/newsfirstlive-kannada/media/post_attachments/wp-content/uploads/2024/10/FLUE-TIME-GYM.jpg)
ಇದು ಹೇಳಿ ಕೇಳಿ ಜ್ವರದ ಸೀಸನ್, ನಿಮ್ಮ ಸುತ್ತಮುತ್ತಲೂ ಯಾರಾದರೂ ಒಬ್ಬರು ಕೆಮ್ಮು ನೆಗಡಿ ಜ್ವರದಿಂದ ಬಳಲುತ್ತಲೇ ಇರುತ್ತಾರೆ. ವಾತಾವರಣದಲ್ಲಿ ಬದಲಾವಣೆ ಇನ್ನಷ್ಟು ನಮಗೆ ಸಮಸ್ಯೆಗಳನ್ನು ತಂದಿಡುತ್ತದೆ. ಅದರಲ್ಲೂ ಪ್ರಮುಖವಾಗಿ ಮೂಗಿನ ಮೇಲೆಯೇ ಅದರ ಪರಿಣಾಮ ಜಾಸ್ತಿ. ನೆಗಡಿ ಸೀನುಗಳು ಸರಳವಾಗಿ ನಮ್ಮನ್ನು ಆವರಿಸಿಕೊಳ್ಳುವ ಸಮಯವಿದು. ಅದರಲ್ಲೂ ಜ್ವರ ಕೆಮ್ಮು ನೆಗಡಿಗಳು ಸರ್ವೇ ಸಾಮಾನ್ಯ ಇಂತಹ ಸಮಯದಲ್ಲಿ ಜಿಮ್ ಅಥವಾ ಯೋಗದಂತಹ ವರ್ಕೌಟ್ ಮಾಡುವವರಿಗೆ ಒಂದು ಸಂದಿಗ್ಧತೆ ಒದಗಿ ಬರುತ್ತದೆ. ಜಿಮ್ ಮಾಡಬೇಕಾ ಮಾಡಬಾರದಾ ಅಂತ.
ಇದನ್ನೂ ಓದಿ:ಹಗಲಲ್ಲಿ ಎಷ್ಟು ಹೊತ್ತು ಮಲಗಬೇಕು? ಮಧ್ಯಾಹ್ನ ನಿದ್ರೆ ಮಾಡೋದು ಒಳ್ಳೆಯದೋ? ಕೆಟ್ಟದ್ದೋ?
ಸರ್ವೆ ಸಾಮಾನ್ಯವಾಗಿ ಹೇಳುವುದು ಜ್ವರ ನೆಗಡಿಯಂತ ಸಂದರ್ಭಗಳಲ್ಲಿ ವರ್ಕೌಟ್ ಮಾಡಬಾರದು ಅಂತಲೇ. ಸಾಧಾರಣವಾಗಿ ಜ್ವರದಂತಹ ಸಮಸ್ಯೆಗಳು ಬಂದಾಗ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಬೇಕಾಗುತ್ತದೆ ಎಂಬ ವಾದವೂ ಕೂಡ ಇದೆ. ಈ ವೇಳೆ ವ್ಯಾಯಾಮ ಮಾಡಿದಲ್ಲಿ ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವುದಲ್ಲದೇ, ಅದು ನಿಮ್ಮ ಅನಾರೋಗ್ಯದ ಸಮಯವನ್ನು ಇನ್ನಷ್ಟು ವಿಸ್ತರಿಸುತ್ತದೆ. ಹೀಗಾಗಿ ಫ್ಲೂನಂತಹ ಸಮಸ್ಯೆಗಳು ಇದ್ದಾಗ ಆದಷ್ಟು ವರ್ಕೌಟ್ನಿಂದ ದೂರ ಇರುವುದು ಒಳ್ಳೆಯದು ಎಂದೇ ಸಲಹೆ ನೀಡಲಾಗುತ್ತದೆ. ಜ್ವರದ ಲಕ್ಷಗಳು ಪೂರ್ತಿ ಗುಣವಾಗುವವರೆಗೂ ವ್ಯಾಯಾಮಕ್ಕೆ ಇಳಿಯಲೇ ಬೇಡಿ ಎಂದೇ ಹೇಳಲಾಗುತ್ತದೆ.
ಇದನ್ನೂ ಓದಿ:ಮನೆಯಲ್ಲಿ ತಯಾರು ಮಾಡಿದ ಈ 8 ಜ್ಯೂಸ್ಗಳು ದೇಹದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ. ಏನಿದು ಯೂರಿಕ್ ಆಮ್ಲ?
ವೈದ್ಯರು ನೀಡುವ ಸಲಹೆಯೂ ಕೂಡ ಅದೇ. ಒಂದು ವೇಳೆ ನಿಮಗೆ ಅತಿಯಾದ ಜ್ವರ ಕಾಣಿಸಿಕೊಂಡು ಸೋಂಕು ನಿಮ್ಮ ಶ್ವಾಸಕೋಶಕ್ಕೂ ಕೂಡ ಪಸರಿಸಿಕೊಂಡಲ್ಲಿ ಜಿಮ್ಗೆ ಹೋಗುವುದನ್ನು ಬಿಡುವುದೇ ಒಳ್ಳೆಯದು ಅನ್ನುತ್ತಾರೆ ಗುರುಗ್ರಾಮ್ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರಾದ ಸುನೀಲ್ ಸೇಕ್ರಿ. ಅವರು ಹೇಳುವ ಪ್ರಕಾರ ಜ್ವರ ಬಂದ ಸಮಯದಲ್ಲಿ ಆದಷ್ಟು ಜಿಮ್ಗಳಿಂದ ದೂರ ಇರುವುದೇ ಒಳ್ಳೆಯದು. ಇದು ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
ನೀವು ಜ್ವರದಿಂದ ಬಳಲಿ ಕೊಂಚ ಹುಷಾರದ ಮೇಲೆಯೂ ಕೂಡ ಸುಸ್ತು ಸೇರಿ ಹಲವು ಸಮಸ್ಯೆಗಳು ಇದ್ದೇ ಇರುತ್ತವೆ. ಹೀಗಾಗಿ ಜ್ವರ ಇಳಿದರೂ ಕೂಡ ಕೆಲವು ದಿನಗಳ ಕಾಲ ಜಿಮ್ಗೆ ಹೋಗಬಾರದು. ನಿಧಾನಕ್ಕೆ ನಿಮ್ಮ ದೇಹದಲ್ಲಿ ಮತ್ತೆ ಕಸರತ್ತಿಗೆ ತಯಾರಾಗಿರುವ ಸೂಚನೆಗಳು ಕಾಣಿಸಿಕೊಳ್ಳುವ ತನಕ ಕಾಯಬೇಕು. ಹೀಗೆ ಹುಷಾರಾಗಿ ಬಂದ ಕೂಡಲೇ, ನಿತ್ಯ ಮಾಡುತ್ತದ್ದ ಕಸರತ್ತುಗಳನ್ನು ಮಾಡಬಾರದು. ನಿತ್ಯ ಮಾಡುವಷ್ಟು ಗಂಟೆಗಳ ಕಾಲ ಮಾಡಬಾರದು. ಸರಳ ಹಾಗೂ ಸುಲಭ ವ್ಯಾಯಾಮಗಳನ್ನು ಮಾಡುತ್ತಾ ದಿನ ಕೆಲವು ದಿನಗಳು ಕಳೆದ ಮೇಲೆ ನಿತ್ಯ ನೀವು ಮಾಡುತ್ತಿದ್ದ ಹೆವ್ವೀ ವರ್ಕೌಟ್ಗಳನ್ನು ಮಾಡಬಹುದು ಎಂದು ಹೇಳುತ್ತಾರೆ ವೈದ್ಯರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ