newsfirstkannada.com

BCCI, ದ್ರಾವಿಡ್​ ಮಾತಿಗೂ ಇಶನ್​ ಕಿಶನ್ ಡೋಂಟ್​ಕೇರ್​..​ ಟೀಮ್​ ತೊರೆದಿದ್ದಕ್ಕೆ ಅಸಲಿ ಕಾರಣ ಬಹಿರಂಗ!

Share :

Published February 10, 2024 at 2:51pm

  ಪರೋಕ್ಷವಾಗಿ ಡೊಮೆಸ್ಟಿಕ್​ ಆಡುವಂತೆ ​ಹೇಳುತ್ತಿರುವ ದ್ರಾವಿಡ್

  ರಣಜಿ ಟ್ರೋಫಿ ಟೂರ್ನಿ ಕಡೆಗೆ ಮುಖ ಮಾಡದ ಇಶನ್ ಕಿಶನ್

  ಜಿತೇಶ್​ ಶರ್ಮಾಗೆ ಮಣೆ ಹಾಕಿರುವುದರ ಹಿಂದಿದೆ ಅಸಲಿ ಕಾರಣ

ಸೌತ್​​ ಆಫ್ರಿಕಾ ಪ್ರವಾಸದಲ್ಲಿದ್ದ ಇಶನ್ ಕಿಶನ್​ ಇದ್ದಕ್ಕಿದ್ದಂತೆ ಭಾರತಕ್ಕೆ ವಾಪಸ್ ಆಗಿದ್ಯಾಕೆ. ಈ ಪ್ರಶ್ನೆ ಅವತ್ತಿಂದ ಇವತ್ತಿನವರೆಗೆ ಹಲವು ಉತ್ತರಗಳು ಸಿಕ್ಕಿದೆ. ಮಾನಸಿಕ ಒತ್ತಡ, ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ಹೀಗೆ ಹಲವು ಕಾರಣಗಳು ರಿವೀಲ್​ ಆದ್ವು. ಆದ್ರೆ, ಅಸಲಿ ಮ್ಯಾಟರ್​ ಬೇರೆನೆ ಇದೆ.

ಕಳೆದ ಡಿಸೆಂಬರ್​ನಲ್ಲಿ ಟೀಮ್​ ಇಂಡಿಯಾ ಜತೆ ಸೌತ್​ ಆಫ್ರಿಕಾಗೆ ತೆರಳಿದ್ದ ಕಿಶನ್​ ಎಲ್ಲರಿಗೂ ಶಾಕ್ ನೀಡಿದ್ರು. ಟೆಸ್ಟ್​ ಸರಣಿ ಆಡಬೇಕಿದ್ದ ಕಿಶನ್ ಟಿ20 ಸರಣಿಯ ಮುಗಿದ ಬೆನ್ನಲ್ಲೇ, ವೈಯಕ್ತಿಕ ಕಾರಣ ನೀಡಿ ತವರಿಗೆ ವಾಪಸ್ ಆಗಿದ್ರು. ಟೀಮ್​ ಇಂಡಿಯಾದಲ್ಲಿ ಒಂದೊಂದು ಸ್ಥಾನಕ್ಕೂ ತೀವ್ರ ಪೈಪೋಟಿ ಇರೋವಾಗ ಸಿಕ್ಕ ಅವಕಾಶವನ್ನ ಕಿಶನ್​ ಬಿಟ್ಟು ಬಂದಿದ್ರು. ಹೀಗಾಗಿ ಈ ಸರ್​​ಪ್ರೈಸಿಂಗ್​ ನಿರ್ಧಾರ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು.

ಕಿಶನ್​ ದುಬೈನಲ್ಲಿ ಮೋಜು- ಮಸ್ತಿ 

ಮಾನಸಿಕ ಒತ್ತಡದಿಂದಾಗಿ ಕಿಶನ್​ ತವರಿಗೆ ವಾಪಸ್ ಆಗಿದ್ದಾರೆ ಅನ್ನೋ ಸುದ್ದಿ ಆರಂಭದಲ್ಲಿ ಹಬ್ಬಿತ್ತು. ಆದ್ರೆ, ನಂತರದಲ್ಲಿ ಆಗಿದ್ದೇ ಬೇರೆ. ಭಾರತಕ್ಕೆ ಬಂದಿಳಿದ ಕಿಶನ್​, ಕೌನ್​ ಬನೇಗಾ ಕ್ರೋರ್​ಪತಿಯಲ್ಲಿ ಕಾಣಿಸಿಕೊಂಡರು. ಆ ಬಳಿಕ ದುಬೈನಲ್ಲಿ ಮೋಜು- ಮಸ್ತಿ ಮಾಡಿದ್ರು. ಇದ್ರಿಂದಾಗಿ ಬಿಸಿಸಿಐ ಬಾಸ್​ಗಳ ಕೆಂಗಣ್ಣಿಗೆ ಗುರಿಯಾದ್ರು. ಹೀಗಾಗಿ ಅಫ್ಘಾನ್​ ಎದುರಿನ ಟಿ20 ಹಾಗೂ ಈಗ ನಡೀತಿರೋ ಇಂಗ್ಲೆಂಡ್​ ಟೆಸ್ಟ್​​ ಸರಣಿಯಿಂದ ಹೊರ ಬಿದ್ರು. ಇಷ್ಟೇ ಅಲ್ಲ, ಕಮ್​ಬ್ಯಾಕ್​ ಮಾಡಬೇಕಂದ್ರೆ, ಡೊಮೆಸ್ಟಿಕ್​ ಕ್ರಿಕೆಟ್​ ಆಡುವಂತೆ ಕೋಚ್ ದ್ರಾವಿಡ್​ ಪರೋಕ್ಷವಾಗಿ ಸೂಚನೆಯನ್ನೂ ನೀಡಿದ್ರು.

ಕಮ್​ಬ್ಯಾಕ್​ ಮಾಡಬೇಕಂದ್ರೆ ಕಿಶನ್​ಗೆ ಡೊಮೆಸ್ಟಿಕ್​ ಕ್ರಿಕೆಟ್​ ಆಡುವಂತೆ ಕೋಚ್​ ದ್ರಾವಿಡ್​ ಪರೋಕ್ಷವಾಗಿ ಹೇಳ್ತಾನೆ ಬರ್ತಿದ್ದಾರೆ. ಆದ್ರೆ, ಕಿಶನ್​ ಮಾತ್ರ ಈ ಮಾತಿಗೆ ಬೆಲೆನೇ ಕೊಡ್ತಿಲ್ಲ. ರಣಜಿ ಟ್ರೋಫಿ ಟೂರ್ನಿ ಕಡೆಗೆ ಮುಖ ಮಾಡದ ಕಿಶನ್​, ಬರೋಡಾದಲ್ಲಿ ಮುಂಬೈ ಇಂಡಿಯನ್ಸ್​​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಜೊತೆ ಅಭ್ಯಾಸ ಆರಂಭಿಸಿದ್ದಾರೆ. ಅಲ್ಲಿಗೆ ಐಪಿಎಲ್​ಗೆ ಕಮ್​ಬ್ಯಾಕ್​ ಮಾಡೋದು ಕಿಶನ್​ ಗುರಿ ಅನ್ನೋದು ಕನ್​ಫರ್ಮ್​ ಆಗಿದೆ.

ಮ್ಯಾನೇಜ್​ಮೆಂಟ್​​ ಮೇಲೆ ಕಿಶನ್​ಗೆ ಕೆಂಡದಂಥಾ ಕೋಪ.!

ಇಶನ್​ ಕಿಶನ್​ ಟೀಮ್​ ಮ್ಯಾನೇಜ್​ಮೆಂಟ್​​ ಮೇಲೆ ಹಗೆತನ ಸಾಧಿಸ್ತಾ ಇದ್ದಾರೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಟೀಮ್​ ಮ್ಯಾನೇಜ್​ಮೆಂಟ್​ ಮೇಲೆ ಕಿಶನ್​ಗೆ​ ಕೆಂಡದಂಥಾ ಕೋಪವಿದೆ. ಇದಕ್ಕೆಲ್ಲ ಕಾರಣ ಜಿತೇಶ್​ ಶರ್ಮಾ ಸೆಲೆಕ್ಷನ್​.​ ಕಿಶನ್​ರನ್ನ ಕಡೆಗಣಿಸಿ ಜಿತೇಶ್​​ ಶರ್ಮಾರನ್ನ ಟಿ20 ತಂಡದ ನಂಬರ್​- 1 ಆಯ್ಕೆ ಮಾಡಿರೋ ಮ್ಯಾನೇಜ್​ಮೆಂಟ್​ನ ನಡೆಯೇ ಕಿಶನ್​ ಕೋಪಕ್ಕೆ ಕಾರಣವಾಗಿದೆ.

ಕಿಶನ್ ಕಡೆಗಣನೆ.. ಜಿತೇಶ್​​ ಮೇಲೆ ಒಲವು.?

ಏಕದಿನ ವಿಶ್ವಕಪ್​ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ​ ಕಿಶನ್​ ಆಡಿದ್ರು. ಸರಣಿಯ ಮೊದಲ 2 ಪಂದ್ಯದಲ್ಲಿ ಕಿಶನ್​​, ಸತತ 2 ಹಾಫ್​ ಸೆಂಚುರಿ ಇನ್ನಿಂಗ್ಸ್​ ಕಟ್ಟಿದ್ರು. ದುರಾದೃಷ್ಟವಶಾತ್​​, 3ನೇ ಪಂದ್ಯದಲ್ಲಿ ಡಕೌಟ್​ ಆಗಿ ನಿರ್ಗಮಿಸಿದ್ರು. ಇಷ್ಟೇ ತಡ.. ನಂತರದ 2 ಪಂದ್ಯಗಳಿಂದ ಕಿಶನ್​​ಗೆ ಗೇಟ್​​ ಪಾಸ್​ ನೀಡಲಾಯ್ತು. ಆ ಬಳಿಕ ಸೌತ್​ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲೂ ಕಿಶನ್​​, ಬೆಂಚ್​ಗೆ ಸೀಮಿತವಾದ್ರು. ಕಿಶನ್​ ಬದಲಿಗೆ ಜಿತೇಶ್​ ಶರ್ಮಾ ಪ್ಲೇಯಿಂಗ್​​ ಇಲೆವೆನ್​ನಲ್ಲಿ ಕಾಣಿಸಿಕೊಂಡರು.

ಕಿಶನ್​ ವಿಶ್ವಕಪ್​ ಸ್ಥಾನಕ್ಕೂ ಕುತ್ತು ತಂದ ಜಿತೇಶ್​.?

ರೋಹಿತ್​ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್​ ಟಿ20 ವಿಶ್ವಕಪ್​ನಲ್ಲಿ ಓಪನರ್​ ಆಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಕಿಶನ್​ಗೆ ಆರಂಭಿಕನ ಸ್ಥಾನ ಸಿಗಲ್ಲ. ಮಿಡಲ್​ ಆರ್ಡರ್​​ನಲ್ಲಿ ಸ್ಥಾನಕ್ಕೆ ತೀವ್ರ ಪೈಪೋಟಿಯಿದ್ದು, ಫಿನಿಷಿಂಗ್ ಸ್ಕಿಲ್​ನಿಂದ ಜಿತೇಶ್​ ಶರ್ಮಾ ಮ್ಯಾನೇಜ್​ಮೆಂಟ್​ನ ಮನ ಗೆದ್ದಿದ್ದಾರೆ. ಹೀಗಾಗಿ ವಿಶ್ವಕಪ್​ ತಂಡದಲ್ಲೂ ಜಿತೇಶ್​​, ಕಿಶನ್​ನ ಓವರ್​ಟೇಕ್​ ಮಾಡೋ ಸಾಧ್ಯತೆಯಿದೆ.

2023ರಲ್ಲಿ ವಿಶ್ವಕಪ್​, ಏಷ್ಯಾಕಪ್​ ಟೂರ್ನಿ ಸೇರಿದಂತೆ ಟೀಮ್​ ಇಂಡಿಯಾ ಆಡಿದ ಬಹುತೇಕ ಎಲ್ಲ ಸರಣಿಗಳ ತಂಡದಲ್ಲಿ ಕಿಶನ್​ ಇದ್ರು. ಆದ್ರೆ, ಪ್ಲೇಯಿಂಗ್ ಇಲೆವೆನ್​ನಲ್ಲಿ ಸಿಕ್ಕಿದ್ದು ಮಾತ್ರ ಕೆಲವೇ ಕೆಲವು ಅವಕಾಶ. ಪರ್ಫಾಮ್​ ಮಾಡಿದ್ರು ಚಾನ್ಸ್​ ಸಿಗಲಿಲ್ಲ ಅಂದ್ರೆ ಯಾರಿಗೆ ತಾನೆ ಕೋಪ ಬರಲ್ಲ ಹೇಳಿ, ಈಗ ಕಿಶನ್​ ವಿಚಾರದಲ್ಲೂ ಅದೇ ಆಗಿದ್ದು, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

BCCI, ದ್ರಾವಿಡ್​ ಮಾತಿಗೂ ಇಶನ್​ ಕಿಶನ್ ಡೋಂಟ್​ಕೇರ್​..​ ಟೀಮ್​ ತೊರೆದಿದ್ದಕ್ಕೆ ಅಸಲಿ ಕಾರಣ ಬಹಿರಂಗ!

https://newsfirstlive.com/wp-content/uploads/2024/02/ISHAN_KISHAN-2.jpg

Load More