newsfirstkannada.com

ಐರ್ಲೆಂಡ್​ ಫಸ್ಟ್​ ಬ್ಯಾಟಿಂಗ್​.. ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರರೇ ಔಟ್​

Share :

Published June 5, 2024 at 8:28pm

    ಇಂದು ಟೀಮ್​ ಇಂಡಿಯಾ, ಐರ್ಲೆಂಡ್​​ ತಂಡದ ಮಧ್ಯೆ ರೋಚಕ ಪಂದ್ಯ

    ಟಾಸ್​ ಗೆದ್ದ ಟೀಮ್​ ಇಂಡಿಯಾ ಕ್ಯಾಪ್ಟನ್​​​ ರೋಹಿತ್​ ಬೌಲಿಂಗ್​ ಆಯ್ಕೆ!

    ತಂಡದಿಂದ ಸ್ಟಾರ್​ ಆಟಗಾರರನ್ನೇ ಕೈ ಬಿಟ್ಟ ಕ್ಯಾಪ್ಟನ್​​ ರೋಹಿತ್​ ಶರ್ಮಾ

ಇಂದು ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್​ ಇಂಡಿಯಾ, ಐರ್ಲೆಂಡ್ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಟೀಮ್​ ಇಂಡಿಯಾದ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಐರ್ಲೆಂಡ್ ಮೊದಲು ಬ್ಯಾಟಿಂಗ್​ ಮಾಡುತ್ತಿದೆ. ನ್ಯೂಯಾರ್ಕ್​​ ಸ್ಟೇಡಿಯಮ್​​ ಮೈದಾನ ವಿಚಿತ್ರವಾಗಿದ್ದು, ಇದರ ಕಂಡೀಷನ್ಸ್​ ಅರ್ಥ ಮಾಡಿಕೊಳ್ಳಲು ರೋಹಿತ್​ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು, ಟೀಮ್​ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​​ನಿಂದ ಸಂಜು ಸ್ಯಾಮ್ಸನ್​ ಅವರನ್ನು ಕೈಬಿಟ್ಟು ಪಂತ್​ಗೆ ಅವಕಾಶ ನೀಡಲಾಗಿದೆ. ಯಶಸ್ವಿ ಜೈಸ್ವಾಲ್​​ ಅವರು ಕೂಡ ತಂಡದಲ್ಲಿ ಇಲ್ಲ. ಬದಲಿಗೆ ತಂಡದಲ್ಲಿ ನಾಲ್ವರು ಸ್ಪಿನ್ನರ್​ಗಳಿಗೆ ಚಾನ್ಸ್​ ಕೊಡಲಾಗಿದೆ.

ಟೀಮ್​ ಇಂಡಿಯಾ ಹೀಗಿದೆ..!

ರೋಹಿತ್​ ಶರ್ಮಾ (ಕ್ಯಾಪ್ಟನ್​), ವಿರಾಟ್​ ಕೊಹ್ಲಿ, ರಿಷಭ್​ ಪಂತ್​, ಸೂರ್ಯಕುಮಾರ್​ ಯಾದವ್​​, ಶಿವಂ ದುಬೆ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​​, ಜಸ್​ಪ್ರಿತ್​ ಬೂಮ್ರಾ, ಅರ್ಷ್​ದೀಪ್​ ಸಿಂಗ್​​​​, ಮೊಹಮ್ಮದ್​ ಸಿರಾಜ್​​.

ಇದನ್ನೂ ಓದಿ: ಐರ್ಲೆಂಡ್​​, ಟೀಮ್​ ಇಂಡಿಯಾ ರೋಚಕ ಪಂದ್ಯ.. ಸಂಜು ಸ್ಯಾಮ್ಸನ್​ಗೆ ದೊಡ್ಡ ಆಘಾತ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐರ್ಲೆಂಡ್​ ಫಸ್ಟ್​ ಬ್ಯಾಟಿಂಗ್​.. ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರರೇ ಔಟ್​

https://newsfirstlive.com/wp-content/uploads/2024/01/Rohit_Kohli_2.jpg

Load More