/newsfirstlive-kannada/media/post_attachments/wp-content/uploads/2024/02/Rohit-sharma-2.jpg)
ಟಿ-20 ವಿಶ್ವಕಪ್ಗೆ ಬಲಿಷ್ಠ ಭಾರತ ತಂಡ ಕಟ್ಟುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ತಂಡಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾರೆಲ್ಲ ಸೆಲೆಕ್ಟ್ ಆಗ್ತಾರೆ ಎಂಬ ಗೊಂದಲಗಳು ಶುರುವಾಗಿರುವ ಹೊತ್ತಿನಲ್ಲೇ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಟಾಪ್ ಆರ್ಡರ್ನಲ್ಲಿ ಯಾರೆಲ್ಲ ಆಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನೇಹಾ ಹಿರೇಮಠ ಪ್ರಕರಣ; ಆರೋಪಿ ಫಯಾಜ್ ವಿಚಾರದಲ್ಲಿ CID ಇಂದು ಮಹತ್ವದ ನಿರ್ಧಾರ
ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆಲ್ಲಬೇಕು ಎಂದರೆ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಓಪ್ನರ್ ಆಗಿ ಆಡಬೇಕು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬರಬೇಕು ಎಂದು ಪ್ರತಿಪಾದಿಸಿದ್ದಾರೆ. ಇನ್ನು ಪಠಾಣ್ ತಂಡದಲ್ಲಿ ಯಾರೆಲ್ಲ ಇರಬೇಕು ಅನ್ನೋದ್ರ ಬಗ್ಗೆ ಸದ್ಯ ಹೇಳಿಲ್ಲ. ಅದೂ ಕೂಡ ತಿಳಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!
ಪಠಾಣ್ ಅವರ ಆಯ್ಕೆಯನ್ನು ಕಂಟಿನ್ಯೂ ಮಾಡಿರುವ ಕೆಲ ಕ್ರಿಕೆಟ್ ತಜ್ಞರು, ಕೊಹ್ಲಿ ನಂತರ ಸೂರ್ಯ ಕುಮಾರ್ ಯಾದವ್, ವಿಕೆಟ್ ಕೀಪರ್ ಹಾಗೂ ಹಾರ್ದಿಕ್ ಪಾಂಡ್ಯ ಆಡಬೇಕು. ಆರನೇ ಸ್ಲಾಟ್ನಲ್ಲಿ ರಿಂಕ್ ಸಿಂಗ್ನ ಆಡಿಸಿ, 7ನೇ ಆರ್ಡರ್ನಲ್ಲಿ ಜಡೇಜಾ ಅಥವಾ ಅಕ್ಸರ್ ಪಟೇಲ್ರನ್ನು ಆಡಿಸಬೇಕು ಎಂದು ತಿಳಿಸಿದ್ದಾರೆ.
Ideally this should be the t20 WC team
1. Yashashvi Jaiswal
2. Abhishek Sharma
3. Sanju Samson
4. Riyan Parag
5. Shivam Dubey
6. Rinku Singh
7. Axar Patel
8. Yuzi Chahal
9. Kuldeep Yadav
10. Jasprit Bumrah
11. Mayank Yadav— Rambo (@sniggy1992) April 23, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್