newsfirstkannada.com

ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದ ಪಠಾಣ್​​​; ರಾಹುಲ್​​, ಸ್ಯಾಮ್ಸನ್​ಗೆ ಮೋಸ!

Share :

Published April 24, 2024 at 6:08pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್

  ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆಗಾಗಿ ಸೆಲೆಕ್ಷನ್​ ಕಮಿಟಿ ಸರ್ಕಸ್​

  ಜೂನ್‌ನಲ್ಲಿ ನಡೆಯೋ ಟಿ20 ವಿಶ್ವಕಪ್​ಗಾಗಿ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಪಠಾಣ್​

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ನಡೆಯಲಿದೆ. ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆಗಾಗಿ ಸೆಲೆಕ್ಷನ್​ ಕಮಿಟಿ ಭರ್ಜರಿ ಸರ್ಕಸ್​ ನಡೆಸುತ್ತಿದೆ. ಈ ಮಧ್ಯೆ ಮಾಜಿ ಕ್ರಿಕೆಟರ್​ ಇರ್ಫಾನ್​ ಪಠಾಣ್​​ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜತೆಗೆ ಜೂನ್‌ನಲ್ಲಿ ನಡೆಯೋ ಟಿ20 ಪಂದ್ಯಾವಳಿಗಾಗಿ 15 ಸದಸ್ಯರ ಭಾರತ ತಂಡವನ್ನು ಹಂಚಿಕೊಂಡಿದ್ದಾರೆ.

ಟೀಮ್​ ಇಂಡಿಯಾದ ಟಾಪ್​ ಆರ್ಡರ್ ಬ್ಯಾಟರ್​ಗಳಾಗಿ ಕ್ಯಾಪ್ಟನ್​ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಇರ್ಫಾನ್ ಪಠಾಣ್ ಆಯ್ಕೆ ಮಾಡಿದ್ದಾರೆ. ಇವರ ಜತೆಗೆ ಶುಭ್ಮನ್​ ಗಿಲ್​ ಅವರಿಗೆ ಸ್ಥಾನ ನೀಡಿದ್ದಾರೆ. ಓಪನರ್​ ಆಗಿ ರೋಹಿತ್​​ ಮತ್ತು ಜೈಸ್ವಾಲ್​​, 3ನೇ ಕ್ರಮಾಂಕಕ್ಕೆ ವಿರಾಟ್​ ಅಥವಾ ಗಿಲ್ ಆಡಬೇಕು ಎಂದಿದ್ದಾರೆ.

ಮಿಡಲ್​ ಆರ್ಡರ್​ ಬ್ಯಾಟರ್​ ಲಿಸ್ಟ್​ ಹೀಗಿದೆ!

ನಂತರ ಮಿಡಲ್​ ಆರ್ಡರ್​​ನಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ರಿಂಕು ಸಿಂಗ್ ಮತ್ತು ಶಿವಂ ದುಬೆ ಇರಬೇಕು. ಹಾರ್ದಿಕ್ ಪಾಂಡ್ಯ ಏಕೈಕ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಬೇಕು. ರವೀಂದ್ರ ಜಡೇಜಾ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಆಗಿದ್ದರೆ, ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ಸ್​ ಎಂದು ಆಯ್ಕೆ ಮಾಡಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್ ಸಹ ಸ್ಥಾನ ಪಡೆದಿದ್ದಾರೆ.

ಇನ್ನು, ತಂಡದಲ್ಲಿ ಸಂಜು ಸ್ಯಾಮ್ಸನ್​​ ಮತ್ತು ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಲ್ಲ. ಶ್ರೇಯಸ್ ಅಯ್ಯರ್ ಕೂಡ ತಂಡದಿಂದ ಹೊರಗುಳಿದಿದ್ದಾರೆ.

ಟಿ20 ವಿಶ್ವಕಪ್‌ಗೆ ಪಠಾಣ್ ಆಯ್ಕೆ ಮಾಡಿದ 15 ಸದಸ್ಯರ ಭಾರತ ತಂಡ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್.

ಇದನ್ನೂ ಓದಿ: ರೋಹಿತ್​​ ನಂತರ ಟೀಮ್​ ಇಂಡಿಯಾದ ಕ್ಯಾಪ್ಟನ್​ ಯಾರು? ಸ್ಟೋರಿ ಓದಿದ್ರೆ ಸರ್ಪ್ರೈಸ್​ ಆಗ್ತೀರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದ ಪಠಾಣ್​​​; ರಾಹುಲ್​​, ಸ್ಯಾಮ್ಸನ್​ಗೆ ಮೋಸ!

https://newsfirstlive.com/wp-content/uploads/2024/04/Rahul_Samson.jpg

Load More