Advertisment

ಸಿದ್ದು ಗುಣಗಾನದ ಹಿಂದಿದೆಯಾ ಸೇಫ್​ಗೇಮ್ ತಂತ್ರ? ಜೆಡಿಎಸ್​ನಿಂದ ಒಂದು ಕಾಲು ಆಚೆ ಇಟ್ಟಿದ್ದಾರಾ ಜಿಟಿಡಿ?

author-image
Gopal Kulkarni
Updated On
‘ಸಿದ್ದುಗೆ ಚಾಮುಂಡೇಶ್ವರಿ ಆಶೀರ್ವಾದವಿದೆ, ಹೆಚ್​ಡಿಕೆ ರಿಸೈನ್ ಮಾಡ್ತಾರಾ‘? ರಾಜ್ಯ ರಾಜಕಾರಣದಲ್ಲಿ ಜಿಟಿಡಿ ಹೊಸ ಬಾಂಬ್!
Advertisment
  • ಏಕಾಏಕಿ ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ್ದೇಕೆ ಜಿಟಿಡಿ
  • ಸಿದ್ದು ಬೆನ್ನಿಗೆ ನಿಲ್ಲುವ ಹಿಂದೆ ಅಡಗಿದೆಯಾ ಆ ಒಂದು ತಂತ್ರ
  • JDSನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಹಿರಿಯ ದಳಪತಿ

ಸಿದ್ದು ಮೇಲಿನ ಅಭಿಮಾನವನ್ನ ಪ್ರತಿಪಕ್ಷದಲ್ಲಿರೋ ಯಾರೋ ಸಾಮಾನ್ಯ ನಾಯಕರು ಮೆರೆದಿದ್ರೆ ಅದನ್ನು ನಾವು ನೀವು ಗಂಭೀರವಾಗಿ ತೆಗೆದುಕೊಳ್ಳೋ ಅಗತ್ಯವೇ ಇರ್ಲಿಲ್ಲ. ಆದ್ರೆ, ದಳಕೋಟೆಯ ಸ್ಟ್ರಾಂಗ್ ಲೀಡರ್‌, ಜೆಡಿಎಸ್‌ನಲ್ಲಿ ಸಚಿವರಾಗಿ, ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿರೋ ಜಿಟಿ ದೇವೇಗೌಡ್ರು ಸಿದ್ದು ಮೇಲೆ ಅಭಿಮಾನದ ಮಳೆ ಸುರಿಸಿದ್ದು ಖಂಡಿತವಾಗಿಯೂ ವಿಶೇಷ ವಿಭಿನ್ನ. ಬಟ್‌, ರಾಜಕಾರಣಿಗಳು ಯಾವತ್ತೂ ಸುಖಾಸುಮ್ಮನೇ ಮಾತಾಡೋರು ಅಲ್ಲ. ಏನಾದ್ರೂ ಎದುರಾಳಿ ಪಕ್ಷದವ್ರನ್ನು ಹೊಗಳುತ್ತಾರೆ ಅಂದ್ರೆ ಅಲ್ಲಿ ಏನಾದ್ರೂ ಸ್ವಪಕ್ಷದ ಮೇಲೆ ಅಸಮಾಧಾನ ಇದೆ ಇರುತ್ತೆ. ಹಾಗಾದ್ರೆ ದಳಕೋಟೆಯಲ್ಲಿ ಬೆಂಕಿ ಹತ್ತಿಕೊಳ್ತಾ?

Advertisment

publive-image

ಕಳ್ಳನಿಗೊಂದು ಪಿಳ್ಳೆ ನೆವ ಅಂದಿದ್ದೇಕೆ ಕುಮಾರಸ್ವಾಮಿ?
ರಾಜಕಾರಣಿಗಳು ಬಾಯ್‌ ತಪ್ಪಿ ಆಡಿದ್ರೂ ಅದು ಒಂದೋ ಎರಡೋ ಮಾತ್ಗೆ ಅಷ್ಟೇ ಸೀಮಿತವಾಗಿರುತ್ತೆ. ಆದ್ರೆ, ಜಿಟಿಡಿ ಆರಂಭದಿಂದ ಕೊನೆಯವರೆಗೂ ಸಿದ್ದು ಮೇಲೆ ಅಭಿಮಾನದ ಮಳೆಯನ್ನು ಸುರಿಸುತ್ತಾ ಹೋಗ್ತಾರೆ. ಹೀಗಾಗಿ ಕನ್ಫರ್ಮ್‌ ಆಗಿದ್ದೇನು ಅಂದ್ರೆ, ಜಿಟಿಡಿ ಯಾವುದೇ ಕಾರಣಕ್ಕೂ ಬಾಯ್‌ ತಪ್ಪಿ ಆಡಿದ್ದು ಅಲ್ಲವೇ ಅಲ್ಲ. ಇನ್ನು ಜಿಟಿಡಿ ಅವ್ರ ನಡೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವ್ರಲ್ಲಿ ಆಕ್ರೋಶದ ಕಿಡಿ ಹೊರಬರುವಂತೆ ಮಾಡಿದೆ. ಆದ್ರೆ, ಅವ್ರು ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ:ಜಮೀನು ಹಗರಣದಲ್ಲಿ ಕೇಳಿಬಂದ ವಿಪಕ್ಷ ನಾಯಕನ ಹೆಸರು; ಇಂದು ಸ್ಪಷ್ಟನೆ ಕೊಡಲಿದ್ದಾರೆ ಆರ್​ ಅಶೋಕ್​

ಕುಮಾರಸ್ವಾಮಿ ಅವ್ರಿಗೂ ಜಿಟಿ ದೇವೇಗೌಡ್ರಿಗೂ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಮುನಿಸು ಇತ್ತು. ಆಗಾಗ ಅದು ಸ್ಫೋಟವಾಗ್ತಾನೇ ಇರ್ತಾ ಇತ್ತು. ಬಟ್‌, ಎಲೆಕ್ಷನ್‌ ಬರೋ ಟೈಮ್‌ಗೆ ಎಲ್ಲವೂ ಸರಿಯಾಗಿತ್ತು. ಹಳೇ ಮೈಸೂರು ಭಾಗದಲ್ಲಿ ಇಬ್ಬರು ಜೊತೆ ಜೊತೆಯಾಗಿ ಓಡಾಡ್ತಾ ಕಾಂಗ್ರೆಸ್‌ ಬಿಜೆಪಿ ವಿರುದ್ಧ ರಣಕಹಳೆ ಊದಿದ್ರು. ಆದ್ರೆ, ಕಾಲಚಕ್ರ ಉರುಳಿದಂತೆ ಮತ್ತೆ ಅಸಮಾಧಾನದ ಬೆಂಕಿ ಇದ್ದಂತೆ ಕಾಣಿಸ್ಕೊಳ್ತಿದೆ. ಅದ್ಕೆ ಕಾರಣವೂ ಇದೆ.

Advertisment

publive-image

ಕೈತಪ್ಪಿದ ಜೆಡಿಎಲ್‌ಪಿ ನಾಯಕ ಪಟ್ಟ!
ರಾಜಕಾರಣಿಗಳು ಪ್ರತಿಸ್ಪರ್ಧಿ ಪಕ್ಷದವ್ರನ್ನು ಹೊಗಳುತ್ತಾರೆ, ಸ್ವಪಕ್ಷದವ್ರಿಗೆ ಟಾಂಗ್‌ ಕೊಡ್ತಾರೆ ಅಂತಾದ್ರೆ ಅದ್ರಲ್ಲಿ ಏನಾದ್ರೂ ಲೆಕ್ಕಾಚಾರ ಇದ್ದೇ ಇರುತ್ತೆ ಅಂತಾ ಹೇಳಿದ್ದು ಇದ್ಕೆ ನೋಡಿ. ಸದ್ಯ ನಮ್ಗೆ ಸಿಕ್ಕಿರೋ ಮಾಹಿತಿ ಪ್ರಕಾರ ಕುಮಾರಸ್ವಾಮಿ ಕೇಂದ್ರ ಸಚಿವರಾದ್ಮೇಲೆ ಜೆಡಿಎಸ್‌ನ ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಿಸೈನ್‌ ಮಾಡ್ತಾರೆ. ಆ ಸ್ಥಾನ ತಮ್ಗೆ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಜಿಟಿ ದೇವೇಗೌಡ್ರಿಗೆ ಬಿಗ್‌ ಶಾಕ್‌ ಎದುರಾಗುತ್ತೆ. ತಾವು ಒಕ್ಕಲಿಗ ನಾಯಕರು, ಜೆಡಿಎಸ್‌ನ ಹಿರಿಯರು ಅನ್ನೋ ನಿಟ್ಟಿನಲ್ಲಿ ಸಹಜವಾಗಿ ಜಿಡಿಟಿ ಆಕಾಂಕ್ಷೆ ಹೊಂದಿರ್ತಾರೆ. ಬಟ್‌, ಕುಮಾರಸ್ವಾಮಿ ಏನ್‌ ಮಾಡ್ತಾರೆ ಅಂದ್ರೆ, ಕೊನೆಯಕ್ಷಣದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ ಬಾಬುಗೆ ಕೊಡ್ತಾರೆ. ಅಲ್ಲಿಂದ ಮತ್ತೆ ಜಿಟಿಡಿ ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡ್ತಾರೆ. ಇದೀಗ ಸಿದ್ದು ಪರ ಬ್ಯಾಟ್‌ ಮಾಡಲು ಕಾರಣವೂ ಅದೇ ಮುಖ್ಯ ಕಾರಣ ಅಂತಾ ಹೇಳಲಾಗ್ತಿದೆ.

ಇದನ್ನೂ ಓದಿ: ಸೈಟು ವಾಪಸ್ ಕೊಟ್ಟು ಹಾದಿ ತಪ್ಪಿದ್ರಾ ಸಿದ್ದರಾಮಯ್ಯ? ಮತ್ತಷ್ಟು ಬಿಗಿಯಾಗುತ್ತಾ ಇಡಿ ಇಕ್ಕಳ?

ಮುಡಾದಲ್ಲಿ ಜಿಟಿಡಿ ಸೈಟ್‌ ಇದೆಯಾ?
ಒಂದೆರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್‌ ದಿಢೀರ್‌ ಅಂತಾ ಸುದ್ದಿಗೋಷ್ಠಿಗೆ ಬಂದಿದ್ರು. ಬಿಜೆಪಿ, ಜೆಡಿಎಸ್‌ ನಾಯಕರಲ್ಲಿ ಯಾರ್‌ ಯಾರ್‌ ಮುಡಾ ಸೈಟ್‌ ಹೊಂದಿದ್ದಾರೆ ಅನ್ನೋದನ್ನು ತೆರೆದಿಡ್ತೀವಿ ಅಂತಾ ಹೇಳಿದ್ರು. ಅವಾಗ ಭೈರತಿ ಸುರೇಶ್‌ ಅವ್ರಿಂದ ಜಿಟಿಡಿ ಹೆಸ್ರು ಬರುತ್ತೆ. ಹೀಗಾಗಿ ಮೈಸೂರಲ್ಲಿ ಸಿದ್ದರಾಮಮಯ್ಯ ಪರ ಜಿಟಿಡಿ ಬ್ಯಾಟಿಂಗ್‌ ಮಾಡಿದ್ದಕ್ಕೂ? ಮುಡಾ ಸೈಟ್‌ ಹೊಂದಿದ್ದಕ್ಕೂ ಸಂಬಂಧವಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಯಾಕಂದ್ರೆ, ಇಂದು ಮುಡಾ ಸೈಟು ಸಿದ್ದು ಬುಡಕ್ಕೆ ಬಾಂಬ್‌ ಇಟ್ರೆ, ಮುಂದೊಂದ್‌ ದಿನ ತಮ್ಮ ಬುಡಕ್ಕೂ ಬಾಂಡ್‌ ಬೀಳುತ್ತೆ ಅನ್ನೋದ್‌ ಜಿಟಿಡಿಗೆ ಪಕ್ಕಾ ಗೊತ್ತು.

Advertisment

publive-image

ಸಿದ್ದು ಬೆನ್ನಿಗೆ ನಿಲ್ಲದೇ ಇದ್ರೆ ಸ್ಥಳೀಯ ಮಟ್ಟದಲ್ಲಿ ಕಷ್ಟ!
ದೆಹಲಿ ಮಟ್ಟದ ರಾಜಕೀಯ ಬೇರೆ ಇರುತ್ತೆ, ಬೆಂಗಳೂರು ಮಟ್ಟದ ರಾಜಕೀಯ ಬೇರೆ ಇರುತ್ತೆ. ಹಾಗೇ ಸ್ಥಳೀಯ ಮಟ್ಟದಲ್ಲಿಯೇ ಇನ್ನೊಂದ್‌ ರೀತಿ ಇರುತ್ತೆ. ಅದು ಜಿಟಿಡಿ ಅವ್ರಿಗೆ ಚೆನ್ನಾಗಿಯೇ ಗೊತ್ತು. ಹೀಗಾಗಿ ಅವ್ರು ಮುಡಾ ಕೇಸ್‌ನಲ್ಲಿ ಸಿದ್ದು ರಾಜೀನಾಮೆ ಕೊಡ್ಬೇಕಾಗಿಲ್ಲ ಅನ್ನೋ ನಿಟ್ಟಿನಲ್ಲಿ ಮಾತಿನ ಬಾಣಗಳನ್ನು ಬಿಟ್ಟಿದ್ದಾರೆ. ಯಾಕಂದ್ರೆ, ಸಿದ್ದರಾಮಯ್ಯ ಮೈಸೂರಿನವ್ರು. ಹಾಗೊಂದ್‌ ವೇಳೆ ಇಂತಾ ಟೈಮ್‌ನಲ್ಲಿ ಸಿದ್ದು ವಿರುದ್ಧವಾಗಿ ಕಾಣಿಸ್ಕೊಂಡ್ರೆ ಮುಂದೆ ರಾಜಕೀಯ ಮಾಡೋದು ಕಷ್ಟವಾಗುತ್ತೆ. ಅದ್ರಲ್ಲಿಯೂ ಅಹಿಂದ ಮತಗಳ ಕೆಂಗಣ್ಣಿಗೆ ಗುರಿಯಾಗ್ಬೇಕಾಗುತ್ತೆ. ಹೀಗಾಗಿಯೇ ಸಿದ್ದು ಬೆನ್ನಿಗೆ ಜಿಟಿಡಿ ನಿಂತಿದ್ದಾರೆ ಅನ್ನೋದನ್ನು ರಾಜಕೀಯ ವಿಶ್ಲೇಷಕರು ಹೇಳ್ತಿದ್ದಾರೆ.

ಇದನ್ನೂ ಓದಿ:ಮತ್ತೊಂದು ತಿರುವಿಗೆ ಬಂದು ನಿಂತ ಮುಡಾ ಕೇಸ್​; ಆರ್​ ಅಶೋಕ್ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

ಜೆಡಿಎಸ್‌ನಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರಾ?
2023 ರಲ್ಲಿ ನಡೆದ ವಿಧಾನಸಭೆಗೂ ಮುನ್ನ ಜಿಟಿ ದೇವೇಗೌಡ್ರು ಜೆಡಿಎಸ್‌ನಿಂದ ಒಂದು ಕಾಲನ್ನು ಹೊರಗೆ ಇಟ್ಟಿದ್ರು. ಇನ್ನೇನ್‌ ಕಾಂಗ್ರೆಸ್‌ಗೆ ಜಾಯ್ನ್‌ ಆಗೇ ಬಿಟ್ರು ಅನ್ನೋ ಹಂತವೂ ಆಗಿತ್ತು. ಬಟ್‌, ಕೊನೆಯ ಕ್ಷಣದಲ್ಲಿ ಅದು ರದ್ದಾಗಿ ಜೆಡಿಎಸ್‌ನಲ್ಲಿಯೇ ಉಳ್ಕೊಂಡಿದ್ರು. ಇದೆಲ್ಲವೂ ಗೊತ್ತಿರೋ ವಿಚಾರ. ಬಟ್‌, ಇದೀಗ ಮತ್ತೆ ಜಿಟಿ ದೇವೇಗೌಡ್ರು ಕಾಂಗ್ರೆಸ್‌ನತ್ತ ಒಂದ್‌ ಕಾಲ್‌ ಇಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಇಂತಾವೊಂದ್‌ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋ ಮಾತುಗಳಿವೆ. ಹೀಗಾಗಿಯೇ ಸಿದ್ದರಾಮಯ್ಯ ಅವರನ್ನು ಹೊಗಳಿರೋ ಸಾಧ್ಯತೆ ಇದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment