/newsfirstlive-kannada/media/post_attachments/wp-content/uploads/2025/06/IRAN-5.jpg)
ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದೆ. ಇರಾನ್ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸ್ತಿದ್ದಂತೆ ಯುದ್ಧೋನ್ಮದ ಮತ್ತಷ್ಟು ಬಿಗಡಾಯಿಸಿದೆ. ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಇರಾನ್ ವಿಶ್ವಕ್ಕೆ ಶಾಕ್ ಕೊಡಲು ಮುಂದಾಗಿದೆ. ಪ್ರಮುಖ ತೈಲ ಹಡಗು ಮಾರ್ಗ ಹೊರ್ಮುಜ್ ಜಲಸಂಧಿ ಮುಚ್ಚಲು ಮುಂದಾಗಿದೆ. ಒಂದು ವೇಳೆ ಹೊರ್ಮುಜ್ ಜಲಸಂಧಿ ಬಂದ್ ಆದ್ರೆ ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.
ಇರಾನ್ ಬೆದರಿಕೆ
ಮಧ್ಯಪ್ರಾಚ್ಯದಲ್ಲಿ ಮಿಸೈಲ್ಗಳ ಮಹಾಸಮರಕ್ಕೆ ದೊಡ್ಡಣ್ಣ ಅಮೆರಿಕ ಎಂಟ್ರಿ ಕೊಟ್ಟಿದ್ದು ಇರಾನ್ನ 3 ಪರಮಾಣು ನೆಲೆಗಳನ್ನು ಉಡೀಸ್ ಮಾಡಿದೆ. ಇದ್ರಿಂದ ರೊಚ್ಚಿಗೆದ್ದಿರುವ ಇರಾನ್ ಸರ್ಕಾರ ಪ್ರಮುಖ ತೈಲ ಹಡಗು ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲು ಮುಂದಾಗಿದೆ. ಇದಕ್ಕೆ ಸಂಸತ್ನಲ್ಲಿ ಅನುಮೋದನೆ ಕೂಡ ಸಿಕ್ಕಿದೆ. ಜಾಗತಿಕವಾಗಿ ತೈಲ ಸಾಗಣೆಗೆ ಪ್ರಮುಖ ಹೆದ್ದಾರಿ ಆಗಿರುವ ಹೊರ್ಮುಜ್ ಬಂದ್ ಮಾಡುವ ತೀರ್ಮಾನ ತೈಲ ಆಮದು ರಾಷ್ಟ್ರಗಳಿಗೆ ಬಿಗ್ ಶಾಕ್ ನೀಡಿದೆ. ಬಂದ್ ಕ್ರಮ ಕುರಿತು ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯು ಸದ್ಯ ತೀರ್ಮಾನ ಕೈಗೊಳ್ಳೋದಷ್ಟೆ ಬಾಕಿ..
ಹೊರ್ಮುಜ್ಗೆ ದಿಗ್ಬಂಧನ!
ಹೊರ್ಮುಜ್ ಜಲಸಂಧಿ ಪ್ರಮುಖ ಪಾಯಿಂಟ್‌ಗಳಲ್ಲಿ ಒಂದಾಗಿದ್ದು 33 ಕಿ.ಮೀ ಅಗಲ ಇದೆ ಜೊತೆಗೆ 3 ಕಿ.ಮೀ ನಡುವೆ ಉಭಯ ಮಾರ್ಗಗಳಲ್ಲಿ ಹಡಗು ಸಂಚಾರ ನಡೆಯುತ್ತಿದೆ.. ಇದು ಒಮನ್, ಇರಾನ್ ನಡುವೆ ಹಾದು ಹೋಗಲಿರುವ ಜಲಸಂಧಿ ಆಗಿದ್ದು, ಗಲ್ಫ್ ರಾಷ್ಟ್ರಗಳು ಹಾಗೂ ಅರಬ್ಬಿ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.. ವಿಶ್ವದ ವಿವಿಧ ರಾಷ್ಟ್ರಗಳಿಗೆ ಈ ಮಾರ್ಗದ ಮೂಲಕವೇ ಶೇ.30ರಷ್ಟು ತೈಲ, ಅನಿಲ ಪೂರೈಕೆ ಆಗುತ್ತಿದೆ. ಪ್ರತಿದಿನ ಈ ಮಾರ್ಗದಲ್ಲಿ 2.1 ಕೋಟಿ ಬ್ಯಾರಲ್ ತೈಲ ಪೂರೈಕೆ ಆಗಲಿದೆ.
ಇದನ್ನೂ ಓದಿ: ಟ್ರೋಫಿ ಗೆದ್ದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಸೇರಿದ RCB ತಂಡದ ಸ್ಫೋಟಕ ಬ್ಯಾಟರ್..!
ಭಾರತಕ್ಕೆ ಎಷ್ಟು ಲಾಸ್..?
- ಹೊರ್ಮುಜ್ ಜಲಸಂಧಿ ಬಂದ್ ಆದ್ರೆ ಭಾರತದ ಮೇಲೆ ಎಫೆಕ್ಟ್
- ಭಾರತಕ್ಕೆ ಪ್ರತಿದಿನ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದು
- ಭಾರತದ ಕಚ್ಚಾ ತೈಲ ಬೇಡಿಕೆಯ ಶೇ.85ರಷ್ಟು ಆಮದು ಆಗಲಿದೆ
- ತೈಲ ಬಳಕೆ, ಆಮದು ರಾಷ್ಟ್ರಗಳಲ್ಲಿ ವಿಶ್ವದಲ್ಲೇ ಭಾರತಕ್ಕೆ 3ನೇ ಸ್ಥಾನ
- ಒಂದು ವೇಳೆ ಈ ಮಾರ್ಗ ಮುಚ್ಚಿದ್ರೆ ತೈಲ ಸಾಗಾಟ ವೆಚ್ಚ ಹೆಚ್ಚಳ
- ತೈಲ ಬೆಲೆ ಏರಿಕೆ, ಹಣದುಬ್ಬರ ಹೆಚ್ಚಳಕ್ಕೂ ಕಾರಣ ಆಗಬಹುದು
- ಅಂದಾಜು 51 ಲಕ್ಷ ಬ್ಯಾರಲ್ ಕಚ್ಚಾ ತೈಲು ವಿದೇಶಗಳಿಂದ ಆಮದು
- ಜಲಸಂಧಿ ಬಂದ್ ಆದ್ರೆ ತೈಲ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ
ಸದ್ಯ 90 ಡಾಲರ್ ಆಸುಪಾಸಿರುವ ಬ್ಯಾರೆಲ್ ಕಚ್ಚಾ ತೈಲದ ಬೆಲೆ
ಹೊರ್ಮುಜ್ ಕೆನಾಲ್ ಮುಚ್ಚದಂತೆ ಅಮೆರಿಕ ಎಚ್ಚರಿಕೆ
ಈ ಮಧ್ಯೆ ಹೊರ್ಮುಜ್ ಜಲಸಂಧಿ ಮುಚ್ಚಲು ಮುಂದಾಗಿರುವ ಇರಾನ್ಗೆ ಅಮೆರಿಕಾ ಎಚ್ಚರಿಕೆ ನೀಡಿದೆ. ಇದು ಇರಾನ್ನ ಆರ್ಥಿಕ ಆತ್ಮಹತ್ಯೆ ಅಂತ ಅಮೆರಿಕಾ ಬುದ್ಧಿಮಾತು ಹೇಳಿದೆ. ಇತ್ತ ಅಮೆರಿಕ ದಾಳಿಯಿಂದ ದೃತಿಗೆಟ್ಟಿರುವ ಇರಾನ್, ತನ್ನ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿರುವ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಮುಂದೆ ಆಗುವುದಕ್ಕೆಲ್ಲಾ ಅಮೆರಿಕವೇ ಹೊಣೆ ಅಂತ ಆರ್ಭಟಿಸಿದೆ. ಸರಣಿ ದಾಳಿಗಳನ್ನು ನಡೆಸ್ತಿರೋ ಇರಾನ್, ಇಸ್ರೇಲ್ನಲ್ಲಿ ಸೈರನ್ ಮೊಳಗಿಸಿದೆ. ಕೆಲ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ಒಟ್ಟಾರೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ವಿಶ್ವದ ಹಲವು ರಾಷ್ಟ್ರಗಳು ವೈಬ್ರೇಟ್ ಆಗುವಂತೆ ಮಾಡಿದೆ.. ಯುದ್ಧ ಹೀಗೆಯೇ ಮುಂದುವರಿದ್ರೆ ಮತ್ತಷ್ಟು ದೀರ್ಘ ಪರಿಣಾಮಗಳನ್ನು ತಂದೊಡ್ಡಲಿದೆ.
ಇದನ್ನೂ ಓದಿ: ಅಮೆರಿಕ ದಾಳಿ ಬೆನ್ನಲ್ಲೇ ಯುದ್ಧಕ್ಕೆ ಹೊಸ ತಿರುವು.. ಪುಟಿನ್ ಭೇಟಿಯಾಗಿ ‘Game is not over’ ಎಂದ ಇರಾನ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ