/newsfirstlive-kannada/media/post_attachments/wp-content/uploads/2025/07/Vaibhav_Suryavanshi-1.jpg)
ಈತನದ್ದು ಚಿಕ್ಕ ವಯಸ್ಸು. ಆದ್ರೆ, ಟ್ಯಾಲೆಂಟ್, ಪ್ರಖ್ಯಾತಿ ಮಾತ್ರ ಬೆಟ್ಟದಷ್ಟು. ಪ್ರತಿ ವೇದಿಕೆಗಳಲ್ಲಿ ವೈಭವ್ ಸೂರ್ಯವಂಶಿಯ ಆಟದ ವೈಭವವನ್ನ ಕ್ರಿಕೆಟ್ ದಿಗ್ಗಜರು ಕೊಂಡಾಡ್ತಿದ್ದಾರೆ. ಸಿಕ್ಕ ಅವಕಾಶ ಬಾಚಿಕೊಳ್ತಿರುವ ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾಗೆ ಎಂಟ್ರಿ ಕೊಡೋ ಕನಸು ಕಾಣ್ತಿದ್ದಾರೆ. ಸೂರ್ಯವಂಶಿಗೆ ಶೀಘ್ರದಲ್ಲೇ ಬುಲಾವ್ ಬರುತ್ತಾ?.
ವೈಭವ್ ಸೂರ್ಯವಂಶಿ ವಿಶ್ವ ಕ್ರಿಕೆಟ್ ಲೋಕದಲ್ಲಿ ಈಗ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಹೆಸರು. ವಯಸ್ಸು ಜಸ್ಟ್ 14. ಆದ್ರೆ, ಬ್ಯಾಟಿಂಗ್ ಮೆಚ್ಯುರಿಟಿ, ಫಿಯರ್ ಲೆಸ್ ಆಟಕ್ಕೂ, ಈತ ಕ್ರಿಕೆಟ್ ಜಗತ್ತಿನಲ್ಲಿ ಸೃಷ್ಟಿಸಿರೋ ಸಂಚಲನಕ್ಕೆ ಹೋಲಿಕೆಯೇ ಇಲ್ಲದಂತಾಗಿದೆ. 14 ವರ್ಷಕ್ಕೆ ಹಿಮಾಲಯದ ಎತ್ತರಕ್ಕೆ ಬೆಳೆದು ನಿಂತಿರುವ ವೈಭವ್ ಸೂರ್ಯವಂಶಿ, ಟೀಮ್ ಇಂಡಿಯಾ ಎಂಟ್ರಿಯ ದಿನಗಳು ದೂರವೇನಿಲ್ಲ.
ಡೊಮೆಸ್ಟಿಕ್ ಕ್ರಿಕೆಟ್, ಐಪಿಎಲ್, ಅಂಡರ್-19 ಸದ್ಯ ಇಂಗ್ಲೆಂಡ್ ಅಂಡರ್-19 ಟೂರ್ನಲ್ಲಿ ಸಿಕ್ಕ ಸಿಕ್ಕ ಅವಕಾಶಗಳಲ್ಲಿ ಎನ್ಕ್ಯಾಶ್ ಮಾಡಿಕೊಳ್ತಿರುವ ಈ ಬಿಹಾರದ ಹುಡುಗ, ಟಿ20 ಅಥವಾ ಒಡಿಐ ಕಾಲ್ ಪಡೆದರೂ ಅಚ್ಚರಿ ಇನಿಲ್ಲ.
5 ಮ್ಯಾಚ್.. ಬರೋಬ್ಬರಿ 30 ಬೌಂಡರಿ.. 29 ಸಿಕ್ಸರ್.. 355 ರನ್..!
ಐಪಿಎಲ್ನಲ್ಲಿ ಘಟಾನುಘಟಿ ಬೌಲರ್ಗಳನ್ನ ಬೆಂಡೆತ್ತಿ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ, ವಿಶ್ವ ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಆದ್ರೆ, ಇಂಗ್ಲೆಂಡ್ನಂಥ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಟ್ರ್ಯಾಕ್ನಲ್ಲಿ ವೈಭವ್ ಸೂರ್ಯವಂಶಿ ಆಟ ಹೇಗಿರುತ್ತೆ ಅನ್ನೋ ಪ್ರಶ್ನೆ ಸಹಜವಾಗೇ ಇತ್ತು. ಇದೀಗ ಅದಕ್ಕೂ ಅಂಡರ್-19 ಟೂರ್ನಲ್ಲಿ ಉತ್ತರ ನೀಡಿದ್ದಾರೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿರುವ ಸೂರ್ಯವಂಶಿ, ಒಂದಲ್ಲ.. ಎರಡಲ್ಲ.. ಬರೋಬ್ಬರಿ 30 ಬೌಂಡರಿ, 29 ಸಿಕ್ಸರ್ ಸಿಡಿಸಿದ್ದಾರೆ.
ಕೇವಲ ಬೌಂಡರಿ, ಸಿಕ್ಸರ್ಗಳಿಂದಲೇ 294 ರನ್ ಚಚ್ಚಿರುವ ವೈಭವ್ ಸೂರ್ಯವಂಶಿ, 5 ಪಂದ್ಯಗಳ ಏಕದಿನ ಸರಣಿಯಲ್ಲಿ ಟಾಪ್ ರನ್ ಸ್ಕೋರರ್ ಆಗಿದ್ದಾರೆ. ಆ ಮೂಲಕ ಮತ್ತೆ ವಿಶ್ವ ಕ್ರಿಕೆಟ್ ಲೋಕದಲ್ಲಿ ವೈಭವ್, ಹೆಸರು ಸೌಂಡ್ ಮಾಡುವಂತೆ ಮಾಡಿದ್ದಾರೆ. ಬಿಗ್ ಸೀರಿಸ್ಗಳನ್ನಾಡಲು ರೆಡಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಆಗ ಮತ್ತಷ್ಟು ವೇಗ ಪಡೆದುಕೊಳ್ಳುತ್ತೆ.!
ಆತ ಎಲ್ಲರ ಗಮನ ಸೆಳೆದಿದ್ದಾನೆ. 14 ವರ್ಷದಲ್ಲೇ ಅಂಡರ್-19 ತಂಡದ ಪರ ವಿಸ್ಪೋಟಕ ಬ್ಯಾಟಿಂಗ್ ನಡೆಸ್ತಿದ್ದಾನೆ. ಇಂಗ್ಲೆಂಡ್ ಪ್ರವಾಸದ ಅನುಭವ ಆತನನ್ನು ಇನ್ನಷ್ಟು ಉತ್ತಮಗೊಳಿಸಿದೆ. ವೈಭವ್ ಈಗ ಪ್ರಥಮ ದರ್ಜೆ ಕ್ರಿಕೆಟ್ ಆಡಿ, ಒಂದೆರಡು ಶತಕ ಗಳಿಸಿದರೆ ಟೀಮ್ ಇಂಡಿಯಾ ಹಾದಿ ವೇಗ ಪಡೆದುಕೊಳ್ಳುತ್ತೆ.
ರವಿ ಶಾಸ್ತ್ರಿ, ಮಾಜಿ ಕ್ರಿಕೆಟರ್
ವೈಭವ ಸೂರ್ಯವಂಶಿಗೆ ಬರುತ್ತಾ ಟೀಮ್ ಇಂಡಿಯಾ ಕರೆ..?
ಇಂಗ್ಲೆಂಡ್ ಪ್ರವಾಸದಲ್ಲಿ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ವೈಭವ್, ಎಲ್ಲಾ ಕಂಡೀಷನ್ಸ್ನಲ್ಲಿ ಆಡಬಲ್ಲೆ ಅನ್ನೋದು ತೋರಿಸಿದ್ದಾರೆ. ಐಪಿಎಲ್ನಲ್ಲಿ ಮಾತ್ರವಲ್ಲ. ಅಂಡರ್-19 ಸೇರಿದಂತೆ ದೇಶಿ ಕ್ರಿಕೆಟ್ನಲ್ಲೂ ವೈಭವ್, ಫೆಟಾಸ್ಟಿಕ್ ಅನ್ನೋದನ್ನು ನಿರೂಪಿಸಿದ್ದಾರೆ. ಹೀಗೆ ಪ್ರತಿ ವೇದಿಕೆಗಳಲ್ಲಿ ವೈಭವ್ ಸೂರ್ಯವಂಶಿ, ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಟಿ20 ಅಥವಾ ಏಕದಿನ ಸರಣಿಗಳಲ್ಲಿ ವೈಭವ್ ಸೂರ್ಯವಂಶಿಗೆ ಚಾನ್ಸ್ ಸಿಗುತ್ತಾ ಎಂಬ ಚರ್ಚೆ ನಡೀತಿದೆ.
ಇದನ್ನೂ ಓದಿ:ಈ ಹೋಟೆಲ್ನ ಕೇವಲ ಒಂದು ತಿಂಗಳ ಆದಾಯ 8 ಕೋಟಿ ರೂಪಾಯಿಗಳು.. ಏನ್ ಸ್ಪೆಷಲ್?
ಮತ್ತಷ್ಟು ದಿನಗಳು ಕಾಯಬೇಕು ವೈಭವ್ ಸೂರ್ಯವಂಶಿ.?
ಇಂಗ್ಲೆಂಡ್ ಟೂರ್ನಲ್ಲಿ ವೈಭವ್, ವೈಲೆಂಟ್ ಆಟ ನಡೆಸಿದ್ದಾರೆ. ಆಟದಲ್ಲಿ ಪ್ರಬುದ್ಧತೆಯೂ ತೋರಿಸಿದ್ದಾರೆ. ಹೀಗಾಗಿ ವೈಭವ್ಗೆ ಟೀಮ್ ಇಂಡಿಯಾ ಬುಲಾವ್ ಸಿಗುತ್ತಾ ಅಂದ್ರೆ, ಸದ್ಯಕ್ಕೆ ನಿಜಕ್ಕೂ ಇಲ್ಲ. ಯಾಕಂದ್ರೆ, ಸದ್ಯ ವೈಭವ್ ಸೂರ್ಯವಂಶಿ ವಯಸ್ಸು 14. ಐಸಿಸಿ ರೂಲ್ ಪ್ರಕಾರ 15 ವರ್ಷದೊಳಗಿನ ಆಟಗಾರರಿಗೆ ರಾಷ್ಟ್ರೀಯ ತಂಡದ ಆಯ್ಕೆ ಅರ್ಹರಲ್ಲ. ಮುಂದಿನ ಮಾರ್ಚ್ 27ಕ್ಕೆ ವೈಭವ್ಗೆ, 15 ವರ್ಷ ತುಂಬಲಿದೆ. ಆ ಬಳಿಕವಷ್ಟೇ ರಾಷ್ಟ್ರೀಯ ತಂಡದ ಆಯ್ಕೆಗೆ ಅರ್ಹರಾಗಲಿದ್ದಾರೆ.
ಅಕಸ್ಮಾತ್, ವೈಭವ್ ಆಯ್ಕೆ ಬೇಕೇ ಬೇಕು ಅಂತಾದ್ರೆ, ಐಸಿಸಿಯ ಕೆಲ ಮಾನದಂಡ ಅನುಸರಿಸಬೇಕಿದೆ. ಸಿಕ್ಕ ಅವಕಾಶಗಳಲ್ಲಿ ವೈಭವ್, ಮತ್ತಷ್ಟು ವಿಜೃಂಬಿಸಿದ್ರೆ. ಟೀಮ್ ಇಂಡಿಯಾ ಕರೆಯನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯವಲ್ಲ. ವಿಸ್ಪೋಟಕ ಬ್ಯಾಟಿಂಗ್ನಿಂದ ಸೂರ್ಯವಂಶಿ, ಭವಿಷ್ಯದ ಸೂಪರ್ ಸ್ಟಾರ್ ಎಂಬ ಭರವಸೆ ಹುಟ್ಟಿಹಾಕಿದ್ದಾರೆ. ಆದ್ರೆ, ಇದು ನಿಜವಾಗಬೇಕಾದ್ರೆ, ಕನ್ಸಿಸ್ಟೆನ್ಸಿ ಕಾಯ್ದುಕೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ