ಟ್ರಂಪ್ ಒಬ್ಬ ಶೋ ಮ್ಯಾನ್, ಕೆಣಕಿದವರಿಗೆ ಕಪಾಳಕ್ಕೆ ಹೊಡೆದಿದ್ದೇವೆ -ಇರಾನ್ ಸುಪ್ರೀಂ ಲೀಡರ್​

author-image
Ganesh
Updated On
ಇರಾನ್​ ಸುಪ್ರೀಂ ಲೀಡರ್ ಖಮೇನಿಗೆ ಜೀವಭಯ.. ಉತ್ತರಾಧಿಕಾರಿ ಹುಡುಕಾಟ, ರೇಸ್​ನಲ್ಲಿ ನಾಲ್ವರು..!
Advertisment
  • ಇಸ್ರೇಲ್-ಇರಾನ್ ಕದನ ವಿರಾಮ ಘೋಷಣೆ ಬಳಿಕ ಪ್ರತಿಕ್ರಿಯೆ
  • ‘US ಸರ್ವಾಧಿಕಾರದ ವಿರುದ್ಧ ಇರಾನ್ ಗೆದ್ದಿದ್ಕೆ ಧನ್ಯವಾದ’
  • ಟ್ರಂಪ್ ಬಗ್ಗೆ ಇರಾನ್ ಸುಪ್ರೀಂ ಲೀಡರ್ ಖಮೇನಿ ಹೇಳಿದ್ದೇನು?

ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಸ್ರೇಲ್ ವಿರುದ್ಧ ಇರಾನ್ ಗೆದ್ದಿದೆ. ಇಸ್ಲಾಮಿಕ್ ರಿಪಬ್ಲಿಕ್ ಅಮೆರಿಕಕ್ಕೆ ಕಪಾಳಮೋಕ್ಷ ಮಾಡಿದೆ ಅಂತ ಪಂಚ್ ನೀಡಿದ್ದಾರೆ. ಎಕ್ಸ್​​ನಲ್ಲಿ ಸರಣಿ ಪೋಸ್ಟ್ ಮಾಡಿರೋ ಖಮೇನಿ ಟ್ರಂಪ್ ಒಬ್ಬ ಶೋ ಮ್ಯಾನ್ ಅಂತ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

‘ಕಪಾಳಕ್ಕೆ ಬಾರಿಸಿದ್ದೇವೆ’
ಅಮೆರಿಕದ ಸರ್ವಾಧಿಕಾರದ ವಿರುದ್ಧ ಇರಾನ್ ಗೆದ್ದಿದ್ದಕ್ಕೆ ಧನ್ಯವಾದಗಳು. ಡೊನಾಲ್ಡ್‌ ಟ್ರಂಪ್‌ ಬೆಂಬಲದೊಂದಿಗೆ ನಮ್ಮ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌ ವಿರುದ್ಧ ಇರಾನ್‌ ವಿಜಯ ಸಾಧಿಸಿದೆ. ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ ಅಮೆರಿಕಕ್ಕೂ ಕಾಪಾಳ ಮೋಕ್ಷ ಮಾಡಿದ್ದೇವೆ. ಅಮೆರಿಕ ಮಧ್ಯ ಪ್ರವೇಶ ಮಾಡದಿದ್ದರೆ ಇಷ್ಟೊತ್ತಿಗೆ ಯಹೂದಿ ಆಡಳಿತವನ್ನು ಸಂಪೂರ್ಣ ನಾಶಪಡಿಸುತ್ತಿದ್ದೆವು. ಇಸ್ರೇಲ್‌ನ ಪ್ರಸ್ತುತ ಆಡಳಿತವನ್ನು ಉಳಿಸಿದ್ದನ್ನು ಬಿಟ್ಟರೆ ಟ್ರಂಪ್‌ಗೆ ಮತ್ತೇನನ್ನೂ ಮಾಡಲು ಸಾಧ್ಯವಾಗಿಲ್ಲ, ಅಮೆರಿಕದ ನಿರ್ದಿಷ್ಟ ಗುರಿ ಈಡೇರಿಲ್ಲ. ಸಂಘರ್ಷ ಕೊನೆಗಾಣಿಸುವ ವಿಚಾರದಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತಷ್ಟು ಬುದ್ಧಿವಂತಿಕೆ ಪ್ರದರ್ಶಿಸಬೇಕಿದೆ-ಆಯಾತುಲ್ಲಾ ಅಲಿ ಖಮೇನಿ, ಇರಾನ್ ಸುಪ್ರೀಂ ಲೀಡರ್

ಬಳಿಕ ಸಾರ್ವಜನಿಕವಾಗಿ ವಿಡಿಯೋ ಹೇಳಿಕೆ ನೀಡಿರುವ ಖಮೇನಿ ನಮ್ಮ ಸಾಂಸ್ಕೃತಿಕ ಹಾಗೂ ನಾಗರಿಕ ಬೇರುಗಳು ಅಮೆರಿಕಕ್ಕಿಂತ ಸಾವಿರ ವರ್ಷಗಳಷ್ಟು ಹಳೆಯವು, ಇರಾನ್ ಮತ್ತೊಂದು ದೇಶಕ್ಕೆ ತಲೆಬಾಗಬೇಕೆನ್ನುವುದು ಅವರ ಭ್ರಮೆ, ಹಾಸ್ಯಾಸ್ಪದ ಅಂತ ಮಾತಿನ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ‘ನೀವು ಇಲ್ಲದಿದ್ದರೆ..’ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಪತ್ನಿ ಬಗ್ಗೆ ಶುಭಾಂಶು ಭಾವನಾತ್ಮಕ ಮಾತು.. ಹೇಳಿದ್ದೇನು?

publive-image

ಗಾಜಾ ಮೇಲೆ ಇಸ್ರೇಲ್ ದಾಳಿ.. 71 ಮಂದಿ ನಿಧನ

ಇತ್ತ ಇರಾನ್ ವಿರುದ್ಧ ಕದನ ವಿರಾಮ ಇದ್ದು ಅತ್ತ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ದಾಳಿ ಮಾಡಿದೆ. ಖಾನ್ ಯೂನಿಸ್ ಹಾಗೂ ಶೇಖ್ ರಾಡ್ಆನ್ ಪ್ರದೇಶದಲ್ಲಿರುವ ನಿರಾಶ್ರಿತರ ಕುಟುಂಬಗಳು ಹಾಗೂ ಸಂತ್ರಸ್ತರ ಶಿಬಿರಗಳ ಮೇಲೆ ದಾಳಿ ನಡೆದಿದ್ದು ಇಸ್ರೇಲಿ ದಾಳಿಯಲ್ಲಿ 70ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಇಸ್ರೇಲ್ ದಾಳಿಗೆ ಅಕ್ಟೋಬರ್ 7, 2023ರಿಂದ ಇಲ್ಲಿಯವರೆಗೆ ಗಾಜಾದಲ್ಲಿ 56,259 ಮಂದಿ ಪ್ರಾಣ ಕಳೆದುಕೊಂಡಿದ್ದು 1 ಲಕ್ಷ 32 ಲಕ್ಷ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಅಮೆರಿಕನ್ನರ ಹೃದಯಕ್ಕೆ ಹೊಡೆದಂತಿರುವ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹೇಳಿಕೆಗಳು ಅಮೆರಿಕ-ಇರಾನ್ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಜಟಿಲಗೊಳಿಸಬಹುದು ಅಂತನೇ ವಿಶ್ಲೇಷಿಸಲಾಗಿದೆ.. ಇನ್ನು ಅಮೆರಿಕದ ಪ್ರತಿಕ್ರಿಯೆ ಹೊರಬೀಳಬೇಕಿದೆ.

ಇದನ್ನೂ ಓದಿ: ನ್ಯೂಯಾರ್ಕ್​ ಮೇಯರ್ ಎಲೆಕ್ಷನ್​​ನಲ್ಲಿ ಭಾರತ ಮೂಲದ ಮಮ್ದಾನಿಗೆ ಗೆಲುವು.. ಕಂಗನಾ ಆಕ್ರೋಶ, ಹೇಳಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment