/newsfirstlive-kannada/media/post_attachments/wp-content/uploads/2024/10/MEAL-PREPPING-1.jpg)
ಇದು ವೇಗವಾಗಿ ಓಡುತ್ತಿರುವ ಜಗತ್ತು. ಯಾರಲ್ಲೂ ಕೂಡ ಸಮಯವಿಲ್ಲ. ಸರಿಯಾದ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿಕೊಂಡು ಊಟ ಮಾಡುವುದಕ್ಕೆ ಯಾರಿಗೂ ಕೂಡ ಪುರಸೊತ್ತಿಲ್ಲ. ಹೀಗಾಗಿ ಇಂದಿನ ತಲೆಮಾರು ಒಂದು ಊಟವನ್ನು ಸ್ಕಿಪ್ ಮಾಡುತ್ತಾರೆ, ಇಲ್ಲವೇ ಸ್ವಿಗ್ಗೀ, ಜೊಮ್ಯಾಟೊದಂತಹ ಆ್ಯಪ್ಗಳ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ಮನೆಯೂಟವನ್ನು ಬಿಟ್ಟು ಬೇರೆಲ್ಲೂ ನಾನು ಊಟವನ್ನು ಮಾಡುವುದಿಲ್ಲ ಅಂತ ಶಪಥಗೈದಿರುತ್ತಾರೆ. ಆದ್ರೆ ನಿಜಕ್ಕೂ ಹೇಳಬೇಕು ಅಂದ್ರೆ ಅವರ ಯಾರ ಬಳಿಯೂ ಕೂಡ ಅದಕ್ಕೆಲ್ಲಾ ಸಮಯವಿರೋದಿಲ್ಲ. ಅಡುಗೆ ಮನೆಯಲ್ಲಿ ಹೆಜ್ಜೆಯಿಡಲೂ ಕೂಡ ಗಡಿಯಾರ ನೋಡುವ ಸ್ಥಿತಿ ಇದೆ ಈವಾಗ.
ಹೀಗಿರುವಾಗ ಊಟವನ್ನು ಸ್ಕಿಪ್ ಮಾಡುವುದು ಹಾಗೂ ಅದಕ್ಕಾಗಿ ಹೊರಗಿನ ಊಟದ ಮೇಲೆಯೇ ಅವಲಂಬಿತರಾಗುವುದು ಏನು ಹೊಸದಲ್ಲ. ಅದರಲ್ಲೂ ಈಗ ಆನ್ಲೈನ್ಗಳಲ್ಲಿ 15 ನಿಮಿಷದಲ್ಲಿ ಅಡುಗೆ ಮಾಡಿ. 10 ನಿಮಿಷದಲ್ಲಿ ಈ ಬ್ರೇಕ್ಫಾಸ್ಟ್ ರೆಡಿ ಮಾಡಿ ಅಂತ ವಿವಿಧ ಖಾದ್ಯಗಳ ಬಗ್ಗೆ ಅರಿವು ಮೂಡಿಸುವವರೂ ಕೂಡ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಸಂಖ್ಯೆಯೂ ಜಾಸ್ತಿಯಾಗಿದೆ. ಇದೆಲ್ಲದರ ನಡುವೆ ಈಗ ಹೊಸ ಟ್ರಂಡ್ ಒಂದು ಸೃಷ್ಟಿಯಾಗಿದೆ. ಅದೇ ಮೀಲ್ ಪ್ರೆಪ್ಪಿಂಗ್(Meal Prepping) .
ಇದನ್ನೂ ಓದಿ:ಜ್ವರ ಇರುವಾಗ ನಾವು ವರ್ಕೌಟ್ ಮಾಡಬಹುದಾ..? ತಜ್ಞರು ಏನು ಹೇಳ್ತಾರೆ.?
ಸದ್ಯ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿರುವ ದೊಡ್ಡ ಟ್ರೆಂಡ್ ಅಂದ್ರೆ ಅದು ಮೀಲ್ ಪ್ರೆಪ್ಪಿಂಗ್. ಮೀಲ್ ಪ್ರೆಪ್ಪಿಂಗ್ ಅಂದ್ರೆ, ಇರುವ ಒಂದೇ ಸಮಯದಲ್ಲಿ ಎಲ್ಲಾ ಟೈಮಿನ ಅಡುಗೆಯನ್ನು ಮಾಡಿಟ್ಟುಬಿಡುವುದು.ಅಂದ್ರೆ ಬೆಳಗಿನ ಉಪಹಾರ ಮಧ್ಯಾಹ್ನ ಹಾಗು ರಾತ್ರಿಯ ಅಡುಗೆಯನ್ನು ಏಕಕಾಲಕ್ಕೆ ಮಾಡುವುದೇ ಮೀಲ್ ಪ್ರೆಪ್ಪಿಂಗ್. ವಿದೇಶಗಳಲ್ಲಿದ್ದ ಈ ಒಂದು ಟ್ರೆಂಡ್ ಸದ್ಯ ಭಾರತದಲ್ಲಿಯೂ ಕೂಡ ಸದ್ದು ಮಾಡುತ್ತಿದೆ. ಇದು ಭಾರತಕ್ಕೆ ಒಳ್ಳೆಯ ಯೋಚನೆಯಾ ಅಂದ್ರೆ, ಹೌದು ಅನ್ನುತ್ತಾರೆ ತಜ್ಞರು. ಇದು ಸಮಯ ಹಾಗೂ ಒತ್ತಡ ಎರಡನ್ನೂ ಕೂಡ ಕಡಿಮೆ ಮಾಡುತ್ತದೆ ಎನ್ನುತ್ತಾರೆ ದೆಹಲಿಯ ರೋಜ್ ಕೆಫೆಯ ಚೇಫ್ ತರಿಣಿ ಅಹುಜಾ.
ಇದನ್ನೂ ಓದಿ:ಪ್ರೊಟೀನ್ಗಾಗಿ ದಿನಕ್ಕೆ ಎರಡೇ ಮೊಟ್ಟೆ ಸಾಕಗಲ್ಲ, ಹೆಚ್ಚಿನ ಪೌಷ್ಠಿಕಾಂಶಕ್ಕಾಗಿ ಬೇಕು ಹೆಚ್ಚು ಹೆಚ್ಚು ಆಹಾರ
ಆದ್ರೆ ಆತಿಥ್ಯ ಉದ್ಯದಲ್ಲಿ ವಿಚಾರದಲ್ಲಿ ಈ ಒಂದು ಮೀಲ್ ಪ್ರೆಪ್ನ ವಿಧಾನವೇ ಬೇರೆ. ಅಲ್ಲಿ ಫ್ರೆಶ್ ಆಗಿ ರೆಡಿಯಾಗಿರುವ ಅಡುಗೆಯನ್ನೇ ನೀಡಬೇಕಾಗುತ್ತದೆ. ಮೀಲ್ ಪ್ರೆಪ್ಪಿಂಗ್ ರೀತಿ ಅಡುಗೆಯನ್ನು ರೆಡಿ ಮಾಡಿ ಫ್ರಿಡ್ಜ್ನಲ್ಲಿಯೂ ಫ್ರೀಜರ್ನಲ್ಲಿಯೋ ಇಡಲು ಸಾಧ್ಯವಿಲ್ಲ. ಬಂದ ಅತಿಥಿಗಳಿಗೆ ಅವರು ಹೇಳಿದ ಊಟವನ್ನು ತಾಜಾ ತಯಾರಿಸಿ ನೀಡಬೇಕಾಗುತ್ತದೆ ಎನ್ನುತ್ತಾರೆ ತರಿಣಿ ಅಹುಜಾ.
ಭಾರತದಲ್ಲಿಯೂ ಈಗ ಜಾಗತೀಕರಣದ ಪ್ರಭಾವದಿಂದಾಗಿ ಜನರಲ್ಲಿ ಸಮಯದ ಅಭಾವ ತುಂಬಾ ಇದೆ. ಹೀಗಾಗಿಯೇ ಮೀಲ್ ಪ್ರೆಪ್ನಂತಹ ಐಡಿಯಾಗಳಿಗೆ ಕಟ್ಟುಬೀಳುವ ಅನಿವಾರ್ಯತೆ ಶುರುವಾಗಿದೆ.ಇದು ಕೂಡ ಒಂದು ಉತ್ತಮ ಐಡಿಯಾನೇ. ಸಮಯದ ಉಳಿತಾಯದ, ಶ್ರಮವಾದರೂ ಕೂಡ ಒತ್ತಡದಿಂದ ಅಡುಗೆ ಮಾಡುವ ಪರಿಸ್ಥಿತಿಯಿಂದ ಅಥವಾ ಅಚೆ ತಿಂದು ಆರೋಗ್ಯ ಕಡೆಸಿಕೊಳ್ಳುವ ಹಾಗೂ ಅತಿಹೆಚ್ಚು ಖರ್ಚುಗಳಿಗೆ ನಮ್ಮನ್ನು ನಾವು ತೊಡಗಿಸುವ ಅನಿವಾರ್ಯಕ್ಕೆ ಬೀಳುತ್ತೇವೆ ಹೀಗಾಗಿ ಭಾರತದಲ್ಲಿಯೂ ಸಹ ಈ ಒಂದು ವಿಧಾನ ಒಳ್ಳೆಯದೇ ಎನ್ನುತ್ತಾರೆ ತಜ್ಞರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ