/newsfirstlive-kannada/media/post_attachments/wp-content/uploads/2025/01/YUVARAJ-SINGH.jpg)
ಯುವರಾಜ್ ಸಿಂಗ್, ಟೀಮ್ ಇಂಡಿಯಾಕ್ಕೆ ಒಂದಲ್ಲ, ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ. ಕ್ರಿಕೆಟ್​ ಫೀಲ್ಡ್​ನಲ್ಲಿ ಫೈಟರ್ ಆಗಿ, ತಂಡದ ಗೆಲುವಿಗಾಗಿ ಶ್ರಮಿಸುತ್ತಿದ್ದ ಟೀಮ್ ಮ್ಯಾನ್ ಯುವಿ, ಭಾರತೀಯ ಕ್ರಿಕೆಟ್​​ಗೆ ತನ್ನದೇ ಕೊಡುಗೆ ನೀಡಿದ್ದಾರೆ. ಆರಂಭದಲ್ಲಿ ಟೀಮ್ ಇಂಡಿಯಾ ಹೀರೋ ಆಗಿದ್ದ ಯುವಿ, ಕೊನೆಗೆ ಯಾರಿಗೂ ಬೇಡವಾದ್ರು. ಯುವಿ ಕರಿಯರ್ ಅಂತ್ಯದ ಬಗ್ಗೆ, ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಯುವರಾಜ್ ಸಿಂಗ್ ಕ್ರೀಸ್​​​ನಲ್ಲಿದ್ರೆ, ಸಿಕ್ಸರ್​ಗಳಿಗೇನು ಬರ ಇರ್ತಿಲಿಲ್ಲ. ಯುವಿ ಬ್ಯಾಟ್ ಎತ್ತಿದ್ರೆ ಸಿಕ್ಸ್.. ಯುವಿ ಸಿಡಿದ್ರೆ ಸಿಕ್ಸ್. ಡರ್ಬನ್​ನಲ್ಲಿ ಯುವರಾಜನ ರೌದ್ರಾವತಾರ ಒಮ್ಮೆ ನೋಡಿ. ಯುವಿ ಬ್ಯಾಟಿಂಗ್ ಪವರ್ ಹೇಗಿರುತ್ತೆ ಅಂತ, ನಿಮಗೆ ಅರ್ಥ ಆಗುತ್ತೆ.
ಬ್ಯಾಟ್​ನಿಂದ ಅಷ್ಟೇ ಅಲ್ಲ. ಬೌಲಿಂಗ್​ನಲ್ಲೂ ಯುವಿ, ಜಾದೂಗಾರ. ತನ್ನ ಎಡಗೈ ಸ್ಪಿನ್​ನಿಂದ ಯುವಿ, ಘಟಾನುಘಟಿ ಬ್ಯಾಟ್ಸ್​ಮನ್​​ಗಳನ್ನೂ, ಬಲಿ ಪಡೆದಿದ್ದಾರೆ. ಯುವರಾಜ್ ಸಿಂಗ್ ಫೀಲ್ಡಿಂಗ್ ಬಗ್ಗೆ, ಹೇಳೋದೇ ಬೇಡ..! ಚಿರತೆಯಂತೆ ಜಿಗಿದು, ಹಕ್ಕಿಯಂತೆ ಹಾರೋ ಯುವಿ, ಟಫ್ ಕ್ಯಾಚ್​ಗಳನ್ನೂ ಸಲೀಸಾಗಿ ತೆಗೆದುಕೊಳ್ತಿದ್ರು. ಒಂದೇ ಮಾತಲ್ಲಿ ಹೇಳಬೇಂದ್ರೆ, ಯುವಿ ವಿಶ್ವ ಕ್ರಿಕೆಟ್​ನ ಗ್ರೇಟ್ ಆಲ್​ರೌಂಡರ್​ಗಳಲ್ಲಿ ಒಬ್ಬರು.
ಸತತ 17 ವರ್ಷಗಳ ಕಾಲ ಯುವಿ, ಭಾರತೀಯ ಕ್ರಿಕೆಟ್​ಗೆ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಟೀಮ್ ಇಂಡಿಯಾ ಹೀರೋ ಆಗಿದ್ದ ಯುವಿ, ಕೊನೆಗೆ ಯಾರಿಗೂ ಬೇಡವಾದ ನತದೃಷ್ಟ ಆಟಗಾರನಾಗಿಬಿಟ್ರು.
ಯುವರಾಜ್ ಸಿಂಗ್​​ ಕರಿಯರ್ ಮುಗಿಸಿದ್ದೇ ಕೊಹ್ಲಿ..!
ಯುವರಾಜ್ ಸಿಂಗ್, ಟೀಮ್ ಇಂಡಿಯಾಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಮಾತ್ರವಲ್ಲ.! ಕ್ಯಾನ್ಸರ್​ ಅನ್ನೋ ಮಹಾಮಾರಿ ಜೊತೆ ಹೋರಾಡಿ, ಜೀವನವನ್ನೇ ಗೆದ್ದ ರಿಯಲ್ ಹೀರೋ. ಆನ್​ಫೀಲ್ಡ್​ ಮತ್ತು ಆಫ್ ದ ಫೀಲ್ಡ್​​ನಲ್ಲಿ ಹೀರೋ ಆಗಿ ಮೆರೆದಿದ್ದ ಯುವಿ ಕ್ರಿಕೆಟ್ ಕರಿಯರ್​ಗೆ, ತನ್ನ ಗೆಳೆಯ ವಿರಾಟ್ ಕೊಹ್ಲಿಯೇ ಕೊಳ್ಳಿ ಇಟ್ಟುಬಿಟ್ರಂತೆ. ಹೀಗಂತ ಹೇಳಿದ್ದು, ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್​ಮನ್, ರಾಬಿನ್ ಉತ್ತಪ್ಪ.
ಯುವಿ ಒಂದೇ ಒಂದು ಚಾನ್ಸ್ ಕೇಳಿದ್ರು ಕೊಟ್ಟಿಲ್ಲ..!
ಕ್ಯಾನ್ಸರ್ ಗೆದ್ದ ಯುವಿ ಮತ್ತೆ ಕ್ರಿಕೆಟ್ ಫೀಲ್ಡ್​​ನಲ್ಲಿ ಯುದ್ಧ ಆಡೋಕೆ ಸಿದ್ಧವಾಗಿದ್ರು. ಆದ್ರೆ ಯುವರಾಜನಿಗೆ ಅವಕಾಶ ಕೊಡಲು ಯಾರೂ ಮನಸ್ಸು ಮಾಡಲಿಲ್ಲವಂತೆ.
ಫಿಟ್ನೆಸ್ ಟೆಸ್ಟ್ ಪಾಸ್​​ ಆಗಲು ಯುವರಾಜ್ ಸಿಂಗ್, 2 ಪಾಯಿಂಟ್ ಕಡಿಮೆ ಮಾಡಿ ಅಂತ ಕೇಳಿಕೊಂಡ್ರು. ಆದ್ರೆ ಯುವಿ ಮನವಿಯನ್ನ ತಿರಸ್ಕರಿಸಿದ್ರು. ಯುವಿ ತಂಡದಲ್ಲಿ ಇಲ್ಲದೇ ಇದ್ರೂ, ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ರು. ನಂತರ ತಂಡಕ್ಕೆ ಕಮ್​ಬ್ಯಾಕ್ ಮಾಡಿದ ಯುವಿ, ಉತ್ತಮ ಪ್ರದರ್ಶನ ನೀಡಲಿಲ್ಲ. ಆಗ ಯಾರೂ ಯುವಿ ಬೆನ್ನಿಗೆ ನಿಲ್ಲಲಿಲ್ಲ. ಲೀಡರ್​ಶಿಪ್ ಗ್ರೂಪ್​ನಲ್ಲಿದ್ದವರು ಯಾರೂ ಸಪೋರ್ಟ್ ಮಾಡಲಿಲ್ಲ. ಆಗ ನಾಯಕನಾಗಿದ್ದ ಕೊಹ್ಲಿ ಕೂಡ, ಯುವಿಯ ಕೈ ಬಿಟ್ರು ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಕೊಹ್ಲಿ ಲೆವೆಲ್ ರೀಚ್ ಆಗಲಿಲ್ಲ ಅಂದ್ರೆ ಗೇಟ್​ಪಾಸ್..!
2011 ಏಕದಿನ ವಿಶ್ವಕಪ್ ಗೆದ್ದ ನಂತರ ಯುವರಾಜ್ ಸಿಂಗ್​​ ಪಟ್ಟ ಕಷ್ಟ ಅಷ್ಟಿಷ್ಟಲ್ಲ.! ಚೆನ್ನಾಗಿದ್ದಾಗ ಎಲ್ಲರೂ ಯುವರಾಜನ ಜೊತೆ, ಹಿಂದೆ ಮುಂದೆ ಇರ್ತಿದ್ರು. ಆದ್ರೆ ಯುವಿ ಕಷ್ಟದಲ್ಲಿದ್ದಾಗ ಆಟಗಾರರು, ಮಂಡಳಿ ಅಷ್ಟೇ ಅಲ್ಲ. ತನ್ನ ಆಪ್ತಮಿತ್ರ ಕೊಹ್ಲಿನೇ ಯುವರಾಜನನ್ನ ದೂರ ಮಾಡಿದರಂತೆ.
ಇದನ್ನೂ ಓದಿ:ಪಾಂಡ್ಯ, ಚಹಾಲ್ ಬೆನ್ನಲ್ಲೇ ಮತ್ತೊಬ್ಬ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಗಾಳಿ..?
ವಿರಾಟ್ ಕೊಹ್ಲಿ ನಾಯಕತ್ವವೇ ವಿಭಿನ್ನ. ತಂಡದ ಸಹ ಆಟಗಾರರೆಲ್ಲಾ ಕೊಹ್ಲಿ ಲೆವೆಲ್ ರೀಚ್ ಆಗಬೇಕು. ಅದು ಫಿಟ್ನೆಸ್ ವಿಚಾರ ಇರಲಿ, ತಿನ್ನೋ ಅಭ್ಯಾಸ ಇರಲಿ, ಹೇಳೋದು ಕೇಳೋದು ಎಲ್ಲಾ, ಕೊಹ್ಲಿ ಸ್ಟ್ಯಾಂಡರ್ಡ್​ ರೀಚ್ ಆಗಬೇಕು. ಯಾರು ರೀಚ್ ಆಗಲ್ವೋ ಅವರನ್ನ ಕೊಹ್ಲಿ ತಂಡದಲ್ಲಿ ಇಟ್ಟುಕೊಳ್ಳೋದಿಲ್ಲ. ಅಂದು ಯುವರಾಜ್, ಕೊಹ್ಲಿ ಲೆವೆಲ್ ರೀಚ್ ಆಗಲಿಲ್ಲ. ಅದಕ್ಕೆ ಯುವಿಗೆ ಗೇಟ್​ಪಾಸ್ ನೀಡಲಾಯ್ತು.​​​ ಎಂದು ಉತ್ತಪ್ಪ ಹೇಳಿದ್ದಾರೆ.
ಯುವಿ ಫಿಟ್ ಇಲ್ಲ..! ತಂಡಕ್ಕೆ ಬೇಡ ಎಂದಿದ್ರಾ ಕೊಹ್ಲಿ..?
ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ, ಕಾಂಪ್ರಮೈಸೇ ಆಗೋದಿಲ್ಲ. ತಾನು ಫಿಟ್ ಆಗಿರಬೇಕು..! ಮತ್ತು ತಂಡದ ಇತರೆ ಆಟಗಾರರೂ ಫಿಟ್ ಆಗಿರಬೇಕು ಅನ್ನೋದು ಕೊಹ್ಲಿಯ ವ್ಯಕ್ತಿತ್ವ. ನಾಯಕನಾಗಿದ್ದಾಗ ಕೊಹ್ಲಿ, ಫಿಟ್ನೆಸ್ ಕ್ರಾಂತಿ ಮಾಡಿದಕ್ಕೆ ಟೀಮ್ ಇಂಡಿಯಾ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು. ಆದ್ರೆ ಯುವಿ ವಿಚಾರದಲ್ಲೂ ಕೊಹ್ಲಿ, ನೋ ಕಾಂಪ್ರಪೈಸ್ ಎಂದಿದ್ರಂತೆ.
ಯುವಿ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ. ಇಂತಹ ಮಹಾನ್ ಆಟಗಾರ ಕ್ಯಾನ್ಸರ್ ಗೆದ್ದು ತಂಡಕ್ಕೆ ಕಮ್​ಬ್ಯಾಕ್ ಮಾಡಬೇಕು ಅಂತ ಬಯಸಿದಾಗ, ಆತನಿಗೆ ಸಹಾಯ ಮಾಡಬೇಕು. ಆದ್ರೆ ಇಂತಹ ಶ್ರೇಷ್ಟ ಆಟಗಾರನಿಗೆ ನೀವು ನಾಯಕನಾಗಿದ್ದಾಗ, ಆತನ ಶ್ವಾಸಕೋಶಗಳು ಮೊದಲಿನಂತಿಲ್ಲ ಎಂದರೆ ಹೇಗೆ..? ನೀವು ಆ ಆಟಗಾರನ ಜೊತೆಯಲ್ಲಿದ್ರಿ, ಆತನ ಕಷ್ಟಗಳನ್ನ ಹತ್ತಿರದಿಂದ ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ ಎಂದು ಉತ್ತಪ್ಪ ಹೇಳಿದ್ದಾರೆ
ಇದನ್ನೂ ಓದಿ:ಕ್ಯಾಪ್ಟನ್ ರೋಹಿತ್ ಶರ್ಮಾ ಕರಿಯರ್​​ ಅಂತ್ಯಕ್ಕೆ ಮುಹೂರ್ತ ಫಿಕ್ಸ್..!
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಗ್ರೇಟ್ ಕ್ಯಾಪ್ಟನ್ ಆಗಿದ್ರು ನಿಜ. ಗೆಲುವು ಒಂದೇ ಕೊಹ್ಲಿಯ ಮಂತ್ರವಾಗಿತ್ತು. ಕೊಹ್ಲಿ ನಾಯಕತ್ವ ಹೇಗಿತ್ತು ಅಂದ್ರೆ, MY WAY OR THE HIGHWAY ಅನ್ನೋ ಥರ ಇತ್ತು. ಆದ್ರೆ ಕೊಹ್ಲಿ ನಾಯಕನಾಗಿ ಗೆಲುವಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ರು. ಆದ್ರೆ ತಂಡಕ್ಕೆ, ಸಹ ಆಟಗಾರರಿಗಲ್ಲ ಅನ್ನೋದು, ರಾಬಿನ್ ಉತ್ತಪ್ಪ ಅಭಿಪ್ರಾಯವಾಗಿದೆ.
ಯುವರಾಜ್ ಸಿಂಗ್ ಕ್ರಿಕೆಟ್ ಕರಿಯರ್ ಯಾರು ಮುಗಿಸಿದ್ರು ಅನ್ನೋದು ಯಾರಿಗೂ ಗೊತ್ತಿಲ್ಲ. ಈಗಲೂ ಯುವಿ ಮತ್ತು ಕೊಹ್ಲಿ, ತುಂಬಾನೇ ಕ್ಲೋಸ್ ಆಗಿದ್ದಾರೆ. ಆದ್ರೆ ರಾಬಿನ್ ಉತ್ತಪ್ಪ, ಅಂದು ಆಟಗಾರನಾಗಿದ್ದ ಯುವರಾಜ್ ಸಿಂಗ್ ಮತ್ತು ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿಯನ್ನ ಗಮನಿಸಿ, ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ