/newsfirstlive-kannada/media/post_attachments/wp-content/uploads/2024/10/TETRA-PACK-MILK.jpg)
ನೀವು ಭಾರತದಿಂದ ಆಚೆಗೆ ಪ್ರಯಾಣ ಬೆಳೆಸುವಾಗ ಪ್ಯಾಕಿಂಗ್ ಮಾಡುವ ವೇಳೆ ನಿಮ್ಮ ಬ್ಯಾಗ್ನಲ್ಲಿ ತಪ್ಪದೇ ಒಂದು ಟೆಟ್ರಾ ಪ್ಯಾಕ್ ಹಾಲು ಇದ್ದೆ ಇರುತ್ತದೆ. ಯಾಕಂದ್ರೆ ನೀವು ಹೋಗುವ ದೇಶದಲ್ಲಿನ ಹಾಲಿನ ಗುಣಮಟ್ಟ ಎಂತಹದು ಇರುತ್ತೆ ಅನ್ನೋದರ ಬಗ್ಗೆ ನಮಗೆ ಐಡಿಯಾ ಇರೋದಿಲ್ಲ. ಹೀಗಾಗಿಯೇ ಒಂದು ಟೆಟ್ರಾಪ್ಯಾಕ್ನಲ್ಲಿರುವ ಹಾಲು ನಿಮ್ಮ ಬ್ಯಾಗ್ ಸೇರಿಕೊಳ್ಳುತ್ತೆ. ಈ ಟೆಟ್ರಾಪ್ಯಾಕ್ ಹಾಲಿನ ಅತಿಹೆಚ್ಚು ಬಳಕೆ ಆಗಿದ್ದು, ಕೋವಿಡ್ ಸಮಯದಲ್ಲಾದ ಲಾಕ್ಡೌನ್ ವೇಳೆ. ಪದೇ ಪದೇ ಅಂಗಡಿಗೆ ಹೋಗುವ ಬದಲು ಎಷ್ಟು ದಿನವಿಟ್ಟರು ಹಾಳಾಗದ ಟೆಟ್ರಾಪ್ಯಾಕ್ ಹಾಲನ್ನೇ ಜನರು ಜಾಸ್ತಿ ಕೊಂಡುಕೊಂಡಿದ್ದರು.
ಇದನ್ನೂ ಓದಿ: ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ; ಇದರಿಂದ ಆದ ಲಾಭ ಗೊತ್ತಾದ್ರೆ ಶಾಕ್ ಆಗ್ತೀರಾ!
ಇತ್ತೀಚೆಗೆ ನೀವು ಗಮನಿಸಿ ಪೌಚ್ ಹಾಲಿಗಿಂತ ಜನರು ಜಾಸ್ತಿ ಟೆಟ್ರಾಪ್ಯಾಕ್ ಹಾಲನ್ನೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ? ಹಾಗಿದ್ರೆ ಆರೋಗ್ಯ ದೃಷ್ಟಿಯಿಂದ ಯಾವುದು ಉತ್ತಮ ? ಪೌಚ್ ಹಾಲಾ ಅಥವಾ ಟೆಟ್ರಾಪ್ಯಾಕ್ ಹಾಲಾ ಅಂತ ತಜ್ಞರನ್ನು ಕೇಳಿದರೆ ಅವರು ಹೇಳುವುದು ಟೆಟ್ರಾಪ್ಯಾಕ್ ಹಾಲು ಅಂತ. ಟೆಟ್ರಾಪ್ಯಾಕ್ ಅಥವಾ ಅತಿ ಹೆಚ್ಚಿನ ತಾಪಮಾನದಲ್ಲಿ ಸಿದ್ಧಗೊಂಡಿರುವ ಹಾಲನ್ನು ನಾವು ಬಹಳಷ್ಟು ದಿನ ಸುಲಭವಾಗಿ ಕಾಯ್ದಿಡಬಹುದು. ಅದರ ಪ್ಯಾಕ್ ಓಪನ್ ಆಗುವವರೆಗೂ ಅದು ಹಾಳಾಗುವುದಿಲ್ಲ. ಯಾವುದೇ ರೆಫ್ರಿಜೇಟರ್ ಸಹಾಯವಿಲ್ಲದೇ ನಾವು ಅದನ್ನು ಸುರಕ್ಷಿತವಾಗಿ ಇಡಬಹುದು ಎಂದು ಬೆಂಗಳೂರಿನ ವೈಟ್ಫಿಲ್ಡ್ನಲ್ಲಿರುವ ಆಸ್ತೆರ್ ಆಸ್ಪತ್ರೆಯ ವೈದ್ಯರಾದ ಡಾ ವೀಣಾ.ವಿ ಅವರು ಹೇಳುತ್ತಾರೆ.
ಇದನ್ನೂ ಓದಿ:ಲಂಡನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಿಂಚಿದ ರಾಧಿಕಾ ಆಪ್ಟೆ; ಬೇಬಿ ಬಂಪ್ ಫೋಟೋಗೆ ಪೋಸ್ ಕೊಟ್ಟ ನಟಿ
ಈ ಒಂದು ಟೆಟ್ರಾಪ್ಯಾಕ್ 135 ಡಿಗ್ರಿ ಸೆಲ್ಸಿಯಸ್ನಿಂದ 150 ಡಿಗ್ರಿಸೆಲ್ಸಿಯಸ್ವರೆಗಿನ ತಾಪಮಾನದಲ್ಲಿ ಕಾಯ್ದು ಬಂದಿರುತ್ತದೆ. ಅದರಿಂದಾಗಿ ಕೆಲವೇ ನಿಮಿಷಗಳ ಈ ಪ್ರಕ್ರಿಯೆಯಲ್ಲಿ ಅದರಲ್ಲಿರುವ ರೋಗಕಾರ ಅಂಶಗಳೆಲ್ಲವೂ ನಾಶವಾಗಿರುತ್ತವೆ. ಹೀಗಾಗಿ ನಾವು ಪ್ಯಾಕ್ ಓಪನ್ ಮಾಡುವವರೆಗೂ ಹಾಲು ಕೆಡುವುದಿಲ್ಲ ಸುರಕ್ಷಿತವಾಗಿ ಹಾಗೂ ಆರೋಗ್ಯಕರವಾಗಿಯೇ ಇರುತ್ತದೆ ಎನ್ನುತ್ತಾರೆ.
ಹಾಲನ್ನು ಹೀಗೆ ಬಿಸಿ ಮಾಡುವುದರಿಂದ ಎರಡು ರೀತಿಯ ಪ್ರಯೋಜನಗಳಿವೆ.ಅದರ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು ಹಾಗೂ ನ್ಯೂಟ್ರಿಷನ್ ಮತ್ತು ಟೇಸ್ಟ್ ಕೂಡ ಉತ್ತಮಗೊಳಿಸಬಹುದು ಎಂದು ಡಾ ವೀಣಾ ಹೇಳುತ್ತಾರೆ.
ಇದನ್ನು ದೀರ್ಘಕಾಲವಾಗಿ ಕೆಡದಂತೆ ಇಟ್ಟುಕೊಳ್ಭಬಹುದು. ನಾವು ಇಟ್ಟುಕೊಂಡಷ್ಟು ದಿನ ಅದು ತನ್ನ ತಾಜಾತನ ಕಳೆದುಕೊಳ್ಳುವುದಿಲ್ಲ. ಅದರ ಜೊತೆಗೆ ಅದರಲ್ಲಿರುವ ನ್ಯೂಟ್ರಿಷನ್ ಅಂಶಕ್ಕೂ ಕೂಡ ಯಾವುದೇ ದಕ್ಕೆ ಬರುವುದಿಲ್ಲ. ಹೀಗಾಗಿ ಪೌಚ್ ಹಾಲು ತಂದು ಅದನ್ನು ಫ್ರಿಡ್ಜ್ನಲ್ಲಿ ಶೇಖರಿಸಿ ಬಳಿಕ ಕಾಯಿಸಿ ಕುಡಿಯುವುದಕ್ಕಿಂತಲೂ ಟೆಟ್ರಾಪ್ಯಾಕ್ ಹಾಲು ಹೆಚ್ಚು ಆರೋಗ್ಯಕರ ಹಾಗೂ ಸುರಕ್ಷಿತ ಎಂದು ತಜ್ಞರು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ