ಕಿಶನ್ ಸೆಂಚುರಿ ಸೆಲೆಬ್ರೆಷನ್.. ರಾಯಲ್ಸ್​ಗೆ 286 ರನ್​ಗಳ ಬಿಗ್ ಟಾರ್ಗೆ​ಟ್​ ಕೊಟ್ಟ ಹೈದ್ರಾಬಾದ್

author-image
Bheemappa
Updated On
ಕಿಶನ್ ಸೆಂಚುರಿ ಸೆಲೆಬ್ರೆಷನ್.. ರಾಯಲ್ಸ್​ಗೆ 286 ರನ್​ಗಳ ಬಿಗ್ ಟಾರ್ಗೆ​ಟ್​ ಕೊಟ್ಟ ಹೈದ್ರಾಬಾದ್
Advertisment
  • ಇಶನ್​ ಕಿಶನ್, ಟ್ರಾವಿಸ್ ಹೆಡ್​ ಬ್ಯಾಟಿಂಗ್​ಗೆ ಫ್ಯಾನ್ಸ್ ಫುಲ್ ಫಿದಾ
  • ಮೈದಾನದ ಮೂಲೆ ಮೂಲೆಗೂ ಬಾಲ್ ಬಾರಿಸಿದ ಯುವ ಬ್ಯಾಟರ್
  • 92 ರನ್​ ಗಳಿಸಿದರೂ ಭಯ ಬೀಳದ ಕಿಶನ್, ಸಿಕ್ಸರ್​ ಸಿಡಿಸಿ ಬಿಟ್ಟರು

ಸನ್​ರೈಸರ್ಸ್​ ಹೈದ್ರಾಬಾದ್ ತಂಡ ಸೇರಿದ್ದ ಇಶನ್ ಕಿಶನ್ ಮೊದಲ ಪಂದ್ಯದಲ್ಲಿ ಅಮೋಘವಾದ ಸೆಂಚುರಿ ಸಿಡಿಸಿ ಅಂಭ್ರಮಿಸಿದ್ದಾರೆ. ಇದರ ಜೊತೆಗೆ ಹೈದ್ರಾಬಾದ್ ತಂಡ, 286 ರನ್​ಗಳ ಬೃಹತ್​ ಮೊತ್ತದ ರನ್​ಗಳ ಟಾರ್ಗೆಟ್​ ಅನ್ನು ರಾಜಸ್ಥಾನ್ ರಾಯಲ್ಸ್​ಗೆ ನೀಡಿದೆ.

publive-image

ಹೈದ್ರಾಬಾದ್​ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್​ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಬ್ಯಾಟಿಂಗ್​ನಲ್ಲಿ ಮತ್ತೆ ಅಬ್ಬರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಅನ್ನು ಮನಬಂದಂತೆ ಚಚ್ಚಿ, ತಂಡಕ್ಕೆ ಭದ್ರ ಬುನಾದಿ ಹಾಕಿದ್ದರು. ಇವರ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಇಶನ್ ಕಿಶನ್ ಸಿಡಿಲ ಮರಿಯಂತೆ ಸಿಡಿದು ನಿಂತರು. ಒಂದೊಂದು ಎಸೆತವನ್ನು ಬೌಂಡರಿ, ಸಿಕ್ಸರ್​ ಬಾರಿಸಿ ಈ ಟೂರ್ನಿಯಲ್ಲಿ ಮೊದಲ ಸೆಂಚುರಿ ಗಳಿಸಿ ಕೊನೆಯವರೆಗೆ ಅಜೇಯರಾಗಿ ಉಳಿದರು.

ತಂಡದಲ್ಲಿ 3ನೇ ಬ್ಯಾಟಿಂಗ್ ಸ್ಲಾಟ್​ನಲ್ಲಿ ಕ್ರೀಸ್​ಗೆ ಬಂದ ಇಶನ್ ಕಿಶನ್, ಟ್ರಾವಿಸ್ ಹೆಡ್​ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಆರಂಭದಿಂದಲೂ ಹೊಡಿ ಬಡಿ ಬ್ಯಾಟಿಂಗ್ ಮಾಡಿದ ಕಿಶನ್​ 92 ರನ್​ ಗಳಿಸಿದ್ದಾಗ ಮನಮೋಹಕವಾದ ಸಿಕ್ಸರ್ ಸಿಡಿಸಿದರು. ಇದರಿಂದ 98 ರನ್​ಗಳಾದವು. ಇದರ ಬೆನ್ನಲ್ಲೇ ಮತ್ತೊಂದು ಎಸೆತವನ್ನು ಸ್ಟ್ರೇಟ್​ ಆಗಿ ಬೌಂಡರಿಗೆ ಬಾರಿಸಿದರು. ಆದರೆ ಬೌಂಡರಿ ಹೋಗಲಿಲ್ಲವಾದರೂ 2 ರನ್​ ಬಂದವು. ಇದರಿಂದ ಕಿಶನ್, 45 ಎಸೆತಗಳಲ್ಲಿ 100 ರನ್​ಗಳನ್ನು​ ಪೂರೈಸಿ ಮೈದಾನದಲ್ಲಿ ಅದ್ಧೂರಿ ಸೆಲೆಬ್ರೆಷನ್ ಮಾಡಿದರು. ​

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಫೀಲ್ಡಿಂಗ್​​ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಬಂದ ಹೈದ್ರಾಬಾದ್ ಓಪನರ್ಸ್​ ಭರ್ಜರಿ ಓಪನಿಂಗ್ ಪಡೆದರು. ಟ್ರಾವಿಸ್ ಹೆಡ್​ ಕಡಿಮೆ ಬೌಲಂಗ್​ನಲ್ಲೇ ಅಂದರೆ ಕೇವಲ 21 ಬೌಲ್​ಗಳಲ್ಲಿ ಅರ್ಧ ಶತಕ ಪೂರೈಸಿದರು. ಕೇವಲ 31 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಮೇತ 67 ರನ್​ ಗಳಿಸಿ ಹೆಡ್​ ಔಟ್ ಆದರು.

ಇದನ್ನೂ ಓದಿ6, 6, 6; ರಾಯಲ್ಸ್​ ಬೌಲರ್​ಗಳಿಗೆ ಬೆಂಡೆತ್ತಿದ ಟ್ರಾವಿಸ್ ಹೆಡ್​.. ಹೊಡಿಬಡಿ ಬ್ಯಾಟಿಂಗ್ ಹೇಗಿತ್ತು?

publive-image

ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್​ ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ 5 ಬೌಂಡರಿ ಸಮೇತ 24 ರನ್​ ಗಳಿಸಿ ಆಡುವಾಗ ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ನಿತೀಶ್ ಕುಮಾರ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿ 30 ರನ್​ಗೆ ವಿಕೆಟ್ ಒಪ್ಪಿಸಿದರು. ಹೆನ್ರಿಚ್ ಕ್ಲಾಸಿನ್ ಕೇವಲ 15 ಎಸೆತದಲ್ಲಿ 34 ರನ್​ ಬಾರಿಸಿದರು. ಇನ್ನೊಂದು ಕಡೆ ಕ್ರೀಸ್​ ಕಾಯ್ದುಕೊಂಡಿದ್ದ ಕಿಶನ್​ ಸೆಂಚುರಿ ಸಿಡಿಸಿದರು ತಮ್ಮ ಬ್ಯಾಟಿಂಗ್ ಮುಂದುವರೆಸಿದ್ದರು. ಹೀಗಾಗಿ ಹೈದ್ರಾಬಾದ್ 20 ಓವರ್​ಗಳಲ್ಲಿ 287 ರನ್​ಗಳ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ರಾಜಸ್ಥಾನ ರಾಯಲ್ಸ್​ಗೆ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment