/newsfirstlive-kannada/media/post_attachments/wp-content/uploads/2025/06/IRAN-7.jpg)
ಒಡಲೊಳಗೆ ತೈಲವನ್ನೇ ತುಂಬಿಕೊಂಡು ಜಗತ್ತಿಗೆ ತೈಲ ಉಣಿಸುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದು. ಇರಾನ್​ನ ನ್ಯೂಕ್ಲಿಯರ್ ಪವರ್ ಹಾಗೂ ಸಂಶೋಧನೆ ವಿಶ್ವದ ರಾಷ್ಟ್ರಗಳ ಅಸ್ತಿತ್ವಕ್ಕೆ ಹಾಕಿದ ಬೆದರಿಕೆ ಆಗಿದೆ. ಜಗತ್ತಿನ ಶಾಂತಿಗೆ ಅಪಾಯ ತರಬರಲ್ಲ ನಡೆ ಎಂದು ಕಿಡಿಕಾರಿರುವ ಇಸ್ರೇಲ್-ಅಮೆರಿಕ ದೋಸ್ತಿಗಳು, ಇರಾನ್ ವಿರುದ್ಧ ಸಮರ ಸಾರಿವೆ. ಈ ಯುದ್ಧ ಜಾಗತಿಕವಾಗಿ ನೂರಾರು ಪರಿಣಾಮ ಬೀರುತ್ತಿವೆ.
ಇದನ್ನೂ ಓದಿ: ಹೊರ್ಮುಜ್ ಜಲಸಂಧಿ ಮುಚ್ಚಲು ಇರಾನ್​ ನಿರ್ಧಾರ; ಭಾರತ ಸೇರಿ ಹಲವು ರಾಷ್ಟ್ರಗಳಿಗೆ ಭಾರೀ ಪೆಟ್ಟು..!
/newsfirstlive-kannada/media/post_attachments/wp-content/uploads/2025/06/IRAN-5.jpg)
ಇದೀಗ, ಅಮೆರಿಕ ದಾಳಿ ವಿರುದ್ಧ ತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಇರಾನ್ ವಿಶ್ವಕ್ಕೆ ಶಾಕ್ ಕೊಡಲು ಮುಂದಾಗಿದೆ. ಪ್ರಮುಖ ತೈಲ ಹಡಗು ಮಾರ್ಗ ಹೊರ್ಮುಜ್ ಜಲಸಂಧಿ ಮುಚ್ಚಲು ಮುಂದಾಗಿದೆ. ಒಂದು ವೇಳೆ ಹೊರ್ಮುಜ್ ಜಲಸಂಧಿ ಬಂದ್ ಆದ್ರೆ ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.
ಹೊರ್ಮುಜ್ ಬಂದ್​​​ ಎಫೆಕ್ಟ್​​ ಏನು?
- ಪರ್ಷಿಯನ್ ಕೊಲ್ಲಿ- ಓಮನ್ ಕೊಲ್ಲಿಯ ನಡುವಿನ ಜಲಸಂಧಿ
- ಪರ್ಷಿಯನ್ ಕೊಲ್ಲಿಯಿಂದ ಏಕೈಕ ಸಮುದ್ರ ಮಾರ್ಗ ಸಂಪರ್ಕ
- ವಿಶ್ವದ ಅತ್ಯಂತ ಕಾರ್ಯತಂತ್ರದ ಪ್ರಮುಖ ಚಾಕ್ ಪಾಯಿಂಟ್
- ಸೌದಿ, ಯುಎಇ, ಇರಾಕ್, ಕುವೈತ್‌ಗೆ ಪ್ರಾಥಮಿಕ ರಫ್ತು ಮಾರ್ಗ
- ವಿಶ್ವದ ದೈನಂದಿನ ಬಳಕೆ 20 ಪ್ರತಿಶತ ತೈಲ ಸಾಗಿಸುವ ಮಾರ್ಗ
- ಸುಮಾರು 20 ಮಿಲಿಯನ್ ಬ್ಯಾರೆಲ್ ಹಾದುಹೋಗಲು ಅನುವು
- ಜಲಸಂಧಿ ಸ್ಥಗಿತ ಆರ್ಥಿಕ, ರಾಜಕೀಯ, ಲಾಜಿಸ್ಟಿಕ್ ತೊಂದರೆ
- ಜಲಸಂಧಿ ಕಾರಣಕ್ಕೆ ಇರಾನ್ - ಇತರ ಗಲ್ಫ್​ ರಾಷ್ಟ್ರಗಳಲ್ಲಿ ತಿಕ್ಕಾಟ
ಇದನ್ನೂ ಓದಿ: ಅಮೆರಿಕ ದಾಳಿ ಬೆನ್ನಲ್ಲೇ ಯುದ್ಧಕ್ಕೆ ಹೊಸ ತಿರುವು.. ಪುಟಿನ್ ಭೇಟಿಯಾಗಿ ‘Game is not over’ ಎಂದ ಇರಾನ್..!
/newsfirstlive-kannada/media/post_attachments/wp-content/uploads/2025/06/IRAN-4.jpg)
ಭಾರತದ ಮೇಲೆ ಏನೆಲ್ಲಾ ಪರಿಣಾಮ?
- ಭಾರತದ ತೈಲ ಆಮದಿನ ಮೂರನೇ ಎರಡರಷ್ಟು ಭಾಗ ಸಾಗಾಟ
- 5.5 ಮಿಲಿಯನ್ ಬ್ಯಾರೆಲ್ ತೈಲದಲ್ಲಿ, 1.5 ಮಿಲಿಯನ್ ಸಾಗಾಣೆ
- LNG ಆಮದಿನ ಅರ್ಧದಷ್ಟು ಭಾಗವು ಜಲಸಂಧಿಯಲ್ಲಿ ಸಾಗಾಟ
- ಬ್ಯಾರೆಲ್ ಕಚ್ಚಾ ತೈಲದ ಬೆಲೆ 90 ಡಾಲರ್​ನಿಂದ 105ಕ್ಕೆ ಏರಿಕೆ?
- ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆ ಏರಿಕೆ ಭೀತಿ
- ಉತ್ಪಾದನೆ, ಸಾರಿಗೆ ಮತ್ತು ಸೇವಾ ವಲಯದ ವೆಚ್ಚ ಹೆಚ್ಚಾಗಲಿದೆ
- ಹಣದುಬ್ಬರಕ್ಕೆ ಕಾರಣವಾಗಿ ಆರ್ಥಿಕ ಬೆಳವಣಿಗೆ ಕುಂಠಿತ ಆತಂಕ
- ಭಾರತದ ವಿದೇಶೀ ವಿನಿಮಯ ಕಾಯ್ದಿರಿಕೆ ಮೇಲೆ ಒತ್ತಡ ಹೆಚ್ಚಳ
- ಇದರಿಂದ ರೂಪಾಯಿಯ ಮೌಲ್ಯ ಕುಸಿಯುವ ಆತಂಕವೂ ಇದೆ
- ಸರಕು ಸಾಗಣೆ ವಿಳಂಬವಾಗಿ ವ್ಯಾಪಾರಕ್ಕೆ ತೊಂದರೆಯಾಗಲಿದೆ
- ತೈಲ ಬೆಲೆ ಏರಿಕೆಯಿಂದ ಷೇರು ಮಾರುಕಟ್ಟೆಗಳು ಕುಸಿಯಬಹುದು
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us