/newsfirstlive-kannada/media/post_attachments/wp-content/uploads/2025/01/VIRAT-KOHLI-6.jpg)
ಬಾರ್ಡರ್ ಗವಾಸ್ಕರ್ ಟ್ರೋಫಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗ್ತಿವೆ. ತಂಡದ ಒಳಿತಿಗಾಗಿ ಬಿಸಿಸಿಐ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು ಇರ್ಫಾನ್ ಪಠಾಣ್ ಆಗ್ರಹಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
2024ರಲ್ಲಿ ವಿರಾಟ್ ಕೊಹ್ಲಿ ಅವರ ಮೊದಲ ಇನ್ನಿಂಗ್ಸ್ ಸರಾಸರಿ ಕೇವಲ 15 ರನ್. ನಾವು ಕಳೆದ ಐದು ವರ್ಷಗಳ ಅವರು ಆಡಿರುವ ಅಂಕಿ-ಅಂಶಗಳನ್ನು ತೆಗೆದುಕೊಂಡರೂ ಅವರ ಸರಾಸರಿ 30ಕ್ಕಿಂತ ಜಾಸ್ತಿ ಇಲ್ಲ. ಹಾಗಿದ್ದರೆ ಟೀಂ ಇಂಡಿಯಾಗೆ ಹಿರಿಯ ಆಟಗಾರರ ಅಗತ್ಯತೆ ಇದೆಯೇ? ಒಬ್ಬ ಯಂಗ್ಸ್ಟರ್ಗೆ ತಂಡದಲ್ಲಿ ಸತತವಾಗಿ ಸ್ಥಾನ ನೀಡುತ್ತಿರುವ ಅವರ ಸರಾಸರಿ ಸ್ಕೋರ್ ಕೂಡ 25-30 ಆಗಿರಲಿದೆ. ನಾವು ಚರ್ಚೆ ಮಾಡಬೇಕಾದ ವಿಚಾರ ಏನೆಂದರೆ ಭಾರತದ ತಂಡ ಬಗ್ಗೆ. ನಮಗೆ ವೈಯಕ್ತಿಕ ಅಂಕಿ-ಅಂಶಗಳ ಅಗತ್ಯತೆ ಇಲ್ಲ.
ಇದನ್ನೂ ಓದಿ:ಏಕದಿನ, ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ ಟೀಂ ಇಂಡಿಯಾ ಸ್ಟಾರ್..!
ಭಾರತಕ್ಕೆ ಸೂಪರ್ ಸ್ಟಾರ್ ಕಲ್ಚರ್ ಅಗತ್ಯ ಇಲ್ಲ. ನಮಗೆ ಬೇಕಾಗಿರೋದು ಟೀಂ ಕಲ್ಚರ್. ನೀವು ನನಗೆ ಹೇಳಿ.. ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ದೇಸಿಯ ಕ್ರಿಕೆಟ್ ಆಡಿದ್ದು ಯಾವಾಗ ಅಂತಾ. ಅವರು ಯಾವ ಬಾರಿಗೆ ಆಡಿದ್ದಾರೆ? ದಶಕಗಳೇ ಕಳೆದು ಹೋಗಿವೆ. ದಂತಕತೆ ಸಚಿನ್ ತೆಂಡುಲ್ಕರ್ ಕೂಡ ದೇಸಿಯ ಕ್ರಿಕೆಟ್ ಆಡಿದರು. ನಿವೃತ್ತಿ ವೇಳೆ ಅದಕ್ಕೂ ಘೋಷಣೆ ಮಾಡಿದರು. ಆದರೆ ಕೊಹ್ಲಿ ಅಲ್ಲಿ ಆಡಲ್ಲ, ಇಲ್ಲಿ ಆಡಲು ಬರುತ್ತಾರೆ.
2020 ರಿಂದ ವಿರಾಟ್ ಕೊಹ್ಲಿ ನಿರಂತರವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಕುಸಿತ ಕಂಡಿದ್ದಾರೆ. ಒಟ್ಟು 39 ಟೆಸ್ಟ್ಗಳಲ್ಲಿ 69 ಇನ್ನಿಂಗ್ಸ್ ಆಡಿ, 2028 ರನ್ ಕಲೆ ಹಾಕಿದ್ದಾರೆ. ಅವರ ಸರಾಸರಿ ಸ್ಕೋರ್ 30.72 ಆಗಿದೆ. ಮೂರು ಶತಕ ಹಾಗೂ 9 ಅರ್ಧಶತಕ ಸೇರಿದೆ. 2024ರಲ್ಲಿ 11 ಟೆಸ್ಟ್ ಪಂದ್ಯವನ್ನಾಡಿ 21 ಇನ್ನಿಂಗ್ಸ್ ಆಡಿದ್ದಾರೆ. ಅವರ ಸರಾಸರಿ ಸ್ಕೋರ್ 23.15 ಆಗಿದೆ. ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿದೆ.
ಇದನ್ನೂ ಓದಿ: ಹೊಸ ಲುಕ್ನಲ್ಲಿ ಲಕಲಕ ಮಿಂಚಿದ ಬಿಗ್ಬಾಸ್ ಸ್ಪರ್ಧಿ ಅನುಷಾ ರೈ; ಫ್ಯಾನ್ಸ್ ಏನಂದ್ರು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ