Advertisment

‘ಮದುವೆ ಮಾಡಲು ಗಂಡಿಗೆ 15 ವರ್ಷ, ಮಹಿಳೆಗೆ 9 ವರ್ಷ ಇದ್ರೆ ಸಾಕು’- ಇರಾಕ್​​ ಮಸೂದೆಯಲ್ಲೇನಿದೆ?

author-image
Gopal Kulkarni
Updated On
‘ಮದುವೆ ಮಾಡಲು ಗಂಡಿಗೆ 15 ವರ್ಷ, ಮಹಿಳೆಗೆ 9 ವರ್ಷ ಇದ್ರೆ ಸಾಕು’- ಇರಾಕ್​​ ಮಸೂದೆಯಲ್ಲೇನಿದೆ?
Advertisment
  • ಇರಾಕ್ ಸಂಸತ್ತಿನಲ್ಲಿ ಮಂಡನೆಯಾದ ವಿವಾದಾತ್ಮಕ ಮಸೂದೆ
  • ಹೊಸ ಮಸೂದೆಯ ವಿರುದ್ಧ ಕಿಡಿಕಾರಿದ ಮಹಿಳಾ ಹಕ್ಕು ಆಯೋಗ
  • ಮದುವೆಯಾಗುವ ಜೋಡಿಯ ವಯಸ್ಸಿನ ಮಿತಿ ಇಳಿಸಿದ ಇರಾಕ್

ಬಾಗ್ದಾದ್: ಇರಾಕ್ ಸಂಸತ್ತಿನಲ್ಲಿ ಮಂಡನೆಯಾದ ಮಸೂದೆಯೊಂದು ಈಗ ಮಾನವ ಹಕ್ಕುಗಳ ಆಯೋಗದ ಕಣ್ಣನ್ನು ಕೆಂಪು ಮಾಡಿದೆ. ಯಾಕಂದ್ರೆ ಇರಾಕ್ ಸಂಸತ್ತಿನಲ್ಲಿ ಮಂಡನೆಯಾದ ಮಸೂದೆಯೇ ಆ ರೀತಿಯಾಗಿದೆ. ದೇಶದಲ್ಲಿ ಮದುವೆಯ ಮಾಡಿಕೊಳ್ಳುವವರ ವಯಸ್ಸಿನ ಮಿತಿಯನ್ನು ಮತ್ತಷ್ಟು ಇಳಿಸಿದ ಇರಾಕ್ ಸರ್ಕಾರ ಈಗ ಜಾಗತಿಕವಾಗಿ ತೀವ್ರ ಟೀಕೆಗೆ ಗುರಿಯಾಗುತ್ತಿದೆ.

Advertisment

ಗಂಡಿನ ವಯಸ್ಸು 15 ಹೆಣ್ಣಿನ ವಯಸ್ಸು 9ಕ್ಕೆ ಇಳಿಕೆ

ಇತ್ತೀಚೆಗೆ ಮಂಡನೆಯಾದ ನೂತನ ಮಸೂದೆಯ ಪ್ರಕಾರ, ಶಿಯಾ ಹಾಗೂ ಸುನ್ನಿ ಎರಡು ಪಂಗಡಗಳಿಗೆ ಅನ್ವಯವಾಗುವಂತೆ, ಇನ್ಮುಂದೆ ಮದುವೆ ಮಾಡಿಕೊಳ್ಳುವವರ ವಯಸ್ಸು ಗಂಡು ಮಕ್ಕಳಿಗೆ 15 ಇರಬೇಕು ಹಾಗೂ ಹೆಣ್ಣು ಮಕ್ಕಳ ವಯಸ್ಸು 9 ಇರಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಮಹಿಳಾ ಹಕ್ಕು ಆಯೋಗಗಳ ಕಣ್ಣು ಕೆಂಪು ಮಾಡಿಸಿದೆ .

ಇದನ್ನೂ ಓದಿ:ಸೌಂದರ್ಯ ಸ್ಪರ್ಧೆಯಲ್ಲಿ ಮಗಳ ಸೋಲು; ತೀರ್ಪುಗಾರರ ಮೇಲೆ ಗುಂಡು ಹಾರಿಸಿದ ತಂದೆ!

ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಸಂಸದರಾಗಿರುವ ರಿಯಾದ್ ಅಲ್ ಮಲ್ಲಿಕ್ ಈ ಒಂದು ವಿವಾದಾತ್ಮಕ ಮಸೂದೆಯನ್ನು ಇರಾಕ್ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಇದರಲ್ಲಿ ವೇಶ್ಯಾವಾಟಿಕೆ, ಸಲಿಂಗಕಾಮ ಹಾಗೂ ಲೈಂಗಿಕತೆಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಳನ್ನು ಕ್ರಿಮಿನಲ್ ಅಪರಾಧದ ವ್ಯಾಪ್ತಿಯಲ್ಲಿ ಬರುವುದು ಕೂಡ ಸೇರಿಕೊಂಡಿದೆ. ಇನ್ನೂ ಈ ಹಿಂದೆ ಇದ್ದಂತಹ ಮುಸ್ಲಿಂಮೇತರ ಮಹಿಳೆಯನ್ನು ವಿವಾಹಕ್ಕೆ ನಿರ್ಬಂಧ, ಪತ್ನಿಯ ಒಪ್ಪಿಗೆ ಇಲ್ಲದಿದ್ದರೂ ನಡೆಯುವ ಲೈಂಗಿಕ ಕ್ರಿಯೆ ಕಾನೂನುಬದ್ಧ, ಪತಿಯ ಅಪ್ಪಣೆಯಿಲ್ಲದೇ ಮಹಿಳೆಯರು ಆಚೆ ಹೋಗುವುದಕ್ಕೆ ನಿರ್ಬಂಧಗಳಂತ ಕಾನೂನುಗಳು ಕೂಡ ಮುಂದುವರಿದಿವೆ.

Advertisment

ಇದನ್ನೂ ಓದಿ:ಭಾರತದ ಗಡಿಗೆ ನುಗ್ಗಲು ಮುಂದಾದ ಸಾವಿರಾರು ಬಾಂಗ್ಲಾ ಜನ; ಗಡಿಯಲ್ಲಿ BSF ಪಡೆಗೆ ಬಿಗ್ ಚಾಲೆಂಜ್..!

ವಿರೋಧ ಪಕ್ಷಗಳ ಆಕ್ರೋಶ

ಸಂಸತ್ತಿನಲ್ಲಿ ಇಂದು ಮಂಡನೆಯಾದ ಬಿಲ್​​ ವಿರುದ್ಧ ಇರಾಕ್​ನ ವಿರೊಧ ಪಕ್ಷಗಳು ಖಂಡಿಸಿವೆ. ಇದು ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ಎಳೆದುಕೊಂಡು ಹೋಗುತ್ತದೆ. ಬಾಲ್ಯ ವಿವಾಹದ ದೊಡ್ಡ ಸಮಸ್ಯೆಗಳು ದೇಶದಲ್ಲಿ ಸೃಷ್ಟಿಯಾಗುತ್ತವೆ, ಇದು ಪುರುಷ ದಬ್ಬಾಳಿಕೆಗಳಿಗೆ ಮತ್ತಷ್ಟು ಬಲ ತುಂಬುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತು ಈ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment