ಅಮೆರಿಕ ದಾಳಿ ಬೆನ್ನಲ್ಲೇ ಯುದ್ಧಕ್ಕೆ ಹೊಸ ತಿರುವು.. ಪುಟಿನ್ ಭೇಟಿಯಾಗಿ ‘Game is not over’ ಎಂದ ಇರಾನ್..!

author-image
Ganesh
Updated On
ಇರಾನ್ ದಿಕ್ಕು ತಪ್ಪಿಸಿ ಅಮೆರಿಕ ದಾಳಿ ನಡೆಸಿದ್ದೇಗೆ? ಮಿಡ್ ನೈಟ್ ಹ್ಯಾಮರ್​​ನ ರಹಸ್ಯ ರಿವೀಲ್..!
Advertisment
  • ಇಸ್ರೇಲ್ vs ಇರಾನ್ ಯುದ್ಧ.. ಏಟು-ಎದುರೇಟು
  • ಅಮೆರಿಕದ ಪ್ರಮುಖ ನಗರಗಳಲ್ಲಿ ಹೈಅಲರ್ಟ್ ಘೋಷಣೆ
  • ಅಮೆರಿಕ ದಾಳಿ ಅಪಾಯಕಾರಿ ತಿರುವು ಎಂದ ವಿಶ್ವಸಂಸ್ಥೆ

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ರಣಕಹಳೆ ಮೊಳಗಿಸಿವೆ. ಇಸ್ರೇಲ್ ಮೇಲೆ ಇರಾನ್ ಮಿಸೈಲ್​ಗಳ ಮಳೆ ಸುರಿಸ್ತಿದೆ. ಗೇಮ್ ಇನ್ನೂ ಮುಗಿದಿಲ್ಲ ಅಂತ ಖಡಕ್ ಎಚ್ಚರಿಕೆ ರವಾನಿಸಿದೆ. ಇರಾನ್​ ದಾಳಿಗೆ ಇಸ್ರೇಲ್ ತಿರುಗೇಟು ನೀಡಿದ್ದು 9 ಸೈನಿಕರನ್ನು ಮುಗಿಸಿದೆ. ಈ ಬೆನ್ನಲ್ಲೇ ಇರಾನ್ ವಿದೇಶಾಂಗ ಮಂತ್ರಿ ರಷ್ಯಾಧ್ಯಕ್ಷ ಪುಟಿನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ವಿಶ್ವಸಂಸ್ಥೆ ಶಾಂತಿಯ ಸಂದೇಶ ಕಳುಹಿಸಿದೆ.

ಇಸ್ರೇಲ್ ಜೊತೆ ಅಮೆರಿಕ ಕೂಡ ಇರಾನ್ ಮೇಲೆ ದಾಳಿ ನಡೆಸ್ತಿದೆ. ದಾಳಿಯಿಂದ ಗಾಯಗೊಂಡಂತಾಗಿರುವ ಇರಾನ್​​, ಅಮೆರಿಕ ದಾಳಿ ನಡೆಸಿದ್ರೂ ಗೇಮ್ ಇನ್ನೂ ಮುಗಿದಿಲ್ಲ ಅಂತ ಸವಾಲೆಸೆದಿದೆ. ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಲಹೆಗಾರ ಅಲಿ ಶಮ್ಖಾನಿ, ಅಮೆರಿಕ ದಾಳಿಗೆ ಪ್ರತಿಕ್ರಿಯಿಸಿದ್ದು ಇನ್ನೂ ಆಟ ಮುಗಿದಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ದಾಳಿ ನಡೆಸಿದ್ರೂ ಅಲ್ಲಿರುವ ಪರಮಾಣ ತಯಾರಿಕಾ ದಾಸ್ತಾನು ಸುಭದ್ರವಾಗಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ:ಇರಾನ್​ ಮೇಲೆ US ಅಟ್ಯಾಕ್.. ಅಮೆರಿಕ ಸೇನೆಯ ಬಾಹುಬಲಿ ಬಿ-2 ಬಾಂಬರ್‌ ವಿಶೇಷತೆ ಏನು ಗೊತ್ತಾ..?

ಇರಾನ್ ದಾಳಿಗೆ ಇಸ್ರೇಲ್ ತಿರುಗೇಟು..

ಇರಾನ್ ದಾಳಿಗೆ ಇಸ್ರೇಲ್ ಕೂಡ ಮರುದಾಳಿ ನಡೆಸ್ತಿದೆ. ಇರಾನ್​ನ ಯಾಜ್ದ್ ನಗರದ ಎರಡು ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಏಳು ಇರಾನ್ ಸೈನಿಕರು ಹತರಾಗಿದ್ದಾರೆ ಎನ್ನಲಾಗಿದೆ. ಇಸ್ರೇಲಿ ವಾಯುಪಡೆಯ ಯುದ್ಧ ವಿಮಾನಗಳು ಟೆಹ್ರಾನ್ ಮತ್ತು ಪಶ್ಚಿಮ ಇರಾನ್‌ನಲ್ಲಿರುವ ಇರಾನಿನ ಮಿಲಿಟರಿ ನೆಲೆಗಳ ಮೇಲೆ ದಾಳಿಗಳನ್ನು ನಡೆಸುತ್ತಿವೆ, ಇರಾನ್​ನ ಪಶ್ಚಿಮ ನಗರವಾದ ಕೆರ್ಮನ್‌ಶಾದಲ್ಲಿ ದೊಡ್ಡ ಸ್ಫೋಟ ಕೇಳಿಬಂದಿದೆ. ಇರಾನ್ ನಿನ್ನೆ ನಡೆಸಿದ ಪ್ರತೀಕಾರದ ದಾಳಿಗೆ ಇಸ್ರೇಲ್‌ನಲ್ಲಿ ಸುಮಾರು 86 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇರಾನ್​ನ ಫೋರ್ಡೋ ಪರಮಾಣು ಸ್ಥಾವರಗಳಿಗೆ ಹಾನಿ!

ಇರಾನ್​ನ ಫೋರ್ಡೋ ಪರಿಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿಯಿಂದ ದೊಡ್ಡ ರಂಧ್ರ ಆಗಿರುವುದನ್ನು ಮ್ಯಾಕ್ಸರ್ ಹಾಗೂ ರಾಯಿಟರ್ಸ್ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿವೆ. ಎರಡೂ ಚಿತ್ರಗಳಲ್ಲಿ, ಅಮೆರಿಕ ದಾಳಿಯ ದೃಶ್ಯ ಸೆರೆಯಾಗಿದೆ.

ಅಮೆರಿಕದ ಪ್ರಮುಖ ನಗರಗಳಲ್ಲಿ ಹೈ-ಅಲರ್ಟ್ ಘೋಷಣೆ

ಅಮೆರಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಹವಣಿಸುತ್ತಿದೆ. ಇರಾನ್ ದಾಳಿಯ ಭೀತಿ ಇದ್ದು ಅಮೆರಿಕದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ದಾಳಿ ನಡೆಸಿರುವ ಅಮೆರಿಕ ನಮ್ಮ ಗುರಿ ಇರಾನ್ ಮೇಲಿನ ಯುದ್ಧ ಅಲ್ಲ. ಇರಾನ್​ ಮೇಲಿನ ಪರಮಾಣು ಕೇಂದ್ರಗಳನ್ನ ನಿಯಂತ್ರಿಸುವ ಯುದ್ಧ ಅಂತ ಹೇಳಿದೆ. ಅಮೆರಿಕದ ಈ ದಾಳಿಯನ್ನು ಇರಾನ್ ಖಂಡಿಸಿದ್ದು, ಇದನ್ನು ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಅಂತ ಕರೆದಿದೆ. ದಾಳಿಗಳ ಕುರಿತು ತುರ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೂ ಟೆಹ್ರಾನ್ ಕರೆ ನೀಡಿದೆ.

ಇದನ್ನೂ ಓದಿ: 10 ದಿನದಿಂದ ಇಸ್ರೇಲ್​ನಿಂದ ಆಗದಿದ್ದನ್ನ, ಒಂದೇ ಒಂದು ರಾತ್ರಿಯಲಿ ಮಾಡಿ ಮುಗಿಸಿದ ಅಮೆರಿಕ

ಪುಟಿನ್ ಭೇಟಿಯಾದ ಇರಾನ್ ವಿದೇಶಾಂಗ ಮಂತ್ರಿ

ಈ ಮಧ್ಯೆ ಇರಾನ್ ವಿದೇಶಾಂಗ ಮಂತ್ರಿ ಅಬ್ಬಾಸ್ ಅರಗ್ಚಿ ಸ್ನೇಹಿತ ರಷ್ಯಾಧ್ಯಕ್ ಪುಟಿನ್ ಭೇಟಿ ಮಾಡಿದ್ದು ಮಾತುಕತೆ ನಡೆಸಿದ್ದಾರೆ. ರಷ್ಯಾ ನಮ್ಮ ಸ್ನೇಹಿತ ಅಂತ ಅಬ್ಬಾಸ್ ಅರಗ್ಚಿ ಹೇಳಿದ್ದಾರೆ.

ಅಮೆರಿಕ ದಾಳಿ ಅಪಾಯಕಾರಿ ತಿರುವು ಎಂದ ವಿಶ್ವಸಂಸ್ಥೆ

ಮಧ್ಯಪ್ರಾಚ್ಯದಲ್ಲಿ ಯುದ್ಧೋತ್ಸಾಹ ತೀವ್ರಗೊಂಡ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತು ಅಧಿವೇಶನ ನಡೆಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ದಾಳಿಯನ್ನು ಅಪಾಯಕಾರಿ ತಿರುವು ಅಂತ ಕರೆದಿದ್ದಾರೆ. ಜಗತ್ತು ಶಾಂತಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಅಂತ ಸಂದೇಶ ನೀಡಿದ್ದಾರೆ.. ಅಪಾಯ ತಪ್ಪಿಸಲು, ರಾಜತಾಂತ್ರಿಕತೆ ಮೇಲುಗೈ ಸಾಧಿಸಬೇಕು, ನಾಗರಿಕರನ್ನು ರಕ್ಷಿಸಬೇಕು, ಸುರಕ್ಷಿತ ಸಮುದ್ರ ಸಂಚಾರ ಖಾತರಿಪಡಿಸಬೇಕು ಅಂತ ಹೇಳಿದ್ದಾರೆ.

ಒಟ್ಟಾರೆ, ಯುದ್ಧ ನಿಲ್ಲಿಸಬೇಕು ಅಂತ ಶಾಂತಿಧೂತ ವಿಶ್ವಸಂಸ್ಥೆ ಕರೆ ನೀಡಿದೆ. ಭಾರತ ಕೂಡ ಶಾಂತಿಯ ಸಂದೇಶ ನೀಡಿದೆ. ಆದ್ರೆ ಕೆರಳಿ ನಿಂತಿರುವ ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಸದ್ಯ ಸಾಧ್ಯವಿಲ್ಲದಂತಹ ಪರಿಸ್ಥಿತಿ ತಲುಪಿದೆ.

ಇದನ್ನೂ ಓದಿ: SENA ದೇಶಗಳ ವಿರುದ್ಧ ಬೂಮ್ರಾ ವಿಶೇಷ ದಾಖಲೆ.. ರೆಕಾರ್ಡ್​ ಬ್ರೇಕ್​ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment