newsfirstkannada.com

ಬೆಂಗಳೂರು ಕೆಫೆ ಸ್ಫೋಟದ​ ಹಿಂದಿದೆಯಾ ಕರ್ನಲ್​ ಕೈವಾಡ? ಇವ್ನ ನಿರ್ದೇಶನದಂತೆ ನಡೆಯುತ್ತಿದೆಯಾ ಬಾಂಬ್​ ಬ್ಲಾಸ್ಟ್​

Share :

Published March 3, 2024 at 11:11am

Update March 3, 2024 at 11:12am

    ಕೆಫೆ ಬ್ಲಾಸ್ಟ್​ಗೂ ಅಲ್ ಹಿಂದ್ ಮೊಡ್ಯೂಲ್ ಲಿಂಕ್​ ಇದೆಯಾ?

    ತೀರ್ಥಹಳ್ಳಿ ಮೊಡ್ಯೂಲ್ ಇನ್ನೂ ಆಕ್ಟೀವ್ ಇದೆಯಾ?

    ಮಂಗಳೂರು ಕುಕ್ಕರ್ ಬ್ಲಾಸ್ಟ್​ಗೆ ಆದೇಶ‌ ನೀಡಿದ್ದ ಕರ್ನಲ್

ಮಂಗಳೂರು: ಮಾರ್ಚ್​ 1ರಂದು ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಬಾಂಬ್​ ಬ್ಲಾಸ್ಟ್​ ಆಗಿತ್ತು. 10 ಜನರು ಈ ದುರ್ಘಟನೆಯಿಂದ ಗಾಯಗೊಂಡಿದ್ದರು. ಹೀಗಿದ್ದರು ಈವರೆಗೆ ಆರೋಪಿಯ ಸುಳಿವು ಸಿಕ್ಕಿಲ್ಲ. ಸದ್ಯ ಆತನಿಗಾಗಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬಾಂಬರ್​ಗಾಗಿ ಸರ್ಚ್ ಮಾಡುತ್ತಿದ್ದಾರೆ. ಜೊತೆಗೆ ಹಲವು ಆಯಾಮದಲ್ಲಿ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.

ಬೆಂಗಳೂರು ಕೆಫೆ ಸ್ಪೋಟ ಪ್ರಕರಣ ಹಿಂದೆ ಅಲ್ ಹಿಂದ್ ಮೊಡ್ಯೂಲ್ ಲಿಂಕ್​ ಇದೆಯಾ ಎಂಬ ಅನುಮಾನವು ಪೊಲೀಸರನ್ನು ಕಾಡಿದೆ. ಮಂಗಳೂರು- ಶಿವಮೊಗ್ಗ ಸ್ಪೋಟ ಪ್ರಕರಣಕ್ಕೂ ಬೆಂಗಳೂರು ಕೆಫೆ ಸ್ಪೋಟಕ್ಕೂ ಲಿಂಕ್ ಇದೆಯಾ ಎಂದ ಅನುಮಾನವು ಹುಟ್ಟಿಕೊಂಡಿದೆ. ಮಾತ್ರವಲ್ಲದೆ, ಮಂಗಳೂರು ಕುಕ್ಕರ್ ಬ್ಲಾಸ್ಟ್ ನ‌ ಮಾಸ್ಟರ್ ಮೈಂಡ್​ಗೂ ಈ ಪ್ರಕರಣಕ್ಕೆ ಸಂಬಂಧವಿದೆಯಾ ಎಂಬೆಲ್ಲಾ ನಿಟ್ಟಿನಲ್ಲಿ ಸದ್ಯ ತನಿಖೆ ನಡೆಯುತ್ತಿದೆ.

ಅಬ್ದುಲ್ ಮತೀನ್ ಹಾಗು ಕರ್ನಲ್ ಮಂಗಳೂರು- ಶಿವಮೊಗ್ಗ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಆಗಿದ್ದರು. ಇದೀಗ ರಾಮೇಶ್ವರಂ ಕೆಫೆ ಕೃತ್ಯದ ಹಿಂದೆ ಉಗ್ರರ ತೀರ್ಥಹಳ್ಳಿ ಅಲ್ ಹಿಂದ್ ಮೊಡ್ಯೂಲ್ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ನ ಭಟ್ಕಳ ಮೊಡ್ಯೂಲ್ ನಂತೆ ಅಬ್ದುಲ್ ಮತೀನ್ ತೀರ್ಥಹಳ್ಳಿ ಮೊಡ್ಯೂಲ್ ರಚಿಸಿದ್ದನು. ಆದರೆ ಕರ್ನಲ್​ ತೀರ್ಥಹಳ್ಳಿ ಮೊಡ್ಯೂಲ್ ಅನ್ನು ಮುನ್ನಡೆಸುತಿದ್ದನು.

ಮತ್ತೊಂದೆಡೆ ಉಗ್ರರು ತೀರ್ಥಹಳ್ಳಿ ಮೊಡ್ಯೂಲ್ ಇನ್ನೂ ಆಕ್ಟೀವ್ ಇದೆ ಅನೋದನ್ನ ತೋರಿಸೋ ಪ್ರಯತ್ನ ಮಾಡುತ್ತಿದ್ದಾರಾ? ಅದಕ್ಕಾಗಿ ಬೆಂಗಳೂರು ಕೆಫೆ ಬ್ಲಾಸ್ಟ್ ಮಾಡಿದ್ರಾ ಅನ್ನೋ ಪ್ರಶ್ನೆ ಪೊಲೀಸರಲ್ಲಿ ಹುಟ್ಟಿಕೊಂಡಿದೆ.

ಯಾರು‌ ಈ ನಿಗೂಢ ವ್ಯಕ್ತಿ ಕರ್ನಲ್ ?

ಕರ್ನಲ್ ಮಂಗಳೂರು ಕುಕ್ಕರ್ ಬ್ಲಾಸ್ಟ್ ಗೆ ಆದೇಶ‌ ನೀಡಿದ್ದನು. ಮಂಗಳೂರು – ಶಿವಮೊಗ್ಗ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರರಾದ ಮಾಝ್ ಮುನೀರ್, ಶಾರೀಕ್, ಅರಾಫಾತ್ ಅಲಿ, ಯಾಸಿನ್ ಗೆ ಕರ್ನಲ್ ನಿರ್ದೇಶನ‌ ನೀಡುತ್ತಿದ್ದನು. ಶಂಕಿತ ಉಗ್ರ ಶಾರೀಕ್ ವಿಚಾರಣೆ ಸಂದರ್ಭದಲ್ಲಿ ಕರ್ನಲ್ ಬಗ್ಗೆ ಮಾಹಿತಿ ನೀಡಿದ್ದನು.

ಅಬ್ದುಲ್ ಮತೀನ್ ಇನ್ನೂ ತಲೆಮರೆಸಿ ಕೊಂಡಿದ್ದಾನೆ. ಹಲವಾರು ಯುವಕರ ಬ್ರೇನ್ ವಾಷ್ ಮಾಡಿ ಇಂತಹ ಚಟುವಟಿಕೆಗೆಗೆ ಎಳೆದುಕೊಳ್ಳುತ್ತಿದ್ದನು. ಕರ್ನಲ್​ ಜೊತೆಗೆ ಅಬ್ದುಲ್ ಮತೀನ್ ಕೂಡ ಸೇರಿ ಉಗ್ರ ಚಟುವಟಿಕೆ ಮಾಡುತ್ತಿದ್ದರು. ಸದ್ಯ ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಕೆಫೆ ಸ್ಫೋಟದ​ ಹಿಂದಿದೆಯಾ ಕರ್ನಲ್​ ಕೈವಾಡ? ಇವ್ನ ನಿರ್ದೇಶನದಂತೆ ನಡೆಯುತ್ತಿದೆಯಾ ಬಾಂಬ್​ ಬ್ಲಾಸ್ಟ್​

https://newsfirstlive.com/wp-content/uploads/2024/03/Terroist.jpg

Load More