/newsfirstlive-kannada/media/post_attachments/wp-content/uploads/2024/12/Hardik_Pandya.jpg)
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಸೂಪರ್ ಸ್ಟಾರ್. ಆದ್ರೀಗ ಇದೇ ಸೂಪರ್ ಸ್ಟಾರ್, ಸರ್ಬಿಯಾದ ನತಾಶಾ ಜೊತೆಗಿನ ಡಿವೋರ್ಸ್ ಬಳಿಕ ಅಮೆರಿಕನ್ ಮಾಡೆಲ್ ಜೊತೆ ಮದುವೆಗೆ ಸಜ್ಜಾಗಿದ್ದರಂತೆ. ಅರೇ ಯಾರು ಆ ಸೂಪರ್ ಮಾಡೆಲ್?.
ಹಾರ್ದಿಕ್ ಪಾಂಡ್ಯ ಬಿಂದಾಸ್ ಲೈಫ್ ಲೀಡ್ ಮಾಡೋದ್ರಲ್ಲಿ ಎತ್ತಿದ ಕೈ. ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಹಾರ್ದಿಕ್, ಆಟದಿಂದ ಹೊರತಾಗಿ ಆಫ್ ದಿ ಫೀಲ್ಡ್ನಲ್ಲಿ ಮಾಡಿದ ಸದ್ದೇ ಹೆಚ್ಚು. ನತಾಶಾ ಸ್ಟಾಂಕೋವಿಕ್ ಜೊತೆಗಿನ ಡಿವೋರ್ಸ್, ಮಾಡೆಲ್ಗಳ ಜೊತೆಗಿನ ಡೇಂಟಿಂಗ್, ಮೀಟಿಂಗ್ ಗಾಸಿಪ್ಗಳು ಹರಿದಾಡಿತ್ತು. ಆದ್ರೀಗ ಹಾರ್ದಿಕ್ ಪಾಂಡ್ಯ ಜೀವನದ ಮತ್ತೊಂದು ಸುದ್ದಿ ಸೌಂಡ್ ಮಾಡುತ್ತಿದೆ. ಅದೇ ಹಾರ್ದಿಕ್ ಮ್ಯಾರೇಜ್.
ಮತ್ತೊಬ್ಬ ನಟಿ ಜೊತೆ ಸೆಕೆಂಡ್ ಇನ್ನಿಂಗ್ಸ್..?
ಹಾರ್ದಿಕ್ ಪಾಂಡ್ಯ, ನತಾಶಾ ಡಿವೋರ್ಸ್ ಆಗಿ ಜಸ್ಟ್ ಆರೇ 6 ತಿಂಗಳು ಕಳೆದಿದೆ. ಈ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ಪಾಂಡ್ಯ, ಮತ್ತೊಮ್ಮೆ ವೈಯಕ್ತಿಕ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅದು ಕೂಡ ಮತ್ತೊಬ್ಬ ನಟಿಯೊಂದಿಗೆ. ಅಂದ್ಹಾಗೆ ಆಕೆಯ ಹೆಸರು ಕೈಲಿ ಜೆನ್ನರ್.
ಯಾರು ಈ ಸುರ ಸುಂದರಿ ಕೈಲಿ ಜೆನ್ನರ್..?
ಕೈಲಿ ಜೆನ್ನರ್.. ಅಮೆರಿಕದ ನಟಿ, ಉದ್ಯಮಿ ಹಾಗೂ ಟಿವಿ ಸ್ಟಾರ್. ಜಗತ್ತಿನ ಸೌಂದರ್ಯ ಲೋಕದ ರಾಣಿಯರಲ್ಲಿ ಒಬ್ಬಳಾಗಿರುವ ಈಕೆ, ಸಾಮಾಜಿಕ ಕಾರ್ಯಕರ್ತೆ ಆಗಿದ್ದಾರೆ. 2007ರಲ್ಲಿ ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯಾನ್ಸ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಕೈಲಿ, ಹಲವು ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈಕೆ ಮುಂದೆ ಕೊಹ್ಲಿ ಲೆಕ್ಕಕ್ಕಿಲ್ಲ..!
ಮೋಸ್ಟ್ ಪ್ಯಾಪುಲರ್ ಸ್ಟಾರ್ ಆಗಿರುವ ಕೈಲಿ ಜೆನ್ನರ್ ಮುಂದೆ, ವಿರಾಟ್ ಕೊಹ್ಲಿಯೂ ಲೆಕ್ಕಕ್ಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಈ ಬ್ಯೂಟಿ, ವಿಶ್ವದಲ್ಲೇ ಅತಿ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್‌ಗಳನ್ನ ಹೊಂದಿರುವ 4ನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಬರೋಬ್ಬರಿ 395 ಮಿಲಿಯನ್ ಫಾಲೋವರ್‌ಗಳನ್ನ ಹೊಂದಿದ್ದಾರೆ. ಮಹಿಳೆಯರ ಪೈಕಿ 2ನೇ ಅತಿ ಹೆಚ್ಚು ಫಾಲೋವರ್ ಹೊಂದಿರುವವರು ಈಕೆಯ ವೈಯಕ್ತಿಕ ಜೀವನ ಮತ್ತಷ್ಟು ಇಂಟ್ರೆಸ್ಟಿಂಗ್.
ಇದನ್ನೂ ಓದಿ:ಮಧ್ಯಪ್ರದೇಶಕ್ಕೆ ನಿರಾಸೆ.. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದ ಶ್ರೇಯಸ್ ಅಯ್ಯರ್
ಇಬ್ಬರು ಮಕ್ಕಳ ತಾಯಿ ಕೈಲಿ ಜೆನ್ನರ್..!
ಕೈಲಿ ಜೆನ್ನರ್, ರಾಪರ್ ಟ್ರಾವಿಸ್ ಸ್ಕಾಟ್ ಎನ್ನುವರನ್ನು 2017ರಲ್ಲಿ ಒಂದಾಗಿದ್ದರು. ಇವರಿಬ್ಬರ ವೈವಾಹಿಕ ಜೀವನಕ್ಕೆ ಪ್ರತಿರೂಪವಾಗಿ ಇಬ್ಬರು ಮಕ್ಕಳಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, 2019ರಲ್ಲಿ ಬೇರ್ಪಟಿದ್ದ ಈ ಜೋಡಿ, 2021ರಲ್ಲಿ ಮತ್ತೆ ಒಂದಾಗಿದ್ದರು. ಈ ವೇಳೆ ಮತ್ತೆ 2022ರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದರು. ಈ ಬೆನ್ನಲ್ಲೇ ದೂರವಾದ ಕೈಲಿ ಜೆನ್ನರ್, ಅಮೆರಿಕನ್ ನಟ ತಿಮೋತಿ ಚಾಲಮೆಟ್ ಜೊತೆ ರಿಲೇಷನ್ನಲ್ಲಿದ್ದಾರೆ ಎನ್ನಲಾಗ್ತಿದೆ.
ನಿಜವಾಗುತ್ತಾ ಅಮೆರಿಕನ್ ಬೆಡಗಿ ಜೊತೆಗಿನ ಗಾಸಿಪ್..?
ಹಾರ್ದಿಕ್ ಪಾಂಡ್ಯ ಹಾಗೂ ಕೈಲಿ ಜೆನ್ನರ್ ಲೈಫ್ನಲ್ಲಿ ಬಹುಪಾಲು ಸಾಮ್ಯತೆ ಇದೆ. ಇವರಿಬ್ಬರು ಐಪಿಎಲ್ ಆರಂಭಕ್ಕೂ ಮುನ್ನವೇ ಮದುವೆ ಆಗ್ತಾರೆ ಅನ್ನೋ ಗಾಸಿಪ್ ಹರಿದಾಡುತ್ತಿದೆ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಆಗದ ಇವರು, ನಿಜಕ್ಕೂ ಮದುವೆ ಆಗ್ತಾರಾ ಅನ್ನೋ ಪ್ರಶ್ನೆ ಇದೆ. ಇಲ್ಲ ಗಾಸಿಪ್ನಲ್ಲೇ ಅಂತ್ಯವಾಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ