ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೋದು ಒಳ್ಳೆಯದಾ? ಈ ಅನುಮಾನ ಕಾಡಿದೆಯಾ?

author-image
Ganesh
Updated On
ಯೋ-ಯೋ ಟೆಸ್ಟ್​; ಜಸ್ಟ್​ ಪಾಸ್ ಆದ ಫಿಟ್ನೆಸ್ ಹೀರೋ ವಿರಾಟ್ ಕೊಹ್ಲಿ.. ಫ್ಯಾನ್ಸ್​ಗೆ ಬೇಸರ ​​​​​​​​​​​​​​​​​​
Advertisment
  • ಉತ್ತಮ ಆರೋಗ್ಯಕ್ಕೆ ಬೆಳಗ್ಗೆ ವ್ಯಾಯಾಮ ಬೆಸ್ಟ್
  • ತೂಕ ಇಳಿಸಿಕೊಳ್ಳಲು ಅನೇಕರು ವ್ಯಾಯಾಮ ಮಾಡ್ತಾರೆ
  • ವರ್ಕೌಟ್ ಮಾಡುವ ಮೊದಲು ಏನನ್ನು ತಿಂದ್ರೆ ಒಳ್ಳೆಯದು?

ಅನೇಕರು ಬೆಳಗ್ಗೆ ವ್ಯಾಯಾಮ ರೂಢಿಸಿಕೊಂಡಿದ್ದಾರೆ. ಎದ್ದ ತಕ್ಷಣ ವ್ಯಾಯಾಮ ಮಾಡ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕೇ? ಏನಾದರೂ ತಿಂದು ವ್ಯಾಯಾಮ ಮಾಡೋದು ಒಳ್ಳೆಯದೇ? ಎಂಬ ಅನುಮಾನ ಅನೇಕರಿಗಿದೆ.

ಹಲವರು ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುತ್ತಾರೆ. ಕೆಲವರು ಜಿಮ್‌ಗೆ ಓಡುತ್ತಾರೆ. ಇನ್ನೂ ಕೆಲವರು ನಿಯಮಿತವಾಗಿ ಕೆಲಸ ಮಾಡುತ್ತಾರೆ. ವಿಷಯ ಏನೆಂದರೆ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.

ಇದನ್ನೂ ಓದಿ:ಚಹಾಲ್ ಪತ್ನಿ ಭಾರೀ ಆಕ್ರೋಶ.. ‘ಓಂ ನಮಃ ಶಿವಾಯ’ ಎಂದು ಧನಶ್ರೀ ಹೇಳಿದ್ದೇನು..?

publive-image

ಅಸಲಿ ವಿಚಾರ ಏನೆಂದರೆ ರಾತ್ರಿ ನಿದ್ರೆ ಮಾಡಿದ ನಂತರ ಗ್ಲೈಕೊಜೆನ್ (ಸ್ಟೆರಾಯ್ಡ್ ಕಾರ್ಬೋಹೈಡ್ರೇಟ್​ಗಳು) ದೇಹದಲ್ಲಿ ಖಾಲಿಯಾಗುತ್ತದೆ. ಬೆಳಗ್ಗೆ ಎದ್ದಾಗ ಗ್ಲೈಕೋಜೆನ್ ಬದಲಿಗೆ, ಕೊಬ್ಬು ವೇಗವಾಗಿ ಹರಿಯುತ್ತದೆ. ಅದಕ್ಕಾಗಿಯೇ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕೇ ಅಥವಾ ಬೇಡವೇ ಎಂಬ ಅನುಮಾನ ಬರುತ್ತದೆ.

ಬಹುತೇಕರು ಖಾಲಿ ಹೊಟ್ಟೆಯಲ್ಲಿ ಕೆಲಸ ಮಾಡುವಾಗ ಹಾಯಾಗಿ ಇರುತ್ತಾರೆ. ಕೆಲವು ಮಂದಿ ತೊಂದರೆಗೆ ಸಿಲುಕುತ್ತಾರೆ. ಅಸಲಿಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ಗ್ಲೈಕೋಜೆನ್ (Glycogen) ಭಾರೀ ಪ್ರಮಾಣದಲ್ಲಿ ನಷ್ಟವಾಗಲಿದೆ. ಪರಿಣಾಮ ನಿಮ್ಮ ದೇಹ ಸಹಜವಾಗಿಯೇ ದುರ್ಬಲಗೊಳ್ಳುತ್ತದೆ.

ಇದನ್ನೂ ಓದಿ:ಗ್ರಾಂಡ್ ಫಿನಾಲೆಗೂ ಮುನ್ನ ಬಿಗ್​ಬಾಸ್​​ಗೆ ಚಹಾಲ್, ಅಯ್ಯರ್ ಪ್ರವೇಶ..!

publive-image

ಇಂಥ ಪರಿಸ್ಥಿತಿಯಲ್ಲಿ ವ್ಯಾಯಾಮ ಮಾಡುವುದು ಕಷ್ಟವಾಗುತ್ತದೆ. ಬೆಳಗ್ಗೆ ಸ್ವಲ್ಪ ಕಡಿಮೆ ತಿನ್ನುವುದು ಮತ್ತು ವ್ಯಾಯಾಮ ಮಾಡುವುದು ಪ್ರಯೋಜನಕಾರಿ. ವ್ಯಾಯಾಮಕ್ಕೂ ಮೊದಲು ಬಾಳೆಹಣ್ಣು, ಸೇಬು ಹಣ್ಣು ತಿನ್ನಬಹುದು. ಬಾಳೆಹಣ್ಣು ತಿಂದರೆ ದೇಹ ಸದೃಢವಾಗುತ್ತದೆ. ಹೊಟ್ಟೆ ತುಂಬಾ ಆಹಾರ ಸೇವಿಸಿ ವ್ಯಾಯಾಮ ಮಾಡೋದು ಕಷ್ಟದ ಕೆಲಸ.

ಇದನ್ನೂ ಓದಿ:ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾಣಬಿಟ್ಟ 6 ಭಕ್ತರು.. ಕಾಲ್ತುಳಿತ ಸ್ಥಳಕ್ಕೆ ಇಂದು CM ಭೇಟಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment