ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಕಥೆ ಮುಗಿಸಿದ ಇಸ್ರೇಲ್,ಇತ್ತ ಇರಾನ್​ಗೆ ತಳಮಳ ಶುರುವಾಗಿದ್ದು ಏಕೆ..?

author-image
Gopal Kulkarni
Updated On
ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಕಥೆ ಮುಗಿಸಿದ ಇಸ್ರೇಲ್,ಇತ್ತ ಇರಾನ್​ಗೆ ತಳಮಳ ಶುರುವಾಗಿದ್ದು ಏಕೆ..?
Advertisment
  • ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದು ಮುಗಿಸಿತಾ ಇಸ್ರೇಲ್ ಪಡೆ​?
  • ಹೆಜ್ಬುಲ್ಲಾ ಮರುಸಂಘಟನೆಗೆ ಮುಂದಾದ ಇರಾನ್​ ಮುಂದೆ ದೊಡ್ಡ ಸವಾಲು!
  • ಹೆಜ್ಬುಲ್ಲಾ ಮರುಸಂಘಟಿಸಿದ್ದೇ ಆದಲ್ಲಿ ಇರಾನ್​ಗೆ ಆಗುವ ಸಮಸ್ಯೆಗಳೇನು?

ಹೆಜ್ಬುಲ್ಲಾ ನಾಯಕ ಹಸನ್ ನಸ್ರುಲ್ಲಾನ ಕಥೆ ಮುಗಿಸುವ ಮೂಲಕ ಇಸ್ರೇಲ್ ಈಗ ಮತ್ತೊಂದು ಕಥೆಗೆ ಮುನ್ನುಡಿ ಬರೆದಿದೆ. ಅತ್ತ ಹಸನ್ ನಸ್ರುಲ್ಲಾ ಏರ್​ಸ್ಟ್ರೈಕ್​ನಲ್ಲಿ ಮಡಿದ ಕ್ಷಣದಿಂದಲೇ ದೊಡ್ಡದೊಂದು ಸಂದಿಗ್ಧತೆಗೆ ಇರಾನ್ ಸಿಲುಕಿದೆ. ಇಷ್ಟು ದಿನ ಲೆಬನಾನ್​​ನಲ್ಲಿ ಹೆಜ್ಬುಲ್ಲಾ ಸಂಘಟನೆಯ ಮೂಲಕ ಒಂದು ಪರೋಕ್ಷ ಹಿಡಿತ ಸಾಧಿಸಿದ್ದ ಇರಾನ್​ಗೆ ಈಗ ಅದು ಕಳೆದು ಹೋಗುವ ಭಯ ಶುರುವಾಗಿದೆ. ಹೆಜ್ಬುಲ್ಲಾ ಇಷ್ಟು ವರ್ಷ ಅಷ್ಟು ಗಟ್ಟಿಯಾಗಿ ಲೆಬನಾನ್​ನಲ್ಲಿ ನಿಂತಿದ್ದೇ ಇರಾನ್ ಒದಗಿಸುತ್ತಿದ್ದ ಹಣಕಾಸು ಸಹಾಯ ಹಾಗೂ ಶಸ್ತ್ರಾಸ್ತ್ರಗಳ ಪೂರೈಕೆಯಿಂದ ಅನ್ನೋದು ಜಗತ್ತಿಗೆ ಗೊತ್ತಿರುವ ವಿಷಯ. ಸದ್ಯ ಲೆಬನಾನ್​ನಲ್ಲಿ ಹೆಜ್ಬುಲ್ಲಾ ಪ್ರಮುಖ ನಾಯಕರನ್ನೆಲ್ಲಾ ಯಮಪುರಿಗೆ ಅಟ್ಟಿರುವ ಇಸ್ರೇಲ್​, ಹೊಸ ನಾಯಕತ್ವ ವಹಿಸಿಕೊಳ್ಳಲು ಬಂದವರನ್ನೂ ಕೂಡ ಗುರಿಯಿಟ್ಟು ಹೊಡೆಯುತ್ತಿದೆ. ಇದರಿಂದ ಇರಾನ್​ನಲ್ಲಿ ಹೊಸ ತಳಮಳ ಶುರುವಾಗಿದೆ.

ಇದನ್ನೂ ಓದಿ:1.5 ಲಕ್ಷ ಸರ್ಕಾರಿ ಕೆಲಸಗಳು ಗೋತಾ, ಆರು ಸಚಿವಾಲಯಗಳು ಬಂದ್​; ಪಾಕಿಸ್ತಾನಕ್ಕೆ ಈ ದುಸ್ಥಿತಿ ಬಂದಿದ್ಯಾಕೆ ?

ಗಾಜಾಪಟ್ಟಿಯಲ್ಲಿ ಶುರುವಾದ ವಾರ್ ಈಗ ಮಧ್ಯಪ್ರಾಚ್ಯವನ್ನು ಕಂಗೆಡಿಸುವ ಮಟ್ಟಕ್ಕೆ ಹೋಗಿ ನಿಂತಿದೆ. ಒಂದು ಪ್ಯಾಲಿಸ್ತೇನ್ ಮತ್ತೊಂದು ಕಡೆ ಲೆಬನಾನ್ ಹಾಗೂ ಇರಾನ್ ಜೊತೆ ಪ್ರತ್ಯಕ್ಷ ಪರೋಕ್ಷ ಯುದ್ಧಕ್ಕೆ ನಿಂತಿರುವ ಇಸ್ರೇಲ್​ ಮುಯ್ಯಿಗೆ ಮುಯ್ಯಿ ಎನ್ನುವಂತೆ ಹಮಾಸ್ ಹಾಗೂ ಹೆಜ್ಬುಲ್ಲಾ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಹೊಡೆಯುತ್ತಿದೆ. ಇದು ಇರಾನ್​ನ್ನು ಮತ್ತಷ್ಟು ಕೆರಳವುಂತೆ ಮಾಡಿದೆ. ಇರಾನ್ ಒಳಕ್ಕೆ ನುಗ್ಗಿ ಹಮಾಸ್​ ಮುಖಂಡ ಇಸ್ಮಾಯಿಲ್ ಹನಿಹ್ಯಾನನ್ನು ಹೊಡೆದುರುಳಿಸಿದ ಇಸ್ರೇಲ್​ ಈಗ ಹೆಜ್ಬುಲ್ಲಾದ ಪ್ರಮುಖ ನಾಯಕನನ್ನು ಮುಗಿಸಿದೆ. ಹಮಾಸ್ ಮುಖಂಡನ ಹತ್ಯೆಯಾದಗಲೇ ಇರಾನ್ ಕೂಡ ನೇರವಾಗಿ ಇಸ್ರೇಲ್ ಜೊತೆ ಯುದ್ಧಕ್ಕೆ ಇಳಿಯಲಿದೆ ಎಂದು ಭಾವಿಸಲಾಗಿತ್ತು. ಆದ್ರೆ ಈಗ ಹೆಚ್ಚು ಕಡಿಮೆ ಇರಾನ್ ಇಸ್ರೇಲ್​ನೊಂದಿಗೆ ನೇರ ಕದನಕ್ಕೆ ಇಳಿಯುವ ಎಲ್ಲಾ ಸಾಧ್ಯತೆಗಳು ಇವೆ.

ಇದನ್ನೂ ಓದಿ:ಬೂದಿಯಿಂದ ಬಂಗಾರ ತೆಗೆದು ಕೋಟಿ ಕೋಟಿ ಹಣ ಗಳಿಸಿದ ಜಪಾನಿಯರು! ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

ಈಗಾಗಲೇ ಹಸನ್ ನಸ್ರುಲ್ಲಾ ಸಾವನ್ನು ನಾವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಇರಾನ್​ನ ಪ್ರಮುಖ ನಾಯಕ ಆಯತ್ತುಲ್ಲಾ ಅಲಿ ಕಮೇನಿ ಹೇಳಿದ್ದಾರೆ. ಮತ್ತೊಂದು ಕಡೆ ಇರಾನ್​ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೇಜಾ ಕೂಡ ಇಸ್ರೇಲ್​ ವಿನಾಶ ಮಾಡಿಯೇ ನಾವು ವಿರಮಿಸುತ್ತೇವೆ ಎಂದು ಶಪಥ ತೊಟ್ಟಿದ್ದಾರೆ. ನಸ್ರುಲ್ ಇರಾನ್​ನ ಶಕ್ತಿ ವಿಸ್ತರಣೆಗೆ ಪ್ರಮುಖ ಅಸ್ತ್ರವಾಗಿದ್ದ. ಇರಾನ್​ ಇಸ್ರೇಲ್ ವಿರುದ್ಧ ಮಾಡಬೇಕಿದ್ದ ಎಲ್ಲಾ ಕಾರ್ಯಗಳನ್ನು ಈ ಒಂದು ಸಂಘಟನೆ ನಡೆಸುತ್ತಿತ್ತು. ಸದ್ಯ ನಾಯಕರಿಲ್ಲದೇ ಬಳಲುತ್ತಿರುವ ಹೆಜ್ಬುಲ್ಲಾ ಸಂಘಟನೆ ಮತ್ತೆ ಮೊದಲನಂತೆ ಕಟ್ಟಬೇಕು ಅಂದ್ರೆ ಅದು ಅಷ್ಟು ಸರಳವಲ್ಲ. ಮತ್ತೆ ಸಾಕಷ್ಟು ಹಣ ಇರಾನ್ ಅದಕ್ಕಾಗಿ ಮೀಸಲಿಡಬೇಕು. ಇದರಿಂದಾಗಿ ತನ್ನ ದೇಶಕ್ಕೆ ದೊಡ್ಡ ಆರ್ಥಿಕ ಹೊರೆಯಾಗುವ ಸಾಧ್ಯತೆಯನ್ನು ಮನಗಂಡಿದೆ ಇರಾನ್​. ಈಗಾಗಲೇ ಹಲವು ದೇಶಗಳಿಂದ ಆರ್ಥಿಕ ನಿಬಂಧನೆಗೆ ಒಳಗಾಗಿರುವ ಇರಾನ್​ ಮತ್ತೆ ಹೆಜ್ಬುಲ್ಲಾ ಮರುಸಂಘಟನೆಗೆ ನಿಂತಲ್ಲಿ ಮತ್ತೆ ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದಂತೂ ಪಕ್ಕಾ.

ಒಂದು ವೇಳೆ ಇರಾನ್ ಈ ಒಂದು ಕೆಲಸಕ್ಕೆ ಮುಂದಾಗಿದ್ದೇ ಆದಲ್ಲಿ ದೇಶದ ಮೇಲಾಗುವ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಅದೇ ದೇಶದ ಅರ್ಥಶಾಸ್ತ್ರಜ್ಞರು ಮಾತನಾಡುತ್ತಿದ್ದಾರೆ. ಮತ್ತೆ ಹೆಜ್ಬುಲ್ಲಾ ಮರುಸಂಘಟನೆಗೆ ಇರಾನ್ ಮುಂದಾದಲ್ಲಿ ಇಲ್ಲಿಯ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಮೊದಲೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ನಾವು ಅದನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತೇವೆ. ಹೀಗಾಗಿ ಹೆಜ್ಬುಲ್ಲಾ ಮರುಸಂಘಟನೆಯ ಕನಸು ಬಿಡುವುದು ಒಳಿತು ಎಂದು ಹೇಳುತ್ತಿವೆ.ಒಂದು ಅರ್ಥದಲ್ಲಿ ಹೆಜ್ಬುಲ್ಲಾ ಪ್ರಮುಖ ನಾಯಕರನ್ನೆಲ್ಲಾ ಹೊಡೆದುರುಳಿಸುವ ಮೂಲಕ ಇಸ್ರೇಲ್ ಒಂದೇ ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡೆದು ಮುಗಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment