ರಾಮಾಚಾರಿ ಸೀರಿಯಲ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್; ​ನಟಿ ದೇವಿಕಾ ಭಟ್ ಸೀರಿಯಲ್ ಬಿಡೋದಕ್ಕೆ ಕಾರಣ ಇದೇನಾ?

author-image
Veena Gangani
Updated On
ರಾಮಾಚಾರಿ ಸೀರಿಯಲ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್; ​ನಟಿ ದೇವಿಕಾ ಭಟ್ ಸೀರಿಯಲ್ ಬಿಡೋದಕ್ಕೆ ಕಾರಣ ಇದೇನಾ?
Advertisment
  • ರಾಮಾಚಾರಿ ಸೀರಿಯಲ್​ ರುಕ್ಮಿಣಿ ಪಾತ್ರಕ್ಕೆ ವಿದಾಯ ಹೇಳಿದ್ದು ಇದಕ್ಕಾ?
  • ಮುದ್ದಾದ ಅಭಿನಯದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದ ರುಕ್ಕು
  • ಎಡಗಾಲಲ್ಲಿ ಸೇರು ಒದ್ದು ಚಾರು ಹಣೆಗೆ ತಾಕುವಂತೆ ಮಾಡಿದ ಓರಗಿತ್ತಿ

ಕನ್ನಡ ಕಿರುತೆರೆಯ ವೀಕ್ಷಕರ ನೆಚ್ಚಿನ ಧಾರಾವಾಹಿಯಾಗಿದೆ ರಾಮಾಚಾರಿ. ಇದೇ ರಾಮಾಚಾರಿ ಸೀರಿಯಲ್​ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಂಡು ವೀಕ್ಷಕರಿಗೆ ಶಾಕ್​ ನೀಡುತ್ತಿದೆ. ವೀಕ್ಷಕರ ಆಸೆಯಂತೆ ಕೃಷ್ಣನಿಗೆ ಒಂದು ಜೋಡಿ ಮಾಡಿ, ಈಗಾಗಲೇ ಮದುವೆ ಕೂಡ ಮಾಡಿಸಲಾಗಿದೆ. ಕೃಷ್ಣನಿಗೆ ಜೋಡಿಯಾಗಿ ಹೊಸ ರುಕ್ಕು ಎಂಟ್ರಿ ಕೊಟ್ಟಿದ್ದಾಳೆ.

ಇದನ್ನೂ ಓದಿ:ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್​; ಬ್ಯೂಟಿಫುಲ್​ ಫೋಟೋಸ್​ ಇಲ್ಲಿವೆ

publive-image

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ದಿನಕ್ಕೊಂದು ತಿರುವು ಪಡೆದಿಕೊಳ್ಳುತ್ತಿದೆ. ಈಗಾಗಲೇ ರಾಮಾಚಾರಿ, ಚಾರು ಕುಟುಂಬಸ್ಥರು ಸೇರಿಕೊಂಡು ಕೃಷ್ಣ ಮತ್ತು ರುಕ್ಮಿಣಿಯ ಮದುವೆ ಮಾಡಿಸಿದ್ದಾರೆ. ರುಕ್ಮಿಣಿ ಕೂಡ ಚಾರುವಿನಂತೆ ನಾರಾಯಣಾಚಾರಿಗಳ ಮನೆಗೆ ಹೇಳಿ ಮಾಡಿಸಿದ ಸೊಸೆ ಎಂದು ಇಡೀ ಮನೆಯವರು ಕೊಂಡಾಡುತ್ತಿದ್ದಾರೆ. ಆದರೆ ರುಕ್ಮಿಣಿಯ ಮತ್ತೊಂದು ಮುಖ ವೀಕ್ಷಕರ ಮುಂದೆ ಬಯಲಾಗಿದೆ.

publive-image

ಹೊಸದಾಗಿ ಮದುವೆಯಾದ ಜೋಡಿ ಕೃಷ್ಣ ಮತ್ತು ರುಕ್ಮಿಣಿಯನ್ನು ಮನೆಗೆ ತುಂಬಿಸುವ ಎಲ್ಲಾ ಶಾಸ್ತ್ರಗಳು ಸಂಭ್ರಮದಿಂದ ನಡೆದಿದೆ. ಆದರೆ ಗಂಡನ ಪ್ರವೇಶ ಮಾಡುವ ಮುನ್ನವೆ ಹೊಸ್ತಿಲ ಮೇಲೆ ಇಟ್ಟಿದ್ದ ಅಕ್ಕಿ ಮತ್ತು ಬೆಲ್ಲವನ್ನು ಸೇರನ್ನು ಎಡಗಾಲಿನಿಂದ ಒದ್ದು ಬಂದಿದ್ದಾಳೆ ರುಕ್ಮಿಣಿ. ಆದರೆ ಬೇಕಂತಲೇ ಸೇರನ್ನು ಜೋರಾಗಿ ಒದ್ದು ಚಾರು ಹಣೆಗೆ ತಾಕುವಂತೆ ಮಾಡಿದ್ದಾಳೆ ರುಕ್ಮಿಣಿ. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದ ಚಾರುಗೆ ಸಂಶಯಕ್ಕೆ ಬಂದಿದೆ. ಆ ಕೂಡಲೇ ಚಾರು, ರಾಮಾಚಾರಿ ಬಳಿ ಹೋಗಿ ಈ ವಿಚಾರ ಹೇಳಿದ್ದಾಳೆ. ಆದರೆ ರಾಮಾಚಾರಿ ಮಾತ್ರ ಇದು ನಿನ್ನ ಭ್ರಮೆ ಇರಬಹುದು, ಯಾರಾದ್ರೂ ಎಡಗಾಲಿಟ್ಟು ಯಾಕೆ ಮನೆಯೊಳಗೆ ಬರುತ್ತಾರೆ, ಸಾಧ್ಯವೇ ಇಲ್ಲ ಎನ್ನುತ್ತಾ ಪೂಜೆಗೆ ಹೋಗಿದ್ದಾನೆ. ಇನ್ನೂ ಈ ಕಥೆಯಲ್ಲಿ ರುಕ್ಮಿಣಿಯನ್ನು ಆ ಮನೆಗೆ ಸೇರುವಂತೆ ಮಾಡಿದ್ದೇ ವೈಶಾಖ ಎನ್ನುವಂತೆ ತೋರಿಸಲಾಗಿದೆ.

publive-image

ಆದರೆ ಇದರ ಮಧ್ಯೆ ವೀಕ್ಷಕರು ಗೊಂದಲದಲ್ಲಿ ಇದ್ದಾರೆ. ಹೊಸ ನಟಿಗೂ ಮುನ್ನ ರಾಮಾಚಾರಿ ಧಾರಾವಾಹಿಯಲ್ಲಿ ದೇವಿಕಾ ಭಟ್ ಅಭಿನಯಿಸುತ್ತಿದ್ದರು. ಇವರ ನಟನೆಗೆ ಫ್ಯಾನ್ಸ್​ ಕೂಡ ಫಿದಾ ಆಗಿದ್ದರು. ಆದರೆ ಮದುವೆಯ ಸೀನ್ ಕಳೆದು, ಮನೆ ತುಂಬಿಸುವ ಸಂದರ್ಭದಲ್ಲಿ ಪಾತ್ರಧಾರಿ ಹಾಗೂ ಪಾತ್ರ ಎರಡು ಬದಲಾಗಿದೆ. ಮೊನ್ನೆಯಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ದೇವಿಕಾ ಭಟ್ ಸೀರಿಯಲ್​ಗೆ ಗುಡ್ ಬೈ ಹೇಳಿದ್ದರು. ಇದೀಗ ದೇವಿಕಾ ಭಟ್ ಜಾಗಕ್ಕೆ ವಿದ್ಯಾ ರಾಜ್ ಆಗಮಿಸಿದ್ದಾರೆ. ಆದರೆ ಇಲ್ಲಿ ಪಾಸಿಟಿವ್ ಆಗಿದ್ದ ರುಕ್ಮಿಣಿ ಪಾತ್ರವನ್ನು ನೆಗೆಟೀವ್ ಆಗಿ ಮಾಡಿರೋದಕ್ಕಾಗಿಯೇ ದೇವಿಕಾ ಭಟ್ ಸೀರಿಯಲ್​ನಿಂದ ಆಚೆ ಬಂದ್ರಾ, ಅಥವಾ ವಿಲನ್ ಪಾತ್ರಕ್ಕೆ ದೇವಿಕಾ ಸೂಟ್ ಆಗೋದಿಲ್ಲ ಅಂತ ಸೀರಿಯಲ್​ ತಂಡದವರೇ ಪಾತ್ರ ಬದಲಾಯಿಸಿದ್ರಾ ಅಂತ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment