/newsfirstlive-kannada/media/post_attachments/wp-content/uploads/2024/10/JOB_RAILWYA.jpg)
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​​ಸಿಟಿಸಿ)ದಲ್ಲಿ ಖಾಲಿ ಇರುವ ಒಂದು ಉದ್ಯೋಗವನ್ನು ಭರ್ತಿ ಮಾಡಲು ಇಲಾಖೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಎನರ್ಜಿಟಿಕ್, ಅರ್ಹ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಸಂಬಂಧ ಇಲಾಖೆಯು ನೋಟಿಫಿಕೇಶನ್ ರಿಲೀಸ್ ಮಾಡಿದೆ.
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಗ್ರೂಪ್ ಜನರಲ್ ಮ್ಯಾನೇಜರ್ ಹುದ್ದೆಯನ್ನು ತುಂಬಲಾಗುತ್ತಿದೆ. ರೈಲ್ವೆಯ ಮೆಕಾನಿಕಲ್ ಅಥವಾ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಇದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ ಪದವಿ ಪೂರ್ಣಗೊಳಿಸಿರಬೇಕು. ಐಟಿ ಮಾನ್ಯತೆ ಹೊಂದಿರುವ ಅಧಿಕಾರಿಗೆ ಮೊದಲ ಆದ್ಯತೆ ಇರುತ್ತದೆ.
56 ವರ್ಷದ ಒಳಗಿನವರು ಈ ಉದ್ಯೋಗಕ್ಕೆ ಅಪ್ಲೇ ಮಾಡಬಹುದಾಗಿದೆ. ಒಂದು ವೇಳೆ ಹುದ್ದೆಗೆ ಆಯ್ಕೆ ಆದವರಿಗೆ ತಿಂಗಳಿಗೆ 37,400 ರಿಂದ 67,000 ರೂಪಾಯಿ ತಿಂಗಳ ಸಂಬಳ ನೀಡಲಾಗುತ್ತದೆ. ಇದರ ಜೊತೆ ಇತರೆ ಸೌಲಭ್ಯಗಳು ಇರುತ್ತವೆ. ಅಭ್ಯರ್ಥಿಯನ್ನು ದೆಹಲಿನ ಕಚೇರಿಗೆ 3 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಒಂದು ವೇಳೆ ಒಳ್ಳೆಯ ಪರ್ಫಾಮೆನ್ಸ್​ ತೋರಿದ್ದರೆ ಮುಂದುವರೆಸಲಾಗುತ್ತೆ.
/newsfirstlive-kannada/media/post_attachments/wp-content/uploads/2024/10/JOB_Railways-1.jpg)
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಈ ಕೆಳಗೆ ನೀಡಲಾದ ವಿಳಾಸ ಅಥವಾ ಇಮೇಲ್ ಐಡಿಗೆ ಅಗತ್ಯವಿರುವ ನಿಮ್ಮ ಎಲ್ಲಾ ದಾಖಲೆಗಳ ಪ್ರತಿಗನ್ನು ಲಗತ್ತಿಸಿ ಅರ್ಜಿ ಕಳುಹಿಸಿಕೊಡಬೇಕು. ಅರ್ಜಿ ಪ್ರತಿ ಮೇಲೆ ನಿಮ್ಮ ಪಾಸ್​ಪೋರ್ಟ್​ ಸೈಜ್ ಫೋಟೋ ಅಂಟಿಸುವುದು ಮರೆಯಬಾರದು ಎಂದು ತಿಳಿಸಲಾಗಿದೆ. ಅರ್ಜಿಯನ್ನು IRCTC ಅಧಿಕೃತ ವೆಬ್​ಸೈಟ್ www.irctc.com ​ನಿಂದ ಡೌನ್​ಲೋಡ್ ಮಾಡಿಕೊಳ್ಳಬೇಕು.
ವಿಳಾಸ- Railway Board, RCTC/Corporate Office, New Delhi
Email Id: [email protected].
ಅರ್ಜಿ ಡೌನ್​​ಲೋಡ್ ಮಾಡಿಕೊಳ್ಳಿ-
https://indianrailways.gov.in/railwayboard/uploads/irpersonel/Vacancy_Circular/2024/VN%2031-2024%20GGM-RN%20Projects.pdf
ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ= 07 ಡಿಸೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us