ಆರ್​​​ಸಿಬಿ ನಾಯಕತ್ವಕ್ಕಾಗಿ KL​​ ರಾಹುಲ್​, ಸ್ಟಾರ್​ ಪ್ಲೇಯರ್​​ ಮಧ್ಯೆ ಪೈಪೋಟಿ; ಯಾರು ಮುಂದಿನ ಕ್ಯಾಪ್ಟನ್​​?

author-image
Ganesh Nachikethu
Updated On
ಆರ್​​​ಸಿಬಿ ನಾಯಕತ್ವಕ್ಕಾಗಿ KL​​ ರಾಹುಲ್​, ಸ್ಟಾರ್​ ಪ್ಲೇಯರ್​​ ಮಧ್ಯೆ ಪೈಪೋಟಿ; ಯಾರು ಮುಂದಿನ ಕ್ಯಾಪ್ಟನ್​​?
Advertisment
  • ಲಕ್ನೋ ತಂಡದಿಂದ ಕೆ.ಎಲ್​​ ರಾಹುಲ್​ಗೆ ಮತ್ತೆ ಅವಮಾನ
  • ಸ್ಫೋಟಕ ಸುಳಿವು ಬಿಚ್ಚಿಟ್ಟ ಲಕ್ನೋ ತಂಡದ ಸೀನಿಯರ್​​​!
  • ಕೆ.ಎಲ್​ ರಾಹುಲ್​ ಆರ್​​ಸಿಬಿ ತಂಡಕ್ಕೆ ಬರೋದು ಗ್ಯಾರಂಟಿ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಐಪಿಎಲ್​ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ವರ್ಷದ ಕೊನೆಗೆ ಡಿಸೆಂಬರ್​​ನಲ್ಲಿ 2025ರ ಮೆಗಾ ಐಪಿಎಲ್​​ ಹರಾಜು ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು 4 ಆಟಗಾರರನ್ನು ಮಾತ್ರ ರೀಟೈನ್​ ಮಾಡಿಕೊಂಡು ಉಳಿದ ಎಲ್ಲರನ್ನು ಐಪಿಎಲ್​ ಹರಾಜಿಗೆ ಬಿಡಬೇಕಾಗುತ್ತದೆ. ಒಳ್ಳೆ ಆಟಗಾರರ ಖರೀದಿಗಾಗಿ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಪ್ಲಾನ್​ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಕ್ಯಾಪ್ಟನ್​ ಕೆ.ಎಲ್​ ರಾಹುಲ್​ಗೆ ಲಕ್ನೋ ತಂಡ ಬಿಗ್​ ಶಾಕ್​ ನೀಡಿದೆ.

ಈಗಾಗಲೇ ಲಕ್ನೋ ತಂಡದ ಆಟಗಾರ ಅಮಿತ್​ ಮಿಶ್ರಾ, ಕೆ.ಎಲ್​​ ರಾಹುಲ್​​ಗಿಂತ ಉತ್ತಮ ಕ್ಯಾಪ್ಟನ್​ಗಾಗಿ ಲಕ್ನೋ ತಂಡ ಕಾಯುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಕೆ.ಎಲ್​ ರಾಹುಲ್​​ ಲಕ್ನೋ ಟೀಮ್​ ತೊರೆಯೋ ಸುಳಿವು ನೀಡಿದ್ದಾರೆ. ಹಾಗಾಗಿ ಲಕ್ನೋ ತಂಡ ತೊರೆದು ಕೆ.ಎಲ್​ ರಾಹುಲ್​ ಆರ್​​ಸಿಬಿ ಸೇರೋದು ಪಕ್ಕಾ ಆಗಿದೆ. ಜತೆಗೆ ಕೆ.ಎಲ್​ ರಾಹುಲ್​ ಅವರೊಂದಿಗೆ ಆರ್​​ಸಿಬಿ ಮುಂಬೈ ತಂಡದ ಸ್ಫೋಟಕ ಬ್ಯಾಟರ್​​ ಇಶಾನ್​ ಕಿಶನ್​ಗೂ ಮಣೆ ಹಾಕಲಿದೆ ಎನ್ನುವ ಸುದ್ದಿ ವರದಿಯಾಗಿದೆ.


ಇಶಾನ್​ ಕಿಶನ್​, ಕೆ.ಎಲ್​ ರಾಹುಲ್​ ಮಧ್ಯೆ ಆರ್​​ಸಿಬಿ ಕ್ಯಾಪ್ಟನ್ಸಿಗಾಗಿ ಪೈಪೋಟಿ!

ಆರ್​​​ಸಿಬಿ ಕ್ಯಾಪ್ಟನ್ಸಿಗಾಗಿ ಇಶಾನ್​ ಕಿಶನ್​ ಮತ್ತು ಕೆ.ಎಲ್​ ರಾಹುಲ್​​ ಮಧ್ಯೆ ಪೈಪೋಟಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಈ ಇಬ್ಬರ ಮಧ್ಯೆ ನಿಮ್ಮ ಆಯ್ಕೆ ಯಾರು? ಎಂದು ಆರ್​​ಸಿಬಿ ಫ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಟ್ರೆಂಡ್​ ಮಾಡುತ್ತಿದ್ದಾರೆ. ಅದಕ್ಕಾಗಿ ಬಹುತೇಕ ಎಲ್ಲರೂ ಕೆ.ಎಲ್​ ರಾಹುಲ್​ ಅವರೇ ಆರ್​​ಸಿಬಿ ಕ್ಯಾಪ್ಟನ್​ ಆಗಲಿ ಎಂದು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment