Advertisment

ಮೋದಿ ಸಂಪುಟದಲ್ಲಿಂದು ರಾಜ್ಯದ ನಾಲ್ವರಿಗೆ ಸ್ಥಾನ ಸಿಗೋದು ಪಕ್ಕಾ? ಅವ್ರು ಯಾರೆಲ್ಲಾ ಗೊತ್ತಾ?

author-image
AS Harshith
Updated On
ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?
Advertisment
  • ಇಂದು ಮೋದಿ ಪದಗ್ರಹಣ.. ಸಂಜೆ 7.15ಕ್ಕೆ ಐತಿಹಾಸಿಕ ಕಾರ್ಯಕ್ರಮ
  • ಅನುಭವಿಗಳ ತಂಡ ಕಟ್ಟೋದು ಈ ಬಾರಿ ಮೋದಿಗೆ ದೊಡ್ಡ ಸವಾಲು
  • ಕರ್ನಾಟಕ ರಾಜ್ಯದ ಈ ನಾಲ್ವರು ಪ್ರಮಾಣ ವಚನ ಸ್ವೀಕರಿಸೋದು ಫಿಕ್ಸ್?

ದೊಡ್ಡಣ್ಣನಿಗೆ ದೊಡ್ಡ ಖಾತೆ, ಚಿಕ್ಕವನಿಗೆ ಚಿಕ್ಕ ಖಾತೆ ಅನ್ನೋ ಚೊಕ್ಕಣ್ಣರ ಮಾತು ಇರಿಸು ಮುರುಸು ಸೃಷ್ಟಿಸಿದೆ. ಸಂಜೆ 7.15ಕ್ಕೆ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಯಾರಿಗೆ ಪ್ರಮಾಣ ವಚನ ಸ್ವೀಕರಿಸುವ ಭಾಗ್ಯ ಸಿಗಲಿದೆ ಅನ್ನೋದು ದೇಶದಲ್ಲೇ ದೊಡ್ಡ ಕುತೂಹಲ ಸೃಷ್ಟಿಸಿದೆ.

Advertisment

ನಮೋ ಸಂಪುಟದಲ್ಲಿ ರಾಜ್ಯಕ್ಕೆ ಸಿಗುತ್ತಾ ನಾಲ್ಕು ಸ್ಥಾನ?

ನಮೋ ಕನಸಿನ ಕ್ಯಾಬಿನೆಟ್​​ ಹೇಗಿರಲಿದೆ? ಸಂಪುಟಕ್ಕೆ ಯಾರೆಲ್ಲಾ ಪರಿಣಿತರು ಸೇರಲಿದ್ದಾರೆ. ಆಯಾ ರಂಗಗಳ ಸಾಧಕರಿಗೆ ಮಣೆ ಹಾಕಲಾಗುತ್ತಾ? ಇಂತಹ ಹತ್ತಾರು ಪ್ರಶ್ನೆಗಳು ರೈಸಿನಾ ಹಿಲ್​ ಸುತ್ತ ಪ್ರತಿಧ್ವನಿ ಏನೋ ಆಗ್ತಿದೆ. ಆದ್ರೆ, ಅನುಭವಿಗಳ ತಂಡ ಕಟ್ಟೋದು ಈ ಬಾರಿ ಮೋದಿ ಕಷ್ಟ ಕಷ್ಟ.

ಇನ್ನು, 3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಏನೋ ಸ್ವೀಕರಿಸ್ತಿದ್ದಾರೆ. ಆದ್ರೆ, ರಾಜ್ಯದಿಂದ ಯಾರಿಗೆಲ್ಲಾ ಅವಕಾಶ, ಸ್ಥಾನಮಾನ ಸಿಗಲಿದೆ ಅನ್ನೋ ಚರ್ಚೆ ದಟ್ಟವಾಗಿ ಹಬ್ಬಿದೆ. ಮೂಲಗಳ ಪ್ರಕಾರ ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ರಾಜ್ಯದಿಂದ ಯಾರಿಗೆ ಸಿಗುತ್ತೆ ಸ್ಥಾನ?

ಜೆಡಿಎಸ್​​​ನಿಂದ ಕುಮಾರಸ್ವಾಮಿ ಸಂಪುಟ ದರ್ಜೆ ಸ್ಥಾನ ಸಿಗೋ ಸಾಧ್ಯತೆ ಇದೆ. ಇನ್ನು, ಪ್ರಲ್ಹಾದ್ ಜೋಶಿ ಮತ್ತೊಮ್ಮೆ ಕ್ಯಾಬಿನೆಟ್​​​ ಸೇರೋದು ಪಕ್ಕಾ ಆಗಿದೆ. ಮಾಜಿ ಸಿಎಂ ಬೊಮ್ಮಾಯಿಗೂ ಮೋದಿ ಸಂಪುಟದಲ್ಲಿ ಸೇರ್ತಾರೆ ಅನ್ನೋ ಮಾತು ಇದೆ. ಎಸ್​​ಸಿ ಕೋಟಾದಲ್ಲಿ ಕಾರಜೋಳಗೂ ಲಕ್​​​ ಖುಲಾಯಿಸಬಹುದು ಅನ್ನೋ ಚರ್ಚೆಯೂ ಇದೆ.

Advertisment

ಒಟ್ಟಾರೆ, ಮೋದಿಗೆ ಈ ಬಾರಿಯ ಸಂಪುಟ ರಚನೆ ಸಾಕಷ್ಟು ಸಂಕಟವನ್ನೇ ತಂದಿಟ್ಟಿದೆ. ಮಿತ್ರ ಕೂಟಕ್ಕೆ ಮಣೆ ಹಾಕಬೇಕು. ಜೊತೆಗೆ ಮುಂದಿನ ಐದು ತಿಂಗಳಲ್ಲಿ ಎದುರಾಗುವ ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ ಪುಟಿದೇಳಬೇಕಿದೆ. ಹೀಗಾಗಿ ಎಲೆಕ್ಷನ್​​​ ನಡೆಯುವ ರಾಜ್ಯಗಳಿಗೆ ಸಂಪುಟದಲ್ಲಿ ವಿಶೇಷ ಅವಕಾಶ ಸಿಗೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment