newsfirstkannada.com

ಅಯೋಧ್ಯೆಯಲ್ಲಿ ಹನುಮ ಇನ್ನೂ ಜೀವಂತ; ಶ್ರೀರಾಮನ ದರ್ಶನಕ್ಕೆ ಆಂಜನೇಯನ ಅನುಮತಿ ಬೇಕೇ ಬೇಕು

Share :

Published January 13, 2024 at 9:05pm

Update January 13, 2024 at 8:38pm

    ಆಂಜನೇಯನಿಗೆ ವರ ಕೊಟ್ಟಿದ್ದಳು ಸೀತೆ? ಮುಂದೇನಾಯ್ತು ಗೊತ್ತಾ?

    ಚಿರಂಜೀವಿಯಾಗಿರುವ ಆಂಜನೇಯ ಅಯೋಧ್ಯೆಯಲ್ಲಿ ಎಲ್ಲಿದ್ದಾನೆ?

    ಅಯೋಧ್ಯೆಗೆ ಕಾವಾಲಾಗಿ ನಿಂತಿದ್ದಾನೆ ಈ ಚಿರಾಯು ಆಂಜನೇಯ

ಹನುಮನ ಭಕ್ತಿ ಪರಾಕಾಷ್ಠೆಗೆ ಮೆಚ್ಚಿದ್ದ ಸೀತಾದೇವಿ ಅವನಿಗೆ ಚಿರಂಜೀವಿಯಾಗುವಂತೆ ವರ ನೀಡಿದ್ಳು. ಹೀಗಾಗಿಯೇ, ಚಿರಾಯು ಆಂಜನೇಯ ಇಂದಿಗೂ ಅಯೋಧ್ಯೆಯಲ್ಲಿ ನೆಲೆ ನಿಂತು ಬೇಡಿ ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನ ಬಗೆಹರಿಸುತ್ತಿದ್ದಾನೆ.

ಅಂಜನಾದ್ರಿಯಿಂದ ಅಯೋಧ್ಯೆ, ಇಲ್ಲಿರುವನೇ ಹನುಮ?
ಅಯೋಧ್ಯೆಗೆ ಕಾವಾಲಾಗಿದ್ದಾನೆ ಚಿರಾಯು ಆಂಜನೇಯ!

ರಾಮನಿಲ್ಲದೇ ಹನುಮನಿಲ್ಲ. ಹನುಮನಿಲ್ಲದೇ ರಾಮನಿಲ್ಲ. ಎಲ್ಲಿ ರಾಮನೋ ಅಲ್ಲಿ ಹನುಮನು. ರಾಮನನ್ನ ತನ್ನೆದೆಯ ಅರಮನೆಯಲ್ಲಿಟ್ಟು ಪೂಜಿಸುತ್ತಿರುವ ಆಂಜನೇಯ, ಇಂದಿಗೂ ರಾಮಜನ್ಮಭೂಮಿಯಾಗಿರೋ ಅಯೋಧ್ಯೆಯ ರಕ್ಷಣೆ ಮಾಡ್ತಿದ್ದಾನೆ. ಅಯೋಧ್ಯೆಯ ನಗರದ ಮಧ್ಯದಲ್ಲೇ ವಿರಾಜಮಾನನಾಗಿ ರಾಮನೂರನ್ನ ಪವನಸುತ ಕಾಯ್ತಿದ್ದಾನೆ.

ಹನುಮಾನ್ ಗಡಿಯಲ್ಲಿ ಆಂಜನೇಯ ವಿರಾಜಮಾನ!
ರಾಮದರ್ಶನಕ್ಕೆ ಹನುಮನ ಅನುಮತಿ ಪಡೆದೇ ಹೋಗ್ಬೇಕು!

ರಾಮ ಬಂಟ ಅಯೋಧ್ಯೆ ನಗರಿಯ ನಟ್ಟ ನಡುವಲ್ಲಿ ಇರೋ ಈ ಹನುಮಾನ್ ಗಡಿಯಲ್ಲೇ ಚಿರಾಯುವಾಗಿದ್ದಾ ಅನ್ನೋದು ಭಕ್ತರ ನಂಬಿಕೆ. ಈ ಜಾಗದಿಂದಲ್ಲೇ ಇಂದಿಗೂ ಆಂಜನೇಯ ಅಯೋಧ್ಯೆಯನ್ನ ಕಾಯ್ತಿದ್ದಾನಂತೆ. ಹೀಗಾಗಿ, ಅಯೋಧ್ಯೆಗೆ ಬರುವ ಯಾರೇ ಆಗಿರಲಿ ಪ್ರಭು ಶ್ರೀರಾಮನ ದರ್ಶನ ಮಾಡುವ ಮುನ್ನ ಆತನ ಬಂಟ ಆಂಜನೇಯನ ದರ್ಶನ ಮಾಡಬೇಕು. ಅಂದ್ರೆ ಶ್ರೀರಾಮನ ಬಳಿ ಹೋಗಲು ಆಂಜನೇಯನ ಅನುಮತಿ ಪಡೆದೇ ಮುಂದೆ ರಾಮ ಮಂದಿರಕ್ಕೆ ಹೋಗೋದು ಗತಕಾಲದಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ.

ಹನುಮಾನ್ ಗಡಿಯಲ್ಲಿ ಆಂಜನೇಯನ 6 ಅಡಿ ಮೂರ್ತಿ!
ಮಾತೆಯ ಮಡಿಲಲ್ಲಿ ಮಗುವಿನಂತೆ ಇರುವ ಹನುಮ!

ಇಲ್ಲಿ ಒಂದು ವಿಚಾರ ಹೇಳಲೇಬೇಕು. ಯಾವುದೇ ಊರಿಗೆ ಹೋದ್ರು ಊರ ಹೆಬ್ಬಾಗಿಲಿನಲ್ಲೇ ಆಂಜನೇಯನ ಮಂದಿರವಿರುತ್ತೆ. ಅಂದ್ರೆ, ಊರಿಗೆ ಯಾವುದೇ ದುಷ್ಟ ಶಕ್ತಿಯಿಂದ ಕೆಡಕು ಬರದಂತೆ ಆಂಜನೇಯ ಊರನ್ನ ರಕ್ಷಣೆ ಮಾಡ್ತಾನೆ ಅನ್ನೋದು ಜನರ ನಂಬಿಕೆ. ಹೀಗಾಗಿ, ಪ್ರತಿ ಊರಿನಲ್ಲೂ ಆಂಜನೇಯನ ದೇವಾಲಯ ಇದ್ದೇ ಇರುತ್ತೆ. ಇದೇ ರೀತಿ ಅಯೋಧ್ಯೆಯಲ್ಲೂ ಆಂಜನೇಯ ಕಾವಲಿಗಿದ್ದಾನೆ. ರಾಮನು ಹುಟ್ಟಿದ ಊರನ್ನ ಇಂದಿಗೂ ಇದೇ ರಾಮ ಬಂಟ ಕಾವಲು ಕಾಯ್ತಿದ್ದಾನೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಹೇಗೆ ಬಾಲರಾಮ ವಿರಾಜಮಾನನಾಗಲಿದ್ದಾನೋ.. ಹಾಗೆಯೇ, ಹನುಮಾನ್ ಗಡಿಯಲ್ಲೂ ಕೇವಲ 6 ಅಡಿ ಆಂಜನೇಯನ ಮೂರ್ತಿ ನೋಡಬಹುದು. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಆಂಜನೇಯನ ದೈತ್ಯ ಮೂರ್ತಿ ಇರುತ್ತೆ. ಆದ್ರೆ, ಹನುಮಾನ್ ಗಡಿಯಲ್ಲಿ ಆಂಜನೇಯ ಮಾತೆಯ ಮಡಿಲಲ್ಲಿ ಮಗುವಿನಂತೆ ಕೂತಿದ್ದಾನೆ. ಇನ್ನು, ನಿತ್ಯವೂ ಇಲ್ಲಿ ಭಜನೆ.. ರಾಮಸ್ತೋತ್ರ, ಪಠಣೆ ನಡೆಯುತ್ತಲೇ ಇರುತ್ತೆ. ಆ ವೈಭೋಗವನ್ನ ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ.

ರಾಮನು ಹೇಳಿದ ಆ ಮಾತಿನಂತೆ ಇಲ್ಲಿ ನೆಲೆಸಿದ ಹನುಮ!

ಲಂಕಾಧೀಶ ರಾವಣನ ಸಂಹಾರದ ಬಳಿಕ ಶ್ರೀರಾಮ ಅಯೋಧ್ಯೆಗೆ ವಾಪಸ್ ಆಗಿರ್ತಾನೆ. ಆಗ ರಾಮ ಲಕ್ಷ್ಮಣ ಸೀತಾದೇವಿ ಆದಿಯಾಗಿ ಎಲ್ಲರೂ ವೈಕುಂಠಕ್ಕೆ ಹೊರಟು ನಿಂತಿರ್ತಾರೆ. ನೀವೆಲ್ಲೋ ನಾನಲ್ಲೆ ಅಂತ ರಾಮ ಬಂಟ ಆಂಜನೇಯ ಕೂಡ ರಾಮನ ಜೊತೆ ವೈಕುಂಠಕ್ಕೆ ಬರಲು ಮುಂದಾದಾಗ, ರಾಮ ಅದೊಂದು ಮಾತು ಹೇಳಿ ಹನಮನನ್ನ ಅಯೋಧ್ಯೆಯಲ್ಲೇ ನೆಲೆ ನಿಲ್ಲುವಂತೆ ಮಾಡಿದ್ದ. ನೀನು ನನ್ನ ಜೊತೆ ಬಂದ್ರೆ ಅಯೋಧ್ಯೆ ಜನರನ್ನ ರಕ್ಷಣೆ ಮಾಡೋದ್ಯಾರು? ಹೀಗಾಗಿ, ನೀನು ಇಲ್ಲಿಯೇ ನೆಲೆ ನಿಂತು ಅಯೋಧ್ಯೆಯನ್ನ ಕಾಪಾಡಬೇಕು ಅಂತಾ ಶ್ರೀರಾಮ ಆಂಜನೇಯನಿಗೆ ಹೇಳಿದ್ದ. ಹೀಗಾಗಿ ಆಂಜನೇಯ ಈ ಹನುಮಾನ್ ಗಡಿಯಲ್ಲಿ ವಿರಾಜಮಾನಾರಾಗಿ ಅಯೋಧ್ಯೆಯನ್ನ ರಕ್ಷಣೆ ಮಾಡ್ತಿದ್ದಾರೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಅಯೋಧ್ಯೆಲ್ಲಿ ಶ್ರೀರಾಮನಿಗಿಂತ ಮೊದಲು ರಾಮ ಬಂಟ ಆಂಜನೇಯನ ದರ್ಶನ ಮಾಡಲಾಗುತ್ತೆ. ಹೌದು, ಪೌರಾಣಿಕ ಕಥೆಯ ಪ್ರಕಾರ ಹನುಮಾನ್​ ಗಡಿಯಲ್ಲಿ ಹನುಮ ಇಂದಿಗೂ ಅಮರ. ಭಕ್ತಿಯಿಂದ ಯಾರು ಆಂಜನೇಯನನ್ನ ಆರಾಧಿಸ್ತಾರೋ ಅಂಥಾ ಭಕ್ತರಿಗೆ ಆಂಜನೇಯ ಸೂಕ್ಷ್ಮ ಶರೀರರದ ಮೂಲಕ ದರ್ಶನ ಕೊಡ್ತಾನೆ ಅನ್ನೋದು ರಾಮಭಕ್ತರ ನಂಬಿಕೆ.

ಇನ್ನು, ವಿಶೇಷ ಅಂದ್ರೆ ಈ ಪುಣ್ಯಸ್ಥಳದಲ್ಲಿ ಆಂಜನೇಯನನ್ನ ಆರಾಧಿಸಿದ್ರೆ ಜನರ ಮನೋಕಾಮನೆಗಳು ಈಡೇರುತ್ತೆ ಅನ್ನೋದು ಭಕ್ತರ ನಂಬಿಕೆ. ಜನರ ನಂಬಿಕೆ ಪ್ರಕಾರ ಅಯೋಧ್ಯೆಗೆ ಶ್ರೀರಾಮ ರಾಜನಾದ್ರೆ, ಹನುಮಾನ್ ಗಡಿ ರಕ್ಷಕ. ರಾಮಜನ್ಮಭೂಮಿ ವಿವಾದದ ಕಾರಣ ಈ ಹನುಮಾನ ಗಡಿ ಪರಿಸರ ಕೂಡ ನಿರ್ಲಕ್ಷಕ್ಕೆ ಒಳಗಾಗಿತ್ತು. ಆದ್ರೀಗ, ರಾಮ ಮಂದಿರದ ನಿರ್ಮಾಣದ ಜೊತೆ ಜೊತೆಗೆ ಹನುಮಾನ್ ಗಡಿ ಸುತ್ತ ಮುತ್ತಲಿನ ಪ್ರದೇಶಗಳು ಅಭಿವೃದ್ಧಿಯಾಗಿವೆ. ಹಿಂದೆ, ಹನುಮಾನ್​ಗಡಿ ರಸ್ತೆ ಅಂಗಡಿಮುಂಗಟ್ಟು, ವಾಹನಗಳಿಂದ ತುಂಬಿ ಹೋಗಿತ್ತು. ಈಗ ಜೀರ್ಣೋದ್ಧಾರದ ಕೆಲಸಗಳು ಭರದಿಂದ ಸಾಗಿವೆ. ಹೀಗಾಗಿ ರಾಮ ಹುಟ್ಟಿದ ಊರಿಗೆ ಎಂಥ ಸ್ಥಿತಿ ಬಂದಿದೆ ಎಂದು ಕಣ್ಣೀರು ಸುರಿಸುತ್ತಿದ್ದ ಭಕ್ತರು ನವ ಅಯೋಧ್ಯೆಯನ್ನು ಕಂಡು ಹಷೋಲ್ಲಾಸಗೊಂಡಿದ್ದಾರೆ.

ಸೀತೆ ಕೊಟ್ಟ ವರದಿಂದ, ಶ್ರೀರಾಮನಿಗೆ ಕೊಟ್ಟ ಮಾತಿನಿಂದ ಹನುಮ ಇಂದಿಗೂ ಚಿರಾಯುವಾಗಿದ್ದಾನೆ. ಚಿರಂಜೀವಿಯಾಗಿ ಶ್ರೀರಾಮನೂರನ್ನ ಆಂಜನೇಯ ರಕ್ಷಣೆ ಮಾಡ್ತಿದ್ದು, ರಾಮನ ದರ್ಶನಕ್ಕೆ ಬರೋ ಭಕ್ತರಿಗೆ ನಿಮ್ಮ ಜೊತೆಗೆ ನಾನಿದ್ದೇನೆ ಅನ್ನೋ ಅಭಯ ನೀಡಿ ಆಂಜನೇಯ ಆಶಿರ್ವಾದ ಮಾಡ್ತಿರೋದಂತು ಸುಳ್ಳಲ್ಲ. ಹನುಮನಿದ್ದಲ್ಲಿ ರಾಮನಿರ್ತಾನೆ. ರಾಮನಿದ್ದಲ್ಲಿ ಹನುಮನಿರ್ತಾನೆ ಅನ್ನೋದಕ್ಕೆ ಹನುಮಾನ್ ಗಡಿಯೇ ಸಾಕ್ಷಿ. ನೀವು ಅಯೋಧ್ಯೆಗೆ ಹೋದ್ರೆ ಬಾಲರಾಮನ ದರ್ಶನಕ್ಕೂ ಮುಂಚೆ ಬಾಲ ಆಂಜನೇಯನ ದರ್ಶನ ಮಾಡೋದನ್ನ ಮಾತ್ರ ಮರೀಬೇಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ಹನುಮ ಇನ್ನೂ ಜೀವಂತ; ಶ್ರೀರಾಮನ ದರ್ಶನಕ್ಕೆ ಆಂಜನೇಯನ ಅನುಮತಿ ಬೇಕೇ ಬೇಕು

https://newsfirstlive.com/wp-content/uploads/2024/01/hanuma-3.jpg

Load More