೋಶ.. ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ