/newsfirstlive-kannada/media/post_attachments/wp-content/uploads/2024/10/Honey-Consuming-Benifits.jpg)
ಅನಾದಿಕಾಲದಿಂದಲೂ ಜೇನುತುಪ್ಪಕ್ಕೆ ತನ್ನದೇ ಆದ ಒಂದು ಪ್ರಾಮುಖ್ಯತೆ ಇದೆ. ಅದರಲ್ಲೂ ಆಯುರ್ವೇದ ಔಷಧಿಗಳಲ್ಲಿ ಇದಕ್ಕಿರುವ ಸ್ಥಾನಮಾನ ದೊಡ್ಡದು. ಅದರ ರುಚಿ ಹಾಗೂ ಘಮದೊಂದಿಗೆ ಸೆಳೆಯುವ ಜೇನುತುಪ್ಪ ಇಂದಿಗೂ ಕೂಡ ಆರೋಗ್ಯದ ವಿಷಯದಲ್ಲಿ ಹಲವು ಗೊಂದಲಗಳನ್ನಿಟ್ಟುಕೊಂಡಿದೆ. ಜೇನುತುಪ್ಪ ಸೇವಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಹಲವು ಸಂಶಯಗಳಿವೆ. ನಿಜಕ್ಕೂ ಜೇನುತುಪ್ಪ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಇವೆಯಾ ಅನ್ನೋ ಪ್ರಶ್ನೆ ಹಲವು ಜನರಲ್ಲಿ ಮೂಡಿದೆ. ಅದರಲ್ಲೂ ಡಯಾಬಿಟಿಸ್ ಅಂದ್ರೆ ಸಕ್ಕರೆ ಕಾಯಿಲೆ ಇದ್ದವರೂ ಇದನ್ನೂ ಸೇವಿಸಲೇ ಬಾರದು ಎಂಬ ಫರ್ಮಾನು ಇದೆ. ಅದು ನಿಜವಾ ಅಥವಾ ಮಿತ್ಯವಾ?
ಜೇನುತುಪ್ಪದಲ್ಲಿ ಸಕ್ಕರೆ ಅಂಶವು ಹೆಚ್ಚು ಇದೆ. ಅದರಲ್ಲೂ ಹಣ್ಣಿನಲ್ಲಿ ಸಿಗುವ ಸಕ್ಕರೆ ಅಂಶವಾದ ಫ್ರಕ್ಟೋಸ್ (FRUCTOSE) ಹಾಗೂ ಗ್ಲೂಕೋಸ್ ಅಂಶವೂ ಹೆಚ್ಚಿದೆ. ಇದರಿಂದಾಗಿ ಜೇನುತುಪ್ಪವನ್ನು ಕಾರ್ಬೋಹೈಡ್ರೇಡ್ ಆಗಿ ಪರಿವರ್ತಿಸಿವೆ. ಇದು ಸಕ್ಕರೆಗಿಂತ ಅನೇಕ ಪ್ರಯೋಜನಗಳನ್ನು ಹೊಂದಿದೆ ಆದ್ರೆ ಜೇನುತುಪ್ಪವನ್ನು ಬಳಸುವ ಪ್ರಮಾಣದ ಬಗ್ಗೆ ನಮಗೆ ಅರಿವಿರಬೇಕು. ಜೇನುತುಪ್ಪದಲ್ಲಿ ಸಿಗುವ ನ್ಯೂಟ್ರಿಷನ್ಗಳ ಪ್ರಮಾಣವನ್ನು ನೋಡುವುದಾದ್ರೆ
ಜೇನುತುಪ್ಪದಲ್ಲಿ 15ರಷ್ಟು ಕ್ಯಾಲರೀಸ್ಗಳಿವೆ. 4.0 ಗ್ರಾಮ್ನಷ್ಟು ಕಾರ್ಬೋಹೈಡ್ರೇಡ್ ಇದೆ. ಸಕ್ಕರೆ ಅಂಶ 3.9 ಗ್ರಾಮ್, ಪ್ರೋಟನ್ ಅಂಶ 0ಯಷ್ಟು ಫ್ಯಾಟ್ ಮತ್ತು ಫೈಬರ್ 0 ಯಷ್ಟಿದೆ.
ಇದನ್ನೂ ಓದಿ:ವಾರಕ್ಕೊಮ್ಮೆ ಹೆಡ್ ಮಸಾಜ್ ಮಾಡಿಕೊಳ್ಳಿ; ಇದರಿಂದ ಆಗುವ ಲಾಭಗಳೇನು ಗೊತ್ತಾ?
ಈಗಾಗಲೇ ಹೇಳಿದಂತೆ ಜೇನುತುಪ್ಪವು ಸಕ್ಕರೆ ಫ್ರಕ್ಟೋಸ್ ಹಾಗೂ ಗ್ಲುಕೋಸ್ಗಳಿಂದ ಕೂಡಿದೆ. ಇದು ಸಣ್ಣ ಪ್ರಮಾಣದಲ್ಲಿ ಕ್ಯಾಲರೀಸ್ ಹಾಗೂ ನ್ಯೂಟ್ರಿಯಂಟ್ಸ್ಗಳನ್ನ ಹೊಂದಿದೆ. ಕೊಂಚ ಪ್ರಮಾಣದಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ಗಳನ್ನು ಹೊಂದಿದೆ. ಇಂತಹ ಜೇನುತುಪ್ಪವನ್ನು ಸಕ್ಕರೆ ಕಾಯಿಲೆ ಇದ್ದವರು ತಿನ್ನಬಹುದಾ ಅಂದ್ರೆ ಹೌದು ಆರಾಮಾಗಿ ಸಕ್ಕರೆ ಕಾಯಿಲೆಯಿದ್ದವರು ಜೇನುತುಪ್ಪವನ್ನು ಸೇವಿಸಬಹುದು.
ನಿಜ, ಜೇನುತುಪ್ಪವನ್ನು ಸಕ್ಕರೆ ಕಾಯಿಲೆ ಇದ್ದವರು ಸೇವಿಸಬಹುದು ಯಾಕಂದ್ರೆ ಸಕ್ಕರೆಯಲ್ಲಿರುವ ಗ್ಲೈಸ್ಮಿಕ್ ಇಂಡೆಕ್ಸ್ ಅಂಶ ಜೇನುತುಪ್ಪದಲ್ಲಿ ಅತ್ಯಂತ ಕಡಿಮೆಯಿರುತ್ತದೆ. ಹೀಗಾಗಿ ಇದು ರಕ್ತದಲ್ಲಿ ಸಣ್ಣ ಪ್ರಮಾಣದಲ್ಲಿ ಅದು ತುಂಬಾ ನಿಧಾನವಾಗಿ ಸಕ್ಕರೆ ಅಂಶವನ್ನು ಸೇರಿಸುತ್ತದೆ. ಹೀಗಾಗಿ ಇದರಿಂದ ಸಕ್ಕರೆ ಕಾಯಿಲೆಯ ಪ್ರಮಾಣ ದಿಢೀರನೇ ಏರುವುದಿಲ್ಲ. ಆದ್ರೆ ಹಲವು ಅಧ್ಯಯನಗಳು ಹೇಳುವ ಪ್ರಕಾರ ಜೇನುತುಪ್ಪವನ್ನು ಒಂದು ಪ್ರಮಾಣದಲ್ಲಿ ಬಳಸುವುದರಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಮಸ್ಯೆಯಿಲ್ಲ. ಅದರ ಮಿತಿ ಮೀರಿದಾಗ ಜೇನುತುಪ್ಪ ಸಕ್ಕರೆ ಕಾಯಿಲೆ ಇದ್ದವರಿಗೆ ಅಪಾಯಕಾರಿ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ