KPCC ಕುರ್ಚಿ ಕದನ; ವರಸೆ ಬದಲಿಸಿದ ಸತೀಶ್ ಜಾರಕಿಹೊಳಿ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ತಂತ್ರ!

author-image
Gopal Kulkarni
Updated On
ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಬಿಗ್​ ಫೈಟ್​​; ನಾನು ಆಕಾಂಕ್ಷಿ ಎಂದ ಸತೀಶ್​ ಜಾರಕಿಹೊಳಿ
Advertisment
  • 2028ರಲ್ಲೂ ಕಾಂಗ್ರೆಸ್​​ಗೆ ಸಿದ್ದರಾಮಯ್ಯ ಅನಿವಾರ್ಯ!
  • ಸಿದ್ದು ಪೂರ್ಣಾವಧಿ ದಾಳ ಉರುಳಿಸಿದ ಜಾರಕಿಹೊಳಿ
  • ರಾಜಕೀಯದಲ್ಲಿ ಪುಳಕ ತಂದ ಜಾರಕಿಹೊಳಿ ಜಾಣತನ

ಕೆಪಿಸಿಸಿ ಗರಡಿ ಮನೆಯಲ್ಲಿ ಕುರ್ಚಿ ಕುಸ್ತಿ ತಾರಕಕ್ಕೇರಿದೆ.. ನಾನಾ-ನೀನಾ ಜಿದ್ದಿನ ಯುದ್ಧದಲ್ಲಿ ಭರಪೂರ ಅಸ್ತ್ರಗಳು ಪ್ರಯೋಗ ಆಗ್ತಿವೆ.. ಈ ಹೊತ್ತಲ್ಲೇ ಜಾರಕಿಹೊಳಿ ಹೊಸ ಬಾಂಬ್​ ಹಾಕಿದ್ದಾರೆ.. 2028ರಲ್ಲೂ ಸಿದ್ದರಾಮಯ್ಯ ಅನಿವಾರ್ಯ ಎಂದಿದ್ದಾರೆ.. ಈ ಮಾತಿಗೆ ಹಲವರು ತಲೆ ಆಡಿದ್ರೆ, ಇತ್ತ ಡಿಕೆಶಿ ಕ್ಯಾಂಪ್​ ಸಹ ಮಹಾಭಾರತದಲ್ಲಿ ಶ್ರೀಕೃಷ್ಣನ ಸುದರ್ಶನ ಚಕ್ರದಿಂದ ರುಂಡ ಬೇರ್ಪಟ್ಟ ಶಿಶುಪಾಲನ ಕಥೆ ನೆನಪಿಸಿದೆ.

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಮಾಸ್​​​ & ಕ್ಲಾಸ್​​​. ಎರಡು ದಶಕಗಳಿಂದ ಈ ಅಹಿಂದ ರಾಮಯ್ಯ ರಾಜಕೀಯ ಶಕ್ತಿ ಕೇಂದ್ರ. ಈ ಶಕ್ತಿ ಕೇಂದ್ರದ ಸುತ್ತವೇ ರಾಜಕೀಯ ಚಕ್ರ ಪ್ರದಕ್ಷಿಣೆ ಹಾಕ್ತಿದೆ. ಈಗಲೂ ಅಷ್ಟೆ, ಕೋಲು ಹಿಡಿದಾದ್ರೂ ಪರವಾಗಿಲ್ಲ, ಗ್ಯಾರಂಟಿರಾಮಯ್ಯ ರಾಜಕೀಯದಲ್ಲಿದ್ರೆ ಅದರ ಖದರೆಽ ಬೇರೆ. ಪವರ್​​​ ಶೇರಿಂಗ್​​ ಸಮರದ ನಡುವೆ ಸಾಹುಕಾರ್​ ಎಸೆದ 2028ಕ್ಕೂ ಸಿದ್ದು ಕ್ಯಾಪ್ಟನ್​ ಎಂಬ ದಾಳ, ಡಿಕೆಶಿ ಕನಸಿನ ಸಿಂಹಾಸನಕ್ಕೆ ಚೆಕ್​ಮೇಟ್​ ಇಟ್ಟಿದ್ದಾರೆ..

ಇದು ಮೊನ್ನೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್​​ರು ಎಬ್ಬಿಸಿದ್ದ ಹೊಗೆ. ಈಗ ಇದನ್ನೇ ಸಚಿವ ಸತೀಶ್​ ಜಾರಕಿಹೊಳಿ ಸಹ ಸಿದ್ದು ಜಪ ಆರಂಭಿಸಿ ದಾಳ ಉರುಳಿಸಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಸೈಲೆಂಟ್​​​ ಪಾಲಿಟಿಷಿಯನ್​​​​ ಸತೀಶ್ ಬದಲಿಸಿದ ಈ ಹೊಸ ವರಸೆ, ಎದುರಾಳಿ ಕ್ಯಾಂಪ್​ನಲ್ಲಿ ಕಂಪನ ಎಬ್ಬಿಸಿದೆ.

publive-image

ಮುಂದಿನ ಎಲೆಕ್ಷನ್ ಗೆಲ್ಲಲು ಸಿದ್ದರಾಮಯ್ಯ ಬೇಕು

ಬೆಂಗಳೂರಿನಲ್ಲಿ ಮಾತನಾಡಿದ ಜಾರಕಿಹೊಳಿ, ಮುಂದಿನ ಎಲೆಕ್ಷನ್​​ ಗೆಲ್ಲಬೇಕಾದರೆ ಸಿದ್ದರಾಮಯ್ಯ ಬೇಕು. ಚುನಾವಣಾ ರಾಜಕೀಯದಿಂದ ನಿವೃತ್ತಿಯಾದ್ರೂ ಇರಬೇಕು ಅಂತ ಬ್ಯಾಟ್​ ಬೀಸಿದ್ದಾರೆ. ಹೊಸ ನಾಯಕತ್ವ ರೆಡಿ ಆಗೋವರೆಗೆ ಸಿದ್ದರಾಮಯ್ಯ ಅನಿವಾರ್ಯ ಅನ್ನೋ ಸಂದೇಶ ಹೈಕಮಾಂಡ್​​ಗೆ ಮುಟ್ಟಿಸಿದಂತಿದೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ.. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ತೀರ್ಮಾನಿಸುತ್ತಾರೆ ಎಂದಿದ್ದಾರೆ.

publive-image

ಜಾರಕಿಹೊಳಿ ಜಾಣತನದ ದಾಳ ಸಿದ್ದು ಕ್ಯಾಂಪ್​​​ನಲ್ಲಿ ಪುಳಕ ತಂದಿದೆ. ಸಿದ್ದರಾಮಯ್ಯ ಮಾಸ್ ಲೀಡರ್ ಅಲ್ವಾ? ಮಾಸ್ ಲೀಡರ್ ಬೇಡ ಅಂತ ಹೇಳೋಱರು? ಎಲ್ಲಾ ಅಂಗಲ್​ನಲ್ಲೂ ಪಕ್ಷಕ್ಕೆ ಅವರ ನಾಯಕತ್ವದ ಅಗತ್ಯವಿದೆ ಅಂತ ಸಿದ್ದು ಅತ್ಯಾಪ್ತ ಮಹದೇವಪ್ಪ ಹೇಳಿದ್ರೆ, ಈ ಮಾತಿಗೆ ಕಂಪ್ಲಿ ಶಾಸಕ ಗಣೇಶ್​​​ ಸಹ ಸಿದ್ದು ಜೈ ಎಂದಿದ್ದಾರೆ. ಅತ್ತ ಡಿಕೆಶಿ ಕ್ಯಾಂಪ್​ನಿಂದ ಸಿದ್ದು ಜೊತೆ ಡಿಕೆಶಿಯೂ ಅನಿವಾರ್ಯ ಅನ್ನೋ ಬಾಣ ಪ್ರಯೋಗ ಆಗಿದ್ದು, ಮಹಾಭಾರತದ ಶಿಶುಪಾಲನ ನೆನಪಿಸಿದ್ದಾರೆ ಜಿ.ಸಿ. ಚಂದ್ರಶೇಖರ್​​​.

ಇದನ್ನೂ ಓದಿ:ವೈಲೆಂಟ್ ಆದ್ರಾ ಡಿಸಿಎಂ..? ದಿಢೀರ್​ ಸಿದ್ದರಾಮಯ್ಯರ ಭೇಟಿಯಾದ ಡಿಕೆ ಶಿವಕುಮಾರ್..!

ಪವರ್​ ಶೇರಿಂಗ್​​ ಚರ್ಚೆಯನ್ನೇ ಸೈಡ್​​​ಗೆ ತಳ್ಳಿ ಟಕ್ಕರ್​ ಕೊಡ್ತಿರುವ ಸಿದ್ದು ಕ್ಯಾಂಪ್​, 2028ರ ಕ್ಯಾಪ್ಟನ್​​ಶಿಪ್​​​ ಕನವರಿಕೆ ಮಾಡ್ತಿದೆ. ಆದ್ರೆ, ಈ ಬಗ್ಗೆ ಡಿಸಿಎಂ ಡಿಕೆಶಿ ಮಾತ್ರ ಸೈಲೆಂಟ್​​ ಆಟದ ಮೊರೆ ಹೋಗಿದ್ದು, ಕುರ್ಚಿ ಕದನ ಮತ್ತಷ್ಟು ಕುತೂಹಲಕ್ಕೆ ಜಾರಿದೆ.

ಇದನ್ನೂ ಓದಿ:ಸಿಎಂ ಗಾದಿ ಮೇಲೆ ಕಣ್ಣಿಟ್ಟ DK ಶಿವಕುಮಾರ್​ಗೆ ಟಾಂಗ್- ಪರಮೇಶ್ವರ್ ಸ್ಫೋಟಕ ಹೇಳಿಕೆ

ಸತೀಶ್ ಜಾರಕಿಹೊಳಿ ಮಾತಿನ ಹಿಂದಿರೋ ಮರ್ಮವೇನು? ಸಿದ್ದರಾಮಯ್ಯ ರಾಜಕೀಯದಲ್ಲಿ ಆ್ಯಕ್ಟಿವ್ ಆಗಿದ್ರೆ ಮಾತ್ರ ಅಹಿಂದಕ್ಕೆ ಬಲನಾ? ಅಷ್ಟಕ್ಕೂ ರಾಜಕೀಯ ನಿವೃತ್ತಿ ಘೋಷಿಸ್ತಾರಾ ಸಿದ್ದು? ಬೆಂಬಲಿಗರ ಒತ್ತಾಯಕ್ಕೆ ಮಣಿದು ಮತ್ತೆ ಚುನಾವಣಾ ರಾಜಕಾರಣದಲ್ಲಿ ಇರ್ತಾರಾ? ಇದ್ರೆ ಡಿಕೆಗೆ ನಷ್ಟವೇ? ಸತೀಶ್ ಪಡೆಗೆ ಲಾಭವೇ? ಇವೆಲ್ಲಾ ಪ್ರಶ್ನೆಗಳಿಗೂ ಉತ್ತರ ಸದ್ಯಕ್ಕೆ ಸಿಗುವಂತೆ ಕಾಣುತ್ತಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment