ಇಬ್ಬರು ಮಕ್ಕಳ ತಂದೆ ಜತೆ ನಟಿ ಸಾಯಿ ಪಲ್ಲವಿ ಡೇಟಿಂಗ್​​​​? ಯಾರು ಆ ಸ್ಟಾರ್​ ನಟ?

author-image
Ganesh Nachikethu
Updated On
ಇಬ್ಬರು ಮಕ್ಕಳ ತಂದೆ ಜತೆ ನಟಿ ಸಾಯಿ ಪಲ್ಲವಿ ಡೇಟಿಂಗ್​​​​? ಯಾರು ಆ ಸ್ಟಾರ್​ ನಟ?
Advertisment
  • ಸೌತ್​​​ ಇಂಡಿಯಾದ ಸ್ಟಾರ್​​ ಹಿರೋಯಿನ್​​ ಸಾಯಿ ಪಲ್ಲವಿ
  • ಇವರು ಯಾವಾಗಲೂ ವಿವಾದಗಳಿಂದ ದೂರ ಇರೋರು!
  • ನಟಿ ಸಾಯಿ ಪಲ್ಲವಿ ಬಗ್ಗೆ ಗಾಸಿಪ್​ ಹಬ್ಬಿಸಿದ ಕಿಡಿಗೇಡಿಗಳು

ಸೌತ್​​​ ಇಂಡಿಯಾದ ಸ್ಟಾರ್​​ ಹಿರೋಯಿನ್​​ ಸಾಯಿ ಪಲ್ಲವಿ. ಇವರು ಯಾವಾಗಲೂ ವಿವಾದಗಳಿಂದ ದೂರ ಇರೋರು. ಹಾಗಿದ್ರೂ ಸಾಯಿ ಪಲ್ಲವಿ ಬಗ್ಗೆ ಕಿಡಿಗೇಡಿಗಳು ಗಾಸಿಪ್​ ಹಬ್ಬಿಸುತ್ತಾರೆ. ಈ ಅಂಥದ್ದೇ ರೂಮರ್​ ಒಂದು ಸಾಯಿ ಪಲ್ಲವಿ ಬಗ್ಗೆ ಕೇಳಿ ಬಂದಿದೆ.

ತೆಲುಗು, ತಮಿಳು ಸೇರಿದಂತೆ ಮಲಯಾಳಮ್​​​ನಲ್ಲೂ ಬ್ಯುಸಿಯಾಗಿರೋ ಸಾಯಿ ಪಲ್ಲವಿ ಈಗ ಬಾಲಿವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್​ಗೆ ಕಾಲಿಡುತ್ತಿದ್ದಂತೆ ಸಾಯಿ ಪಲ್ಲವಿ ಬಗ್ಗೆ ಕೆಲವರು ಬೇಕಂತಲೇ ಗಾಸಿಪ್​ ಹರಡಿದ್ದಾರೆ. ಅದರಲ್ಲೂ ಇಬ್ಬರು ಮಕ್ಕಳ ತಂದೆಯೊಂದಿಗೆ ಸಾಯಿ ಪಲ್ಲವಿ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಗಾಳಿಸುದ್ದಿ ಹರಡಿ ಇಮೇಜ್​ ಡ್ಯಾಮೇಜ್​ ಮಾಡಿದ್ದಾರೆ. ಈ ಇಬ್ಬರು ಮಕ್ಕಳ ತಂದೆ ಸೌತ್​​ ಇಂಡಿಯಾದ ಸ್ಟಾರ್​ ನಟ ಎಂದು ಕೂಡ ಹೇಳಲಾಗುತ್ತಿದೆ. ಈ ಹಿಂದೆ ಸಾಯಿ ಪಲ್ಲವಿ ಮದುವೆ ಆಗಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು.

publive-image

ಬಾಲಿವುಡ್​ನಲ್ಲಿ ಸಾಯಿ ಪಲ್ಲವಿ ಫುಲ್​ ಬ್ಯುಸಿ..!

ಸಾಯಿ ಪಲ್ಲವಿ ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ. ಸೌತ್​ ಸಿನಿಮಾಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದವರು ಇವರು. ಈಗ ಇವರಿಗೆ ಆಮಿರ್​ ಖಾನ್​ ಮಗ ಜುನೈದ್​ ಖಾನ್​ ನಟನೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲದೇ ರಣಬೀರ್​ ಕಪೂರ್​ ನಟನೆಯ ರಾಮಾಯಣದಲ್ಲೂ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡುತ್ತಿದ್ದಾರೆ.

ರಾಮಾಯಣ ಸಿನಿಮಾದ ಡೈರೆಕ್ಟರ್​ ನಿತೇಶ್​ ತಿವಾರಿ. ಈಗಾಗಲೇ ಶೂಟಿಂಗ್​ ಸೆಟ್​ನಿಂದ ಕೆಲವು ಫೋಟೋಗಳು ಲೀಕ್ ಆಗಿವೆ. ಸಾಯಿ ಪಲ್ಲವಿ ಸೀತೆಯ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ.

ಇದನ್ನೂ ಓದಿ:ಸಲ್ಲು ಭಾಯ್​ ಬಾಡಿಗಾರ್ಡ್​ಗೆ ಕೋಟಿ ಕೋಟಿ ರೂಪಾಯಿ ಸ್ಯಾಲರಿ..! ಇವರಿಗೆ ಏನೆಂದು ಕರೆಯುತ್ತಾರೆ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment