/newsfirstlive-kannada/media/post_attachments/wp-content/uploads/2024/04/Ishan_Kishan.jpg)
ಟೀಮ್​ ಇಂಡಿಯಾದ ಹೆಡ್​​ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕಿದ್ದ ಸ್ಟಾರ್​ ಕ್ರಿಕೆಟರ್​​ ಇಶಾನ್​ ಕಿಶನ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿತ್ತು. ಉದ್ದೇಪೂರ್ವಕವಾಗಿ 2024ರ ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಇಶಾನ್ ಕಿಶನ್​ಗೆ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​​​ನಿಂದ ಕಿತ್ತೆಸೆಯಲಾಗಿದೆ.
ಬಿಸಿಸಿಐ ಕಳೆದ ವರ್ಷ ಮಾರ್ಚ್​​ ತಿಂಗಳಲ್ಲಿ ಇಶನ್ ಕಿಶನ್ ಅವರನ್ನು ವಾರ್ಷಿಕ 1 ಕೋಟಿ ರೂ. ನೀಡುವ ಸಿ ಗ್ರೇಡ್​ ಒಪ್ಪಂದಕ್ಕೆ ಸೇರಿಸಿಕೊಂಡಿತ್ತು. ಆದರೆ, ಈ ವರ್ಷದ ಗುತ್ತಿಗೆ ಅನೌನ್ಸ್​ ಆಗಿದ್ದು, ಇಶಾನ್​ಗೆ ಕೊಕ್​ ಕೊಡಲಾಗಿತ್ತು. ರಣಜಿ ಕ್ರಿಕೆಟ್​ ಆಡದ ಕಾರಣದಿಂದಲೇ ಇಶಾನ್ ಕಿಶನ್​​ಗೆ ಒಪ್ಪಂದಿಂದ ಕೈ ಬಿಡಲಾಗಿತ್ತು. ಈ ಬಗ್ಗೆ ಕೊನೆಗೂ ಇಶಾನ್​ ಮೌನಮುರಿದಿದ್ದಾರೆ.
ನಾನು ಈ ಹಿಂದೆ ಬ್ರೇಕ್​ ತೆಗೆದುಕೊಂಡಿದ್ದೆ. ಅದರ ಮಧ್ಯೆ ಪ್ರಾಕ್ಟೀಸ್​ ಕೂಡ ಮಾಡುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ನನ್ನ ಬಗ್ಗೆ ಏನೇನೋ ಬರೆಯಲಾಗಿತ್ತು. ನಮ್ಮ ಕೈಯಲ್ಲಿ ಏನು ಇರಲ್ಲ. ಸಾಕಷ್ಟು ನಡೆಯಿತು, ನಾನು ಅದರಿಂದ ಬಹಳಷ್ಟು ಕಳೆದುಕೊಂಡೆ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ರು.
ನನ್ನ ಸಮಯವನ್ನು ನಾನು ಪ್ರಾಪರ್​ ಆಗಿ ಉಪಯೋಗ ಮಾಡಿಕೊಂಡಿದ್ದೇನೆ. ನಾನು ಬೇಕಾಬಿಟ್ಟಿ ಬ್ಯಾಟಿಂಗ್​ ಮಾಡಲ್ಲ. ಟಿ20 ಕೂಡ ಬಿಗ್​​ ಗೇಮ್​ ಎಂದು ಭಾವಿಸಿ ಸಮಯ ತೆಗೆದುಕೊಂಡು ಬಳಿಕ ಟಾರ್ಗೆಟ್​ ಮಾಡುತ್ತೇನೆ. ಏಕಾಏಕಿ ಬಿಗ್​ ಶಾಟ್​ಗಳಿಗೆ ಕೈ ಹಾಕಲ್ಲ ಎಂದರು.
ಇದನ್ನೂ ಓದಿ: ಇಂದು, ನಾಳೆ ರಾಜ್ಯದಲ್ಲಿ ವರುಣನ ಆರ್ಭಟ; ಈ ಜಿಲ್ಲೆಗಳಲ್ಲಿ ಭಾರೀ ಮಳೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us