ಕೋಮಾಗೆ ಜಾರಿದ ಇರಾನ್​ನ ಸುಪ್ರೀಂ ಲೀಡರ್​? ಖಮೇನಿ ಆಫೀಸ್​ನಿಂದ ಬಂದ ಮಾಹಿತಿ ಏನು?

author-image
Gopal Kulkarni
Updated On
ಕೋಮಾಗೆ ಜಾರಿದ ಇರಾನ್​ನ ಸುಪ್ರೀಂ ಲೀಡರ್​? ಖಮೇನಿ ಆಫೀಸ್​ನಿಂದ ಬಂದ ಮಾಹಿತಿ ಏನು?
Advertisment
  • ಇರಾನ್​ನ ಸುಪ್ರೀಂ ನಾಯಕ ಖಮೇನಿ ಕೋಮಾಗೆ ಜಾರಿದ್ದು ನಿಜವಾ?
  • ಖಮೇನಿ ಪುತ್ರನಿಗೆ ಪಟ್ಟ ಕಟ್ಟಲು ನಡೆಯುತ್ತಿಯಾ ಇರಾನ್​ನಲ್ಲಿ ತಯಾರಿ
  • ಖಮೇನಿ ಕಚೇರಿಯ ಎಕ್ಸ್ ಖಾತೆಯಲ್ಲಿನ ಫೋಟೋ ಹೇಳುತ್ತಿರುವುದೇನು?

ಸದ್ಯ ಇರಾನ್ ಇಸ್ರೇಲ್ ನಡುವೆ ಒಂದು ಭೀಕರ ಕದನ ಶುರುವಾಗಿದೆ. ಹಿಜ್ಬುಲ್ಲಾ ಹಾಗೂ ಹಮಾಸ್ ಭಯೋತ್ಪಾದಕ ಪ್ರಮುಖ ಮುಖಂಡರನ್ನು ಇಸ್ರೇಲ್ ಒಂದು ಕಡೆ ಸಂಹಾರ ಮಾಡುತ್ತಾ ಬರುತ್ತಿದ್ದಂತೆ ಈ ಉಭಯ ದೇಶಗಳ ಸಂಬಂಧದ ನಡುವೆ ಹಿಂದೆಂದಿಗಿಂತಲೂ ದೊಡ್ಡ ಬಿರುಕೊಂದು ಢಾಳವಾಗಿ ಕಾಣುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇರಾನ್​ನ ಸುಪ್ರೀಂ ಲೀಡರ್, ಆಯಾತೊಲ್ಹಾ ಅಲಿ ಖಮೇನಿ ಕೋಮಾಗೆ ಜಾರಿದ್ದಾರೆ. ಅವರ ಮಗನಿಗೆ ಪಟ್ಟ ಕಟ್ಟುವ ಎಲ್ಲಾ ತಯಾರಿಗಳು ನಡೆದಿವೆ ಎಂಬ ಸುದ್ದಿ ದೊಡ್ಡದಾಗಿ ಹರಿದಾಡಿದ್ದವು. ಇದನ್ನು ಇಡೀ ವಿಶ್ವವೇ ನಿಜವೆಂದೂ ಕೂಡ ನಂಬಿತ್ತು. ಸದ್ಯ ಈ ಎಲ್ಲಾ ಊಹಾಪೋಹಗಳಿಗೆ ಖಮೇನಿ ಆಫೀಸ್​ನಿಂದ ಸ್ಪಷ್ಟನೆ ಬಂದಿದೆ.

ಅಂತಾರಾಷ್ಟ್ರೀಯದ ಮಟ್ಟದ ಮಾಧ್ಯಮಗಳೆಲ್ಲಾ 85 ವರ್ಷದ ಖಮೇನಿ ಕೋಮಾಗೆ ಜಾರಿದ್ದಾರೆ ಎಂದು ದೊಡ್ಡದಾಗಿ ಸುದ್ದಿ ಬಿತ್ತರಿಸಿದ್ದವು. ಖಮೇನಿ ಸ್ಥಿತಿ ತುಂಬಾ ಗಂಭೀರವಿದೆ ಎಂದು ಕಳೆದ ಒಂದು ತಿಂಗಳಿನಿಂದ ಸುದ್ದಿಗಳು ಬಿತ್ತರವಾಗುತ್ತಲೇ ಇದ್ದವು. ಸದ್ಯ ಖಮೇನಿ ಕಚೇರಿಯಿಂದ ಒಂದು ಫೋಟೊ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆಯಲಾಗಿದೆ.

ಇದನ್ನೂ ಓದಿ:ಟೈಟಾನಿಕ್​​​ ದುರಂತದಲ್ಲಿ ಸಾಹಸ ಮೆರೆದಿದ್ದ ಕ್ಯಾಪ್ಟನ್​​; ಇವ್ರ ಗೋಲ್ಡ್​​ ವಾಚ್​​ ದಾಖಲೆ ಬೆಲೆಗೆ ಹರಾಜು

ಈ ಫೋಟೋದಲ್ಲಿ ಖಮೇನಿ ಲೆಬನಾನ್​ನಲ್ಲಿ ರಾಯಭಾರಿ ಮೊಜತಬ್ ಅಮಾನಿ ಅವರನ್ನು ಭೇಟಿಯಾಗಿ ಕೈಕುಲುವು ಚಿತ್ರವಿದೆ. ಖಮೇನಿ ಕಚೇರಿಯ ಎಕ್ಸ್ ಖಾತೆಯಲ್ಲಿ ಈ ಒಂದು ಫೋಟೋವನ್ನು ಅಪ್​ಲೋಡ್​ ಮಾಡಲಾಗಿದ್ದು. ಅದರಲ್ಲಿ ಅಡಿಬರಹವನ್ನು ಕೂಡ ಬರೆಯಲಾಗಿದೆ.


">November 17, 2024


ಇಸ್ಲಾಮಿಕ್ ರೆವಲ್ಯೂಷನ್​ನ ಪ್ರಮುಖ ನಾಯಕ ಅಯಾತ್ಹೊಲ್ಲಾ ಖಮೇನಿ ಇರಾನ್​ನ ಲೆಬಾನಾನ್​ ರಾಯಭಾರಿ ಮಜತಾಬ್ ಅಮಾನಿಯವವರನ್ನು ಇಂದು ಭೇಟಿ ಮಾಡಿದ್ದಾರೆ. ಎಂದಿನಂತೆ ಇದು ಒಂದು ಸಾಧಾರಣ ಬೇಟಿಯಾಗಿದೆ ಎಂದು ಬರೆಯಲಾಗಿದೆ.

ಇದನ್ನೂ ಓದಿ:ಟ್ರಂಪ್​ಗೆ ಗೆಲುವು; ಮಹಾಕಾಳೇಶ್ವರನಿಗೆ ಡಾಲರ್​ಗಳ ನೋಟಿನ ಹಾರ ಅರ್ಪಣೆ; ಯಾರಿಂದ ಸಲ್ಲಿಕೆಯಾಯ್ತು ಗೊತ್ತಾ?

ಇತ್ತೀಚೆಗೆ ಲೆಬನಾನ್ ಮೇಲೆ ನಡೆದ ದಾಳಿಯಲ್ಲಿ ಅಮಾನಿ ಕೊಂಚ ಗಾಯಗೊಂಡಿದ್ದರು. ಅವರನ್ನು ಖಮೇನಿ ಭೇಟಿಯಾಗಿರುವ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಈ ಹಿಂದೆ ಹರಿದಾಡಿದ ಎಲ್ಲಾ ಸುದ್ದಿಗಳು ಸುಳ್ಳು ಎಂಬುದನ್ನು ಖಮೇನಿ ಕಚೇರಿ ಸ್ಪಷ್ಟಪಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment