ಇರಾನ್​ನ ಟಾಪ್ ಕಮಾಂಡರ್ ಮೊಸಾದ್ ಏಜೆಂಟ್​? ಇಂತಹದೊಂದು ಅನುಮಾನ ಬಂದಿದ್ದೇಕೆ?

author-image
Gopal Kulkarni
Updated On
ಇರಾನ್​ನ ಟಾಪ್ ಕಮಾಂಡರ್ ಮೊಸಾದ್ ಏಜೆಂಟ್​? ಇಂತಹದೊಂದು ಅನುಮಾನ ಬಂದಿದ್ದೇಕೆ?
Advertisment
  • ಇರಾನ್​ಗೆ ಮತ್ತೊಂದು ಮರ್ಮಾಘಾತ ಕೊಟ್ಟಿತಾ ಇಸ್ರೇಲ್​ನ ಮೊಸಾದ್​​
  • ಇರಾನ್​ ಅಂಗಳದಲ್ಲಿಯೇ ಇದ್ದುಕೊಂಡು ಅದಕ್ಕೆ ಮೃತ್ಯುವಾದ್ನಾ ಖಾನಿ
  • ಇಸ್ಮಾಯಲ್ ಖಾನಿ ಮೇಲೆ ಈ ಒಂದು ಅನುಮಾನ ಇರಾನ್​ಗೆ ಬಂದಿದ್ದೇಕೆ?

ಸದ್ಯ ಇರಾನ್ ಇಸ್ರೇಲ್ ನಡೆವೇ ನೇರವಾದ ಯುದ್ಧವೊಂದ ಜಾರಿಯಲ್ಲಿದೆ. ಇರಾನ್ ಅಂಗಳಕ್ಕೆ ನುಗ್ಗಿ ಹಮಾಸ್ ನಾಯಕನನ್ನು ಇಸ್ರೇಲ್ ಹೊಡೆದು ಹಾಕಿದ್ದು. ಹಿಜ್ಬುಲ್ಲಾ ಮುಖಂಡನ ಹತ್ಯೆ, ಈ ಎಲ್ಲದಕ್ಕೂ ಕಾರಣ ಇರಾನ್​ನ ಟಾಪ್​ ಕಮಾಂಡರ್ ಇಸ್ಮಾಯಿಲ್ ಖಾನಿ ಎಂಬುವ ಅನುಮಾನವೊಂದು ಈಗ ಇರಾನ್​ಗೆ ಬಂದಿದೆ. ಇಸ್ಲಾಯಿಲ್ ಖಾನಿ ಲೆಬನಾನ್​ಗೆ ಪ್ರವಾಸ ಬೆಳೆಸಿದಾಗಲೇ ಸಯ್ಯದ್ ಹಸನ್ ನಸ್ರುಲ್ಲಾನ ಹತ್ಯೆಯಾಗಿತ್ತು. ಅಂದಿನಿಂದ ಇಸ್ಮಾಯಿಲ್ ಖಾನಿ ಇರಾನ್​ನಿಂದ ಕಣ್ಮರೆಯಾಗಿದ್ದಾನೆ. ಈಗ ಇರಾನ್​ಗೆ ಮತ್ತೊಂದು ಮರ್ಮಾಘಾತವಾದಂತಾಗಿದೆ. ಇಸ್ಮಾಯಿಲ್ ಖಾನಿ ಮೊಸಾದ್​ನ ಏಜೆಂಟ್ ಆಗಿದ್ದ ಎನ್ನುವ ಅನುಮಾನ ಶುರುವಾಗಿದೆ. ಇಸ್ರೇಲ್ ಈ ಹಿಂದೆ ನಡೆಸಿದ ಆಪರೇಷನ್​ಗಳೆಲ್ಲ ಇಸ್ಮಾಯಿಲ್ ಖಾನಿಯಿಂದಲೇ ಯಶಸ್ವಿಯಾಗಿರುವ ಬಗ್ಗೆ ಇರಾನ್​ಗೆ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:ಇರಾಕ್​ನಿಂದ ಮಿಗ್​ 21 ವಿಮಾನ ಕದ್ದಿದ್ದು ಹೇಗೆ ಇಸ್ರೇಲ್​? ಇದು ಮೊಸಾದ್​ನ ಆಪರೇಷನ್ ಡೈಮಂಡ್ ಕಥೆ

ಮೂಲಗಳ ಪ್ರಕಾರ ಇಸ್ರೇಲ್ ಹಿಜ್ಬುಲ್ಲಾದ ಹಿರಿಯ ಮುಖಂಡ ಹಶೀಮ್ ಸಫೀಯುದ್ದಿನ್ ಇರುವ ಪ್ರದೇಶದ ಮೇಲೆ ಏರ್​​ಸ್ಟ್ರೈಕ್ ಮಾಡಿದಾಗ ಖಾನಿ ಬೀರತ್​ನ ದಕ್ಷಿಣ ಸಬ್​ಬರ್ಸ್​ನಲ್ಲಿ ದಹಿಯೇಹ್​ನಲ್ಲಿದ್ದಾನೆ ಎಂದು ಭಾವಿಸಲಾಗಿತ್ತು. ಆದ್ರೆ ಅಲ್ಲಿಯ ಮೂಲಗಳು ಹೇಳುವ ಪ್ರಕಾರ ಇಲ್ಲಿಯವರೆಗೂ ಖಾನಿ ಸಫೀಯುದ್ಧೀನ್​ನನ್ನು ಭೇಟಿಯೇ ಮಾಡಿಲ್ಲ ಎಂದು ಹೇಳಾಗಿದೆ.

ಯಾರೂ ಇಸ್ಮಾಯಿಲ್ ಖಾನಿ ?
2020ರಲ್ಲಿ ಯುಎಸ್​ನಿಂದ ಖಾಸೀಮ್ ಸೋಲೋಮನಿಯನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ಇಸ್ಮಾಯಿಲ್ ಖಾನಿಯನ್ನು ಬಂಡಾಯ ಗಾರ್ಡ್ಸ್​ ಕ್ವಾರ್ಡ್​ನ ಮುಖ್ಯಸ್ಥನ್ನಾಗಿ ನೇಮಕ ಮಾಡಲಾಗಿತ್ತು. ತೆಹ್ರಾನ್​​ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಮಧ್ಯಪ್ರಾಚ್ಯದ ಎಲ್ಲಾ ಇಸ್ಲಾಂ ರಾಷ್ಟ್ರಗಳ ಒಪ್ಪಿಗೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿತ್ತು.
ಆದ್ರೆ ಸೋಲೆಮನಿ ಇರುವಾಗ ಇರಾನ್​ನ ಪ್ರಾದೇಶಿಕ ಮೈತ್ರಿಗಳೊಂದಿಗೆ ಇದ್ದ ಬಾಂಧವ್ಯ ಇಸ್ಲಾಯಿಲ್ ಖಾನಿ ಬಂದ ನಂತರ ಇರಲಿಲ್ಲ. ಅವನ ಮಟ್ಟಕ್ಕೆ ಖಾನಿ ಹೋಗಲು ಆಗಲಿಲ್ಲ.

ಇದನ್ನೂ ಓದಿ:ಸಾಹಿತ್ಯದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟ ಮೊದಲ ಮಹಿಳೆ.. ಯಾರು ಈ ಹಾನ್ ಕಾಂಗ್?

ಇಸ್ಮಾಯಿಲ್ ಖಾನಿ ನೇತೃತ್ವದಲ್ಲಿ ಇರಾನ್​ ಜೊತೆ ಕೈಜೋಡಿಸಿದ್ದ ಹಿಜ್ಬುಲ್ಲಾ ಹಾಗೂ ಇರಾನ್ ಸೇನಾಪಡೆಯಗಳು ಅನೇಕ ರೀತಿಯ ಒತ್ತಡಗಳನ್ನು ಎದುರಿಸಿದವು. ಪ್ರಮುಖವಾಗಿ ಇಸ್ರೇಲಿ ಸೇನಾಪಡೆಗಳಿಂದ. ಈ ಹಿಜ್ಬುಲ್ಲಾ ಹಾಗೂ ಇರಾನ್ ಸೇನಾಪಡೆಗಳಿಗೆ ಸಾಕಷ್ಟು ತೊಂದರೆಯಾಯ್ತು. ಸೋಲೆಮನಿ ಇದ್ದ ಸಮಯಕ್ಕೆ ಹೋಲಿಸಿ ನೋಡಿದಾಗ ವಿಪರೀತ ಬದಲಾವಣೆಗಳು ಆಗಿದ್ದವು.

ಒಂದು ಹಂತದಲ್ಲಿ ಈ ಎಲ್ಲಾ ಬಿಂದುಗಳನ್ನು ಒಂದೊಂದಾಗಿ ಸೇರಿಸಿಕೊಂಡು ನೋಡಿದಾಗ ಇರಾನ್​ಗೆ ಇಸ್ಮಾಯಿಲ್ ಖಾನಿ ಇಸ್ರೇಲ್​ನ ಮೊಸಾದ್​ ಏಜೆಂಟ್ ಇರಬಹುದು ಎಂಬ ಒಂದು ಅನುಮಾನ ದಟ್ಟವಾಗಿದೆ. ಒಂದು ಹಂತದಲ್ಲಿ ಸಫೀಯುದ್ದೀನ್ ಮೇಲೆ ದಾಳಿಯಾದ ಸಮಯದಲ್ಲಿಯೇ ಇಸ್ಮಾಯಿಲ್ ಕೂಡ ಅಸುನೀಗಿದ್ದಾನೆ ಎನ್ನಲಾಗಿತ್ತು.ಆದ್ರೆ ಸದ್ಯದ ಅನುಮಾನಗಳನ್ನು ನೋಡಿದ್ರೆ, ತನ್ನ ಕಾರ್ಯವನ್ನು ಸಾಧಿಸಿ ಇಸ್ಮಾಯಿಲ್ ಇಸ್ರೇಲ್​ಗೆ ಹಾರಿರುವ ಅನುಮಾನ ದಟ್ಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment