Advertisment

ಡೆಂಗ್ಯೂ ಬಂದ ಮಗುವಿಗೆ ಮತ್ತೆ ಡೆಂಗ್ಯೂ ಬರಬಹುದು! ಆ್ಯಂಟಿಬಯೋಟಿಕ್ಸ್ ಕೊಡೋದು ಉತ್ತಮವೇ?

author-image
AS Harshith
Updated On
ಡೆಂಗ್ಯೂ ಬಂದ ಮಗುವಿಗೆ ಮತ್ತೆ ಡೆಂಗ್ಯೂ ಬರಬಹುದು! ಆ್ಯಂಟಿಬಯೋಟಿಕ್ಸ್ ಕೊಡೋದು ಉತ್ತಮವೇ?
Advertisment
  • ಡೆಂಗ್ಯೂಗಾಗಿ ವ್ಯಾಕ್ಸಿನ್​ ಇದೆಯಾ? ಭಾರತಕ್ಕೆ ಈ ವ್ಯಾಕ್ಸಿನ್​ ಬಂದಿದೆಯಾ?
  • ಡೆಂಗ್ಯೂ ಸಮಯದಲ್ಲಿ ಈ ಕೆಲಸ ಮಾಡಬೇಕು ಇಲ್ಲವಾದ್ರೆ ಕಿಡ್ನಿಗೆ ಸಮಸ್ಯೆಯಾಗುತ್ತೆ
  • ಡೆಂಗ್ಯೂನಲ್ಲಿ 4 ಜಾತಿಗಳಿವೆ.. ಅವುಗಳು ಯಾವ್ಯಾವುವು ಗೊತ್ತಾ? ಇಲ್ಲಿದೆ ಮಾಹಿತಿ

ಹಿರಿಯ ಪತ್ರಕರ್ತೆಯಾದ ಅರ್ಚನಾ ರವಿಕುಮಾರ್​ರವರು ಮಣಿಪಾಲ್​​ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್​ ಭಾಸ್ಕರ್​ ಶೆಣೈಯವರನ್ನು ಸಂದರ್ಶನ ಮಾಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಮಳೆಗಾಲದ ಸಮಯ ಮಕ್ಕಳಲ್ಲಿ ಕಾಣಿಸಿಕೊಳ್ಳುವ ವೈರಲ್​ ಫೀವರ್​ಗಳು ಮತ್ತು ಡೆಂಗ್ಯೂ ಪ್ರಕರಣಗಳ ಗೊಂದಲಗಳ ಕುರಿತು ವೈದ್ಯರು ಮಾತನಾಡಿದ್ದಾರೆ.

Advertisment

ಡೆಂಗ್ಯೂಗಾಗಿ ವ್ಯಾಕ್ಸಿನ್​ ಇದೆಯಾ?

ವ್ಯಾಕ್ಸಿನ್​ ಬಂದಿದೆ. ಆದರೆ ಮಲೇರಿಯಾ, ಟೈಪಾಯ್ಡ್​​ಗೆ ಔಷಧಿ ಇದೆ. ಡೆಂಗ್ಯೂಗೆ ಔಷಧಿ ಇಲ್ಲ. ಭಾರತ ದೇಶಕ್ಕೆ ವ್ಯಾಕ್ಸಿನ್​ ಬಂದಿಲ್ಲ. ಕೆಲವು ಟ್ರಯಲ್​ ಆಗಿ ಡಿಸಿಜಿಐ ರೆಕಮಂಡ್​ ಮಾಡಿದ್ರೆ ಭಾರತದಲ್ಲಿ ಸಿಗುತ್ತೆ. ಬ್ರೆಜಿಲ್​, ಫಿಲಿಫೈನ್ಸ್​ ದೇಶದಲ್ಲಿ ಸಿಗುತ್ತೆ.

ಇದನ್ನೂ ಓದಿ: ಮಕ್ಕಳಲ್ಲಿ ಡೆಂಗ್ಯೂ ಜ್ವರ ಬಂದ ಮೇಲೆ ಅಲ್ಲ, ಹೋದ ಮೇಲೆ ಆಪತ್ತು ಜಾಸ್ತಿ; ಡಾಕ್ಟರ್​ ಭಾಸ್ಕರ್​ ಶೆಣೈ

ಡೆಂಗ್ಯೂ ಬಂದ ಮಕ್ಕಳ ಫುಡ್​ ಹೇಗಿರಬೇಕು?

ಡೆಂಗ್ಯೂ ಇರುವಾಗ ಯಾವುದೇ ಹಸಿವಿರಲ್ಲ. ಆ ಸಮಯದಲ್ಲಿ ಮಕ್ಕಳು ಏನು ತಿನ್ನುತ್ತಾರೆ ಅದನ್ನು ಕೊಡಬೇಕು. ಹಣ್ಣುಗಳ ಸೇವನೆ ಮಾಡಬೇಕು, ದ್ರವ ಪದಾರ್ಥಗಳ ಸೇವನೆ ಮಾಡಬೇಕು, ನೀರು, ಎಳನೀರು ಮತ್ತು ಎಲ್ಲಾ ಹಣ್ಣಿನ ಜ್ಯೂಸ್​ ಸೇವನೆ ಮಾಡಬೇಕು. ಡೆಂಗ್ಯೂನಲ್ಲಿ ನೀರು ಸೇವನೆ ಕಡಿಮೆ ಮಾಡುವುದರಿಂದ ಕಿಡ್ನಿಗೆ ಸಮಸ್ಯೆಯಾಗುತ್ತದೆ. ಕಿಡ್ನಿ ಕೆಲಸ ಮಾಡಬೇಕಾದರೆ ನೀರು ಚೆನ್ನಾಗಿ ಕುಡಿಯಬೇಕು.

Advertisment

ಇದನ್ನೂ ಓದಿ: ಡೆಂಗ್ಯೂಗೆ ಬೆಸ್ಟ್​ ಮೆಡಿಸಿನ್​ ಯಾವುದು ಗೊತ್ತಾ? ಜ್ವರ ಬಂದ ತಕ್ಷಣವೇ ರಕ್ತ ಪರೀಕ್ಷೆ ಮಾಡೋದು ವೇಸ್ಟ್​! 

ಡೆಂಗ್ಯೂ ಬಂದ ಮಗುವಿಗೆ ಮತ್ತೊಮ್ಮೆ ಡೆಂಗ್ಯೂ ಬರುತ್ತಾ?

ಡೆಂಗ್ಯೂನಲ್ಲಿ 4 ಜಾತಿಗಳಿವೆ (ಟೈಪ್​1,2,3,4). ಒಬ್ಬ ವ್ಯಕ್ತಿಗೆ ಡೆಂಗ್ಯೂ ಬಂದ್ರೆ ಜೀವನ ಪರ್ಯಂತ ಅದರ ಇಮ್ಯುನಿಟಿ ಇರುತ್ತದೆ. ಅವನಿಗೆ ಟೈಪ್​ 1 ಡೆಂಗ್ಯೂ ಬರಲ್ಲ. ಅವನ ದೇಹ ಸ್ವಲ್ಪಮಟ್ಟಿಗೆ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಅದು ಟೈಪ್​ ಒನ್​ಗೆ ಬಂದಷ್ಟು ದೀರ್ಘ ಕಾಲ ಇರಲ್ಲ. ಆದರೆ ಮೂರು ಬಾರಿ ಡೆಂಗ್ಯೂ ಬರುವ ಸಾಧ್ಯತೆಗಳಿವೆ. 2ನೇ ಬಾರಿ ಮೂರನೇ ಬಾರಿ ಡೆಂಗ್ಯೂ ಬಂದಾಗ ಕೊಂಚ ಸಮಸ್ಯೆ ಜಾಸ್ತಿ ಇರುತ್ತದೆ.

ಡೆಂಗ್ಯೂ ಬಿಟ್ಟು ವೈರಲ್​ ಫೀವರ್​ ಬಗ್ಗೆ ಡಾಕ್ಟರ್​ ಏನು ಹೇಳುತ್ತೀರಾ?

ಸಾಮಾನ್ಯ ವೈರಲ್ ಫೀವರ್​ ಬರುತ್ತದೆ. ಅದರಲ್ಲಿ ಜ್ವರ, ತಲೆನೋವು ಬರುತ್ತದೆ. ಡೆಂಗ್ಯೂವಷ್ಟು ಜಾಸ್ತಿ ಇರಲ್ಲ. ಕೆಲವು ವೈರಸ್​ಗಳಿರುತ್ತವೆ ಅವು ಶ್ವಾಸಕೋಶಗಳಿಗೆ ತೊಂದರೆಯಾಗುತ್ತದೆ.

Advertisment

ಇದನ್ನೂ ಓದಿ: Special Interview: ನಿಮ್ಮ ಮಗುವಿಗೆ ಡೆಂಗ್ಯೂ ಬಂದಿದೆಯಾ? ಎಷ್ಟು ದಿನದೊಳಗೆ ವೈದ್ಯರನ್ನು ಕಾಣಬೇಕು?

ಆ್ಯಂಟಿಬಯೋಟಿಕ್ಸ್​ ಎಷ್ಟು ದಿನಗಳ ಬಳಿಕ ಸೇಫ್​?

ವೈರಸ್​​​ಗಳಿಗೆ ಆ್ಯಂಟಿಬಯೋಟಿಕ್ಸ್ ಕೊಡಲೇ ಬಾರದು. ಬ್ಯಾಕ್ಟೀರಿಯಾ ಇನ್ಫೆಕ್ಷನ್​ಗೆ ಆ್ಯಂಟಿಬಯೋಟಿಕ್ಸ್. ವೈರಲ್​ ಇನ್ಫೆಕ್ಷನ್​ಗೆ ಆ್ಯಂಟಿ ವೈರಲ್​ ಇರುತ್ತದೆ. ಆದ್ರೆ ಅದು ಕೆಲವು ವೈರಸ್​ಗಳಿಗೆ ಮಾತ್ರ. ಆ್ಯಂಟಿಬಯೋಟಿಕ್ಸ್ ಕೊಡುವುದರಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ಬ್ಯಾಕ್ಟೀರಿಯಾಗಳಿಗೆ ಸರಿಯಾದ ಆ್ಯಂಟಿಬಯೋಟಿಕ್ಸ್ ಕೊಟ್ಟರೆ ನಿರ್ನಾಮ ಆಗುತ್ತದೆ. ಆದರೆ ಅದನ್ನು ವೈರಸ್​ಗೆ ಕೊಟ್ಟರೆ ಬೇರೆ ವೈರಸ್​ ರೂಪತಾಳುತ್ತವೆ. ಸ್ವಲ್ಪ ವರ್ಷ ನಂತರ ಸಾಮಾನ್ಯವಾಗಿ ಸಿಗುವ ಯಾವ ಆ್ಯಂಟಿಬಯೋಟಿಕ್ಸ್ ಅದಕ್ಕೆ ಕೆಲಸ ಮಾಡಲ್ಲ.

ಇದನ್ನೂ ಓದಿ: Dr Bhaskar Shenoy: ದಿನಕ್ಕೆ ಎಷ್ಟು ಡೆಂಗ್ಯೂ ಕೇಸ್​ ಬರುತ್ತೆ? ಇದರ ಲಕ್ಷಣಗಳ ಬಗ್ಗೆ ವೈದ್ಯರು ಹೇಳೊದೇನು?

Advertisment

ಕೆಲವೊಂದು ಬಾರಿ ನೇರವಾಗಿ ಆ್ಯಂಟಿಬಯೋಟಿಕ್ಸ್ ಕೊಡುತ್ತೇವೆ. ಟಾಂನ್ಸಿಲ್​ ಮೇಲೆ ಪ್ಯಾಚ್​ ಬಂದಾಗ, ಕಿವಿಯಲ್ಲಿ ಲಕ್ಷಣ ಕಂಡಾಗ ಬ್ಯಾಕ್ಟೀರಿಯದಿಂದ ಬಂದಿರೋದು ಎಂದು ಮನದಟ್ಟಾದಾಗ ಆ್ಯಂಟಿಬಯೋಟಿಕ್ಸ್ ಕೊಡುತ್ತೇವೆ. ಅನಗತ್ಯವಾಗಿ ಕೊಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment