newsfirstkannada.com

IND vs IRE: ಬರ್ತಿದ್ದಂತೆಯೇ ಬೂಮ್ ಬೂಮ್ ಬೂಮ್ರಾ ಶೈನ್.. ಮಳೆರಾಯ ಕಾಟ ಕೊಟ್ಟರೂ ಭಾರತಕ್ಕೆ ಗೆಲುವು..!

Share :

Published August 19, 2023 at 7:41am

  ಪಂದ್ಯದ ವೇಳೆ ಐರ್ಲೆಂಡ್​ ಅಲ್ಪ ಮೊತ್ತಕ್ಕೆ ಕುಸಿತ

  ಭರ್ಜರಿ ಬೌಲಿಂಗ್ ಮಾಡಿದ ಬುಮ್ರಾ, ಕೃಷ್ಣ, ರವಿ

  ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಭಾರತ ತಂಡ

ಐರ್ಲೆಂಡ್​ ಪ್ರವಾಸದಲ್ಲಿರುವ ಭಾರತ ತಂಡ ನಿನ್ನೆ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಐರ್ಲೆಂಡ್ ಮತ್ತು ಭಾರತದ ನಡುವಿನ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಇದರಿಂದ ಪಂದ್ಯ ಅರ್ಧಕ್ಕೆ ನಿಲ್ಲಿಸಲಾಯಿತು. ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯವನ್ನು 2 ರನ್‌ಗಳಿಂದ ಜಸ್​ಪ್ರೀತ್​ ಬುಮ್ರಾ ಪಡೆ ಗೆದ್ದುಕೊಂಡಿದ್ದು 3 ಮ್ಯಾಚ್​ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್​ ಜಸ್​ಪ್ರೀತ್ ಬುಮ್ರಾ ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿರುವುದು ಉತ್ತಮ ಎಂದೆನಿಸಿತು. ಏಕೆಂದರೆ ಐರ್ಲೆಂಡ್ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 139 ರನ್​ಗಳ ಮಾತ್ರ ಕಲೆ ಹಾಕಿತು. ಭಾರತದ ಪರ ಕ್ಯಾಪ್ಟನ್​ ಬುಮ್ರಾ, ಪ್ರಸಿದ್ಧ್ ಕೃಷ್ಣ, ಬಿಷ್ಣೋಯಿ ತಲಾ ಎರಡೆರಡು ವಿಕೆಟ್ ಪಡೆದರೆ ಅರ್ಶ್​ದೀಪ್​ ಒಂದು ವಿಕೆಟ್​ ಉರುಳಿಸಿ ತಂಡಕ್ಕೆ ನೆರವಾದರು.

ಭಾರತ, ಐರ್ಲೆಂಡ್​ ಪಂದ್ಯದ ವೇಳೆ ಟಾಸ್​ ಹಾಕಿದ ಕ್ಷಣ

ಬಳಿಕ ಬ್ಯಾಟಿಂಗ್​ಗೆ ಇಳಿದ ಟೀಮ್​ ಇಂಡಿಯಾದ ಓಪನರ್​ ಜೈಶ್ವಾಲ್​ ಮತ್ತು ಋತುರಾಜ್​ ಉತ್ತಮ ಆರಂಭವೇನು ಪಡೆಯಲಿಲ್ಲ. ಜೈಶ್ವಾಲ್​ 24 ರನ್​ ಗಳಿಸಿ ಆಡುವಾಗಲೇ ಔಟ್​ ಆದರು. ನಂತರ ಬಂದ ತಿಲಕ್ ವರ್ಮಾ ಸೊನ್ನೆ ಸುತ್ತಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್​ ದಾರಿ ಹಿಡಿದರು. ಈ ವೇಳೆ ಕ್ರೀಸ್​ ಕಾಯ್ದುಕೊಂಡಿದ್ದ ಋತುರಾಜ್​ 19 ಹಾಗೂ ಸಂಜು 1 ರನ್​ಗಳಿಸಿ ಆಡುವಾಗ ಬಂದ ಮಳೆ ಬೀಡದೇ ಸುರಿದಿದೆ. ಪರಿಣಾಮ ಪಂದ್ಯವನ್ನು ರದ್ದು ಮಾಡಿ ಡಕ್‌ವರ್ತ್ ಲೂಯಿಸ್ ನಿಯಮ ಪ್ರಕಾರ ಭಾರತಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಇದರಿಂದ ಬುಮ್ರಾ ಮೊದಲ ಬಾರಿ ನಾಯಕನ ಪಟ್ಟದಲ್ಲಿ ಮೊದಲ ಗೆಲುವನ್ನು ಸಂಭ್ರಮಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs IRE: ಬರ್ತಿದ್ದಂತೆಯೇ ಬೂಮ್ ಬೂಮ್ ಬೂಮ್ರಾ ಶೈನ್.. ಮಳೆರಾಯ ಕಾಟ ಕೊಟ್ಟರೂ ಭಾರತಕ್ಕೆ ಗೆಲುವು..!

https://newsfirstlive.com/wp-content/uploads/2023/08/BUMRAH_IRE_IND_1.jpg

Load More