/newsfirstlive-kannada/media/post_attachments/wp-content/uploads/2025/06/PM_MODI_IRAN_ISREAL.jpg)
ಇರಾನ್- ಇಸ್ರೇಲ್ ಕದನ ವಿರಾಮ ಘೋಷಿಸಿದ್ದರಿಂದ ಭಾರತಕ್ಕೂ ಹತ್ತಾರು ಅನುಕೂಲಗಳಿವೆ. ಜಾಗತಿಕ ಶಾಂತಿ, ಸ್ಥಿರತೆಯಿಂದ ಭಾರತಕ್ಕೂ ಲಾಭ, ಅನುಕೂಲಗಳಿವೆ. ಹಾಗಾದರೇ, ಭಾರತಕ್ಕೆ ಕದನ ವಿರಾಮ ಜಾರಿಯಿಂದ ಏನೇನು ಲಾಭ ಇವೆ ಎಂದರೆ..?
- ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಸ್ಥಿರತೆ, ಕಡಿಮೆ ಬೆಲೆಗೆ ಲಭ್ಯ
- ಹರ್ಮೂಜ್ ಜಲಸಂಧಿ ಮೂಲಕ ಕಚ್ಚಾತೈಲದ ಸಾಗಾಟ ಸುಲಭ
- ಕಡಿಮೆ ಕಚ್ಚಾತೈಲದ ಬೆಲೆಯಿಂದ ಭಾರತದ ಅಮದು ವೆಚ್ಚ ಕಡಿತ
- ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ತಡೆ
- ಭಾರತದ ಷೇರುಪೇಟೆಯಲ್ಲಿ ಷೇರುಗಳ ಬೆಲೆ ಏರಿಕೆ
- ಸಮುದ್ರ ಮಾರ್ಗದಲ್ಲಿ ತೊಂದರೆ ಇಲ್ಲದೇ ಸರಕು, ತೈಲ ಸಾಗಾಟದಿಂದ ಆರ್ಥಿಕತೆ ಲಾಭ
- ಮಧ್ಯಪ್ರಾಚ್ಯ ದೇಶಗಳಿಗೆ ಭಾರತದ ರಫ್ತು ಹೆಚ್ಚಳದಿಂದ ಭಾರತಕ್ಕೆ ಆರ್ಥಿಕ ಲಾಭ
- ಭಾರತದ ಸ್ಟ್ರಾಟಜಿಕ್ ಪ್ರಾಜೆಕ್ಟ್ ಚಬಹಾರ್ ಬಂದರು, ಐಎಂಇಸಿ ಕಾರಿಡಾರ್‌ಗೆ ಮತ್ತಷ್ಟು ಬಲ
- ಜಾಗತಿಕ ಶಾಂತಿ, ಸ್ಥಿರತೆಯಿಂದ ಭಾರತದಲ್ಲಿ ಬೆಲೆ ಏರಿಕೆಗೆ ತಡೆ, ತೈಲ, ಚಿನ್ನದ ಬೆಲೆ ಇಳಿಕೆ
ಇರಾನ್- ಇಸ್ರೇಲ್ ಯುದ್ಧ ಮುಂದುವರಿದಿದ್ದರೇ, ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿತ್ತು. ಆಗ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಆದರೇ, ಈಗ ಕದನ ವಿರಾಮ ಘೋಷಣೆಯಿಂದ ಕಚ್ಚಾತೈಲ ಬೆಲೆ ಇಂದು(ಜೂನ್ 24) ಶೇ.5 ರಷ್ಟು ಕುಸಿದಿದೆ. ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 67 ಡಾಲರ್ಗೆ ಕುಸಿದಿದೆ. ಇನ್ನೂ ಈಗ ಹರ್ಮೂಜ್ ಜಲಸಂಧಿಯ ಮೂಲಕ ಕಚ್ಚಾತೈಲದ ಸಾಗಾಟ ಸರಾಗವಾಗಿದೆ. ಸಂಘರ್ಷ ಮುಂದುವರಿದಿದ್ದರೇ, ಇರಾನ್ ಹರ್ಮೂಜ್ ಜಲಸಂಧಿಯನ್ನು ಬಂದ್ ಮಾಡುತ್ತಿತ್ತು. ಆಗ ದೂರದ ಮಾರ್ಗಗಳ ಮೂಲಕ ಭಾರತಕ್ಕೆ ಕಚ್ಚಾತೈಲ ಸಾಗಾಟ ಮಾಡಬೇಕಾಗಿತ್ತು. ಇದರಿಂದ ಕಚ್ಚಾತೈಲದ ಸಾಗಾಟ ವೆಚ್ಚ ದುಬಾರಿಯಾಗಿ, ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿತ್ತು. ಈಗ ಕಚ್ಚಾತೈಲದ ಬೆಲೆ ಕುಸಿತದಿಂದ ಭಾರತದ ಅಮದು ವೆಚ್ಚ ಕಡಿಮೆಯಾಗಿ ಭಾರತಕ್ಕೆ ಲಾಭವಾಗಲಿದೆ.
ಇದನ್ನೂ ಓದಿ:ಪ್ರಾಂಶುಪಾಲ ಜೊತೆ ಸೇರಿ ವಯಸ್ಸಿಗೆ ಬಂದ ಮಗನನ್ನೇ ಮುಗಿಸಿದ ಹೆತ್ತ ತಾಯಿ.. ಅಸಲಿಗೆ ಆಗಿದ್ದೇನು?
ಭಾರತದ ಆರ್ಥಿಕತೆಗೆ ಲಾಭ
ಇನ್ನೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೂ ತಡೆ ಬಿದ್ದಿದೆ. ಕದನ ವಿರಾಮ ಘೋಷಣೆಯಿಂದ ಇಂದು (ಜೂನ್ 24) ಭಾರತದ ಷೇರುಪೇಟೆಯಲ್ಲಿ ಷೇರುಗಳ ಬೆಲೆ ಏರಿಕೆಯಾಗಿದೆ. ಮಧ್ಯಪ್ರಾಚ್ಯ ದೇಶಗಳಿಗೆ ಸಮುದ್ರ ಮಾರ್ಗದಲ್ಲಿ ಸರಕು ಸಾಗಟ ಸರಾಗವಾಗಿರುವುದರಿಂದ ಭಾರತಕ್ಕೆ ಆರ್ಥಿಕತೆಗೆ ಲಾಭವಾಗಲಿದೆ. ಮಧ್ಯಪ್ರಾಚ್ಯ ದೇಶಗಳಿಗೆ ಭಾರತದ ರಫ್ತು ಹೆಚ್ಚಳದಿಂದ ಭಾರತಕ್ಕೆ ಆರ್ಥಿಕ ಲಾಭವಾಗಲಿದೆ.
ಭಾರತವು ಇರಾನ್ನಲ್ಲಿ ಸ್ಟ್ರಾಟಜಿಕ್ ಆಗಿ ಚಬಹಾರ್ ಬಂದರು ನಿರ್ಮಾಣ ಮಾಡುತ್ತಿದೆ. ಇದನ್ನು ಮುಂದುವರಿಸಲು ಈಗ ಯಾವುದೇ ತೊಂದರೆ ಇಲ್ಲ. ಇನ್ನೂ ಮಧ್ಯಪ್ರಾಚ್ಯ ದೇಶಗಳ ಮೂಲಕವೇ ಎಕನಾಮಿಕ್ ಕಾರಿಡಾರ್ ನಿರ್ಮಿಸುವುದಕ್ಕೂ ಈಗ ಯಾವುದೇ ತೊಂದರೆ ಇಲ್ಲ. ಜಾಗತಿಕ ಶಾಂತಿ, ಸ್ಥಿರತೆಯಿಂದ ಭಾರತದಲ್ಲಿ ವಿವಿಧ ಉತ್ಪನ್ನಗಳ ಬೆಲೆ ಏರಿಕೆಗೆ ತಡೆ ಬಿದ್ದಿದೆ. ಜೊತೆಗೆ ಚಿನ್ನದ ಬೆಲೆಯೂ ಇಳಿಕೆಯಾಗುವ ನಿರೀಕ್ಷೆ ಇದೆ. ಇದೇ ರೀತಿ ರಷ್ಯಾ- ಉಕ್ರೇನ್ ಯುದ್ಧ ನಿಂತರೂ, ಭಾರತಕ್ಕೆ ಮತ್ತಷ್ಟು ಲಾಭ, ಅನುಕೂಲ ಆಗಲಿದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ