/newsfirstlive-kannada/media/post_attachments/wp-content/uploads/2025/06/TelAviv.jpg)
ಮಧ್ಯ ಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಯುದ್ಧ ತೀವ್ರಗೊಂಡಿದೆ. ಇಸ್ರೇಲ್ ಮೇಲೆ ಇರಾನ್ ಮಿಸೈಲ್ಗಳ ಮಳೆಯನ್ನೇ ಸುರಿಸಿದ್ದು, ಟೆಲ್ ಅವೀವ್, ಜೆರುಸಲೆಮ್ ನಗರಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಕ್ಷಿಪಣಿಗಳ ಭೀಕರ ದಾಳಿಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಧ್ವಂಸವಾಗಿವೆ.
ಇಸ್ರೇಲ್ ಏರ್ಸ್ಟ್ರೈಕ್ನಲ್ಲಿ ಇರಾನ್‌ನ 78 ಜನರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ 150 ಮಿಸೈಲ್ಗಳಿಂದ ಅಟ್ಯಾಕ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಇರಾನ್ ಏರ್ಸ್ಟ್ರೈಕ್ನಲ್ಲಿ ಓರ್ವ ಸಾವನ್ನಪ್ಪಿದ್ದರೆ 34 ಜನರಿಗೆ ಗಾಯಗಳಾಗಿದೆ.
ಇರಾನ್ ನಿರಂತರವಾಗಿ ಇಸ್ರೇಲ್ ಮೇಲೆ ಮಿಸೈಲ್ಗಳನ್ನು ಹಾರಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಇರಾನ್‌ನ ತೆಹ್ರಾನ್ ಮೇಲೆ ಅಟ್ಯಾಕ್ ಮಾಡುತ್ತಿದೆ. ಇಸ್ರೇಲ್-ಇರಾನ್ ನಡುವೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ₹2,400 ಕೋಟಿ ವಿಮೆ.. ಅತಿ ದೊಡ್ಡ ಇನ್ಶೂರೆನ್ಸ್ ಕ್ಲೇಮ್; ಏರ್ ಇಂಡಿಯಾ ಸಂಸ್ಥೆ, ಪ್ರಯಾಣಿಕರಿಗೆ ಎಷ್ಟು?
‘ಆಪರೇಷನ್ ರೈಸಿಂಗ್ ಲಯನ್’
ಈ ಮೊದಲು ಇಸ್ರೇಲ್ ‘ಆಪರೇಷನ್ ರೈಸಿಂಗ್ ಲಯನ್’ ಹೆಸರಲ್ಲಿ ತನ್ನ ಶತ್ರು ದೇಶ ಇರಾನ್ ಮೇಲೆ ದಾಳಿ ಮಾಡಿತ್ತು. ಅಣ್ವಸ್ತ್ರ ನೆಲೆಗಳು, ಇರಾನ್‌ನ ಯುರೇನಿಯಂ ಸಂಸ್ಕರಣಾ ಘಟಕದ, ಸೇನಾ ನೆಲೆ, ಕ್ಷಿಪಣಿ ಸಂಗ್ರಹಗಾರ ಹಾಗೂ ಅಣು ವಿಜ್ಞಾನಿಗಳು, ಸೇನಾ ಮುಖ್ಯಸ್ಥರನ್ನು ಗುರಿಯಾಗಿಸಿ 200 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.
ಇಸ್ರೇಲ್ಗೆ ‘ಅಣ್ವಸ್ತ್ರ’ ಆತಂಕ!
ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಹೆಚ್ಚಿನ ನ್ಯೂಕ್ಲಿಯರ್ ಬಾಂಬ್ ತಯಾರಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಬಾಂಬ್ ತಯಾರಿಕೆಗೆ ಯುರೇನಿಯಂ ಸಂಗ್ರಹಿಸಿತ್ತು. ಇರಾನ್ ಅಣು ಬಾಂಬ್ ತಯಾರಿಕೆಯಿಂದ ಇಸ್ರೇಲ್ಗೆ ಆತಂಕ ಎದುರಾಗಿದೆ.
ಇರಾನ್‌ನ 200ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಸ್ರೇಲ್ ಕ್ಷಿಪಣಿ, ಡ್ರೋನ್ ದಾಳಿ ಮಾಡಿದೆ. ಇರಾನ್‌ನಲ್ಲೇ ರಹಸ್ಯ ನೆಲೆ ಸ್ಥಾಪಿಸಿ ಏಕಕಾಲಕ್ಕೆ ಇರಾನ್ ಮೇಲೆ ಹೊರಗಿನಿಂದ & ಒಳಗಿನಿಂದ ದಾಳಿ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ