/newsfirstlive-kannada/media/post_attachments/wp-content/uploads/2024/07/ISHAN_KISHAN.jpg)
ಇಶನ್ ಕಿಶನ್.. ಟೀಮ್ ಇಂಡಿಯಾದ ಸ್ಫೋಟಕ ಆಟಗಾರ. ಭವಿಷ್ಯದ ಭರವಸೆ ಅನಿಸಿಕೊಂಡಿದ್ದ ಈತನ ಕರಿಯರ್​ ಕಳೆದ 6 ತಿಂಗಳಿಂದ ನಿಂತ ನೀರಾಗಿದೆ. ನಿನ್ನೆಯಷ್ಟೇ 25ನೇ ವಸಂತಕ್ಕೆ ಕಾಲಿಟ್ಟಿರುವ ಯಂಗ್ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​, ಹೊಸ ಶಪಥ ಮಾಡಿದ್ದಾರೆ. ಸವಾಲಿಗೆ ಸಿದ್ಧ ಎಂದಿರುವ ಇಶನ್, ಹುಟ್ಟುಹಬ್ಬದಂದು ಮಾಡಿರೋ ಶಪಥವೇನು..?
ಕಿಶನ್.. ಟೀಮ್ ಇಂಡಿಯಾದ ಟ್ಯಾಲೆಂಟೆಟ್ ಪ್ಲೇಯರ್. ಸ್ಪೋಟಕ ಬ್ಯಾಟಿಂಗ್​ಗೂ ಸೈ.. ವಿಕೆಟ್ ಕೀಪಿಂಗ್​ಗೂ ಜೈ.! ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ್ದ ಇಶನ್, ಟೀಮ್ ಇಂಡಿಯಾದ ಫ್ಯೂಚರ್ ಅಂತಾನೇ ಗುರುತಿಸಿಕೊಂಡವರು. ಆದ್ರೆ, ಸೌತ್ ಆಫ್ರಿಕಾ ಸರಣಿ ವೇಳೆ ತೆಗೆದುಕೊಂಡ ಒಂದೇ ಒಂದು ನಿರ್ಧಾರದಿಂದ ವೃತ್ತಿ ಜೀವನವೇ ಹಳ್ಳ ಹಿಡಿದಿದೆ. ಒಂದು ವರ್ಷದಿಂದ ಕಿಶನ್ ಕ್ರಿಕೆಟರ್ ಕರಿಯರ್ ನಿಂತ ನೀರಾಗಿದೆ.
/newsfirstlive-kannada/media/post_attachments/wp-content/uploads/2024/07/ISHAN_KISHAN_1.jpg)
25ನೇ ವರ್ಷಕ್ಕೆ ಕಾಲಿಟ್ಟ ಇಶಾನ್ ಹೊಸ ಶಪಥ!
ನಿನ್ನೆಯಷ್ಟೇ 25ನೇ ವಸಂತಕ್ಕೆ ಇಶಾನ್ ಕಿಶನ್​​ ಕಾಲಿಟ್ಟಿದ್ದಾರೆ. ವೃತ್ತಿ ಜೀವನದಲ್ಲಿ ಅಂತತ್ರಕ್ಕೆ ಸಿಲುಕಿರುವ ಇಶಾನ್, ತಮ್ಮ ಹುಟ್ಟುಹಬ್ಬದಂದೇ ಟೀಮ್ ಇಂಡಿಯಾ ಕಮ್​ಬ್ಯಾಕ್ ಶಪಥ ಮಾಡಿದ್ದಾರೆ. ಕಮ್​​ಬ್ಯಾಕ್​ಗಾಗಿ ಸವಾಲು ಸ್ವೀಕರಿಸುವ ಪ್ರತಿಜ್ಞೆ ಮಾಡಿದ್ದಾರೆ.
ನೆಚ್ಚಿನ ಬಾಬಾ ಆಶೀರ್ವಾದ ಪಡೆದ ಇಶನ್ ಕಿಶನ್!
ಹುಟ್ಟುಹಬ್ಬದಂದೇ ಟೀಮ್ ಇಂಡಿಯಾಗೆ ಕಮ್​ಮ್ಯಾಕ್ ಶಪಥ ಮಾಡಿರುವ ಇಶನ್, ಜನ್ಮದಿನದಂದು ಶಿರಡಿಗೆ ಭೇಟಿ ಕೊಟ್ಟು, ಸಾಯಿ ಬಾಬಾ ದರ್ಶನ ಪಡೆದು ಆಶೀವಾದ ಪಡೆದಿದ್ದಾರೆ. ಇಶನ್ ಬಾಬಾರ ಪರಮ ಭಕ್ತರಾಗಿದ್ದಾರೆ. ಇದೇ ಕಾರಣಕ್ಕೆ ಬಲಗೈ ಮೇಲೆ ಸಾಯಿ ಬಾಬಾರ ಫೋಟೋ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಕಮ್​ಬ್ಯಾಕ್​ಗೆ ಪ್ರತಿಜ್ಞೆ.. ಅಭ್ಯಾಸ ಆರಂಭಿಸಿದ ಕಿಶನ್..!
ಅಂದ್ಹಾಗೆ, ಇಶಾನ್ ಶಪಥ ಮಾಡಿ ಸುಮ್ಮನಿಲ್ಲ.. ಇದಕ್ಕೆ ಬೇಕಾದ ತಯಾರಿಯೂ ಇಶನ್​ ಆರಂಭಿಸಿದ್ದಾರೆ. ಟೀಮ್ ಇಂಡಿಯಾ ಕಮ್​ಬ್ಯಾಕ್​ಗಾಗಿ ಎದುರು ನೋಡ್ತಿರುವ ಇಶನ್, ಐಪಿಎಲ್​ ಬಳಿಕ ಮೊದಲ ಬಾರಿ ನೆಟ್ಸ್​ನಲ್ಲಿ ಬೆವರು ಹರಿಸಿದ್ದಾರೆ. ಈಗಾಗಲೇ ಬ್ಯಾಟಿಂಗ್ ಅಭ್ಯಾಸ ನಡೆಸ್ತಿರುವ ಇಶನ್, ನೆಟ್ಸ್​ನಲ್ಲಿ ಬಿಗ್ ಶಾಟ್ಸ್​ ಆಡಿ ಗಮನ ಸೆಳೆದಿದ್ದಾರೆ. ವಿನೂತನ ಶಾಟ್ಸ್​ ಮೇಲೆ ಫೋಕಸ್ ಮಾಡಿರುವ ಇಶಾನ್, ಹೊಸ ರೂಪದಲ್ಲಿ ಟೀಮ್ ಇಂಡಿಯಾಗೆ ರೀ ಎಂಟ್ರಿ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಕಮ್​ಬ್ಯಾಕ್​ಗೆ ಎದುರು ನೋಡುತ್ತಿದ್ದೇನೆ!
ಟೀಮ್ ಇಂಡಿಯಾ ಪರ ಆಡುವುದನ್ನ ನಾನು ಎದುರು ನೋಡುತ್ತಿದ್ದೇನೆ. ಟಿ20, ಏಕದಿನ ಹಾಗೂ ಟೆಸ್ಟ್ನಲ್ಲಿ ಉತ್ತಮ ಆಟವಾಡಿದ್ದೇನೆ. ಹೀಗಾಗಿ ಮೂರೂ ಫಾರ್ಮೆಟ್ನಲ್ಲಿ ಮತ್ತೆ ಆಡುವುದು ನನ್ನ ಗುರಿಯಾಗಿದೆ. ಸದ್ಯ ಭವಿಷ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ವಾಸ್ತವದಲ್ಲಿ ಬದುಕಲು ಬಯಸುತ್ತೇನೆ. 6 ತಿಂಗಳು ಹಿಂದೆ ಇದ್ದ ಕಿಶನ್‌ಗಿಂತಲೂ ವಿಭಿನ್ನ ಆಟಗಾರನಾಗಿ ತಯಾರಾಗುವತ್ತ ಮಾತ್ರವೇ ನನ್ನ ಗಮನವಿದೆ. ಹೊಸ ಹೊಡೆತಗಳನ್ನಾಡುವ ಕಡೆಗೆ ಅಭ್ಯಾಸ ಮಾಡುತ್ತೇನೆ. ಹಿಂದಿನದನ್ನು ಮರೆತು ಮುಂದಿನ ದಿನಗಳಿಗಾಗಿ ಶ್ರಮಿಸುತ್ತೇನೆ. ದೇಶಿ ಕ್ರಿಕೆಟ್ ಶುರುವಾಗುವುದರ ಕಡೆಗೆ ಎದುರು ನೋಡುತ್ತಿದ್ದೇನೆ. ಜಾರ್ಖಂಡ್ ತಂಡದ ಪರ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ.
ಇಶನ್ ಕಿಶನ್, ಟೀಮ್ ಇಂಡಿಯಾ ಆಟಗಾರ
ದೇಶಿ ಕ್ರಿಕೆಟ್​ನತ್ತ ಇಶಾನ್ ಕಿಶನ್ ಫೋಕಸ್..!
ದೇಶಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ್ದ ಇಶಾನ್ ಕಿಶನ್, ಕಳೆದ 6 ತಿಂಗಳಿಂದ ಟೀಮ್ ಇಂಡಿಯಾದಿಂದ ಕಂಪ್ಲೀಟ್ ದೂರ ಉಳಿದಿದ್ದಾರೆ. ಈ ಅವಧಿಯಲ್ಲಿ ಒಂದರ ಮೇಲೊಂದರಂತೆ ಹಿನ್ನಡೆ ಅನುಭವಿಸಿರುವ ಇಶನ್, ಜಾರ್ಖಂಡ್ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇದಕ್ಕಾಗಿಯೇ ಅಭ್ಯಾಸಕ್ಕೆ ದುಮುಕಿರುವ ಇಶಾನ್, ಜಾರ್ಖಂಡ್​ ಪರ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ ಮರಳುವ ಉತ್ಸಾಹದಲ್ಲಿದ್ದಾರೆ. ಆದ್ರೆ, ಕಿಶನ್ ಕಮ್​​ಬ್ಯಾಕ್ ನಿಜಕ್ಕೂ ಸುಲಭದ್ದಾಗಿಲ್ಲ.
/newsfirstlive-kannada/media/post_attachments/wp-content/uploads/2023/11/ISHAN_KISHAN_ROHIT.jpg)
6 ತಿಂಗಳ ಹಿಂದಿನ ಟೀಮ್ ಇಂಡಿಯಾಗೂ, ಈಗಿನ ಟೀಮ್ ಇಂಡಿಯಾಗೂ ಭಾರೀ ಬದಲಾವಣೆಯಾಗಿದೆ. ಯುವ ಆಟಗಾರರ ಆಗಮನವಾಗಿದೆ. ಒಂದೊಂದು ಸ್ಲಾಟ್​ಗೂ ಮೂರ್ನಾಲ್ಕು ಆಟಗಾರರು ಇದ್ದಾರೆ. ಇಶಾನ್ ಆಡುವ ಓಪನಿಂಗ್ ಸ್ಲಾಟ್, ವಿಕೆಟ್ ಕೀಪಿಂಗ್ ಕೋಟಾ​ಗೂ ಸಾಲು ಸಾಲು ಆಟಗಾರರು ಕ್ಯೂ ನಿಂತಿದ್ದಾರೆ. ಹೀಗಾಗಿ ಇಶನ್ ಕಮ್​ಬ್ಯಾಕ್ ಮಾಡಬೇಕಾದ್ರೆ, ಎಲ್ಲರಿಗಿಂತ ನಾನು ಪ್ರತ್ಯೇಕ ಅನ್ನೋದನ್ನ ಆಟದ ವೈಖರಿಯಲ್ಲಿ ತೋರಿಸಬೇಕಿದೆ. ಆಯ್ಕೆಗಾರರನ್ನ ಇಂಪ್ರೆಸ್ ಮಾಡಬೇಕಿದೆ.
ಅಂದು ಕಿಶನ್​ ಮಾಡಿದ ಒಂದೇ ಒಂದು ಯಡವಟ್ಟು, ಟೀಮ್ ಇಂಡಿಯಾದಿಂದ ದೂರ ಉಳಿಯುಂತೆ ಮಾಡಿದೆ. ಇದೀಗ ಅದೇ ಕಿಶನ್​ ಟೀಮ್ ಇಂಡಿಯಾದ ಕರೆ ಪಡೆಯಲು ಶಪಥ ಮಾಡಿದ್ದಾರೆ. ಅದಕ್ಕಾಗಿ ಅಭ್ಯಾಸವನ್ನೂ ಆರಂಭಿಸಿದ್ದು, ಎಷ್ಟರ ಮಟ್ಟಿಗೆ ಸಕ್ಸಸ್ ಕಾಣ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us