/newsfirstlive-kannada/media/post_attachments/wp-content/uploads/2024/12/Winter-Depression.jpg)
ಚಳಿಗಾಲದಲ್ಲಿ ನೀವಷ್ಟೇ ವಿಷಣ್ಣ ಭಾವ ತುಂಬಿಕೊಂಡು ಕುಳಿತಿದ್ದೀರೆಂದು ಭಾವಿಸಬೇಡಿ. ಚಳಿಗಾಲ ಬರುವಾಗ ತನ್ನೊಂದಿಗೆ ಒಂದಿಷ್ಟು ಆಲಸಿತನವನ್ನು, ಬೇಸರವನ್ನು, ನಿರುತ್ಸಾಹವನ್ನು ಕೂಡ ಹೊತ್ತುಕೊಂಡು ಬರುತ್ತದೆ. ಅದರಲ್ಲೂ ಭಾರತದಲ್ಲಿ ಚಳಿಗಾಲದಲ್ಲಿ ಹಬ್ಬ ಹರಿದಿನಗಳು, ಮದುವೆ, ಮುಂಜಿವೆಗಳೆಲ್ಲದರಲ್ಲಿ ಭಾಗವಹಿಸಿ ಸಾಕಪ್ಪ ಸಾಕು ಎನಿಸುವಷ್ಟು ಬೇಸರದ ಭಾವವನ್ನ, ನಿರುತ್ಸಾಹವನ್ನ ತಮ್ಮದಾಗಿಸಿಕೊಂಡು ಕೂರುತ್ತಾರೆ.
ಚಳಿಗಾಲ ನಮ್ಮ ಹಾಗೂ ಮಂಚದ ನಡುವೆ ಒಂದು ಗಟ್ಟಿಯಾದ ಸ್ನೇಹವನ್ನು ಬೆಸೆಯುತ್ತದೆ. ಬೆಳಗಾದರೆ ಸಾಕು ಯಾಕಪ್ಪ ಬೆಳಗಾಯ್ತು ಎನ್ನುವ ಬೇಸರವನ್ನು ಹೊತ್ತುಕೊಂಡು ಹೊದಿಕೆಯನ್ನು ಇನ್ನಷ್ಟು ಎಳೆದುಕೊಂಡು ಮತ್ತೆ ಮಂಚದ ಮೇಲೆ ಬಿದ್ದುಕೊಳ್ಳುತ್ತೇವೆ. ಇಲ್ಲವೇ ಅಪ್ಪಟ ಪ್ರತಿಮೆಯಂತೆ ಕೊಂಚವೂ ಅಲ್ಲಾಡದೆ ಹೊದಿಕೆಯನ್ನು ಹೊತ್ತುಕೊಂಡು ಮಂಚದ ಮೇಲೆಯೇ ಕುಳಿತುಬಿಡುತ್ತೇವೆ. ನಮ್ಮದೇ ಯೋಚನೆಯಲ್ಲಿ ಕಳೆದು ಹೋಗಿಬಿಡುತ್ತೇವೆ. ಈ ಎಲ್ಲಾ ಲಕ್ಷಣಗಳನ್ನು ವೈದ್ಯಲೋಕ ಋತುಮಾನದ ಖಿನ್ನತೆ ಎನ್ನುತ್ತಾರೆ ಅಂದ್ರೆ ಸೀಸನಲ್ ಡಿಪ್ರೆಷನ್. ಇದು ಸಾಮಾನ್ಯವಾಗಿ ಕೊರೆಯುವ ಚಳಿಗಾಲದ ವೇಳೆ ಆಕ್ರಮಿಸಿಕೊಳ್ಳುತ್ತದೆ.
ಹಾಗಾದರೆ ಈ ಚಳಿಗಾಲದ ಬೇಸರ ಅಥವಾ ಚಳಿಗಾಲದ ಖಿನ್ನತೆ ನಿಜವಾ? ಅಥವಾ ನಮಗೆ ಬೇಕಾದಂತಹ ವಾತಾವರಣವೊಂದು ಕಳೆದ ಹೋದ ಮನಸ್ಥಿತಿಯಲ್ಲಿರುವ ಭಾವವಾ? ಈ ಬಗ್ಗೆ ಹಲವರು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಇದೊಂದು ಮೂಡ್ ಸ್ವಿಂಗಾ ಇಲ್ಲವೇ ವಾತಾವರಣದಲ್ಲಾದ ಬದಲಾವಣೆಗೆ ದೇಹ ಮತ್ತು ಮನಸ್ಸು ಪ್ರತಿಕ್ರಿಯಿಸುವ ರೀತಿಯಾ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:ಮೀನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ? ನೀವು ಓದಲೇಬೇಕಾದ ಸ್ಟೊರಿ!
ಈ ವಿಚಾರದಲ್ಲಿ ದೆಹಲಿಯ ಆಪ್ತಸಮಾಲೋಚಕಿಯಾದ ಜಸ್ರೀನ್ ಬಿರ್ಗಿ ಒಂದು ಸ್ಪಷ್ಟತೆಯನ್ನು ನೀಡುತ್ತಾರೆ. ಚಳಿಗಾಲ ಸಾಮಾನ್ಯವಾಗಿ ವಿಷಣ್ಣತೆ, ಬೇಸರದ ಭಾವವನ್ನು ತುಂಬುತ್ತದೆ. ಇದನ್ನು ಸಾಮಾನ್ಯವಾಗಿ ಸೀಸನ್ ಅಫೆಕ್ಟಿವ್ ಡಿಸಾರ್ಡರ್ ಎಂದು ಕರೆಯುತ್ತಾರೆ. ಬೇಸರ ಎನ್ನುವುದು ಚಳಿಗಾಲದಲ್ಲಿ ಸಾಮಾನ್ಯ ಸಮಯದಲ್ಲಿಗಿಂತ ಹೆಚ್ಚು ಇರುತ್ತದೆ.ಇದನ್ನೇ ಸಾಮಾನ್ಯವಾಗಿ ವಿಂಟರ್ ಡಿಪ್ರೆಷನ್ ಅಂದ್ರೆ ಚಳಿಗಾಲದ ಖಿನ್ನತೆ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕಾಗಿ ಪರದಾಡುತ್ತಿದ್ದೀರಾ? ಈ ಐದು ತರಕಾರಿ ತಪ್ಪದೇ ಸೇವಿಸಿ
ಇನ್ನು ಬೆಂಗಳೂರಿನ ಸಕ್ರಾ ವರ್ಲ್ಡ್ ಹಾಸ್ಪಿಟಲ್ನ ಸೈಕಾಲಾಜಿಸ್ಟ್ ಡಾ ಶಿಲ್ಪಿ ಸರಸ್ವತಿ ಅವರು ಹೇಳುವ ಪ್ರಕಾರ ಚಳಿಗಾಲ ಖಿನ್ನತೆ, ಮನಸ್ಥಿತಿ, ಶಕ್ತಿ ಮಟ್ಟ, ನಿದ್ರೆಯ ಕಾಲಾವಧಿ ಮತ್ತು ಹಸಿವಿನ ಮೇಲೆ ಭಯಂಕರ ಪರಿಣಾಮ ಬೀರುತ್ತದೆ. ಈ ಎಲ್ಲಾ ಲಕ್ಷಣಗಳು ಬೇಸರದ ಭಾವವನ್ನೇ ಸೂಚಿಸುತ್ತಿರುತ್ತವೆ. ಈ ಎಲ್ಲ ಲಕ್ಷಣಗಳನ್ನು ಸಾಮಾನ್ಯವಾಗಿ ಚಳಿಗಾಲದ ಖಿನ್ನತೆ ಎಂದು ಗುರುತಿಸುತ್ತಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ