/newsfirstlive-kannada/media/post_attachments/wp-content/uploads/2025/07/ISHAN_KISHAN.jpg)
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯ 4ನೇ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿದೆ. ಈಗಾಗಲೇ ಬ್ಯಾಟಿಂಗ್ ಮಾಡಿರುವ ಗಿಲ್ ಪಡೆ ಕೇವಲ 358ಕ್ಕೆ ಆಲೌಟ್ ಆಗಿ ಸಂಕಷ್ಟದಲ್ಲಿದೆ. ಇದರ ಜೊತೆಗೆ ಟೀಮ್ ಇಂಡಿಯಾಕ್ಕೆ ಗಾಯಗಳ ಸಮಸ್ಯೆ ಕಾಡುತ್ತಿದ್ದು ರಿಷಭ್ ಪಂತ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಈ ಸ್ಥಾನಕ್ಕೆ ಯುವ ವಿಕೆಟ್ ಕೀಪರ್ ಇಶನ್ ಕಿಶನ್ ಅವರನ್ನ ಆಯ್ಕೆ ಮಾಡಲಾಗಿತ್ತು. ಆದರೆ ಇದನ್ನು ಯಂಗ್ ವಿಕೆಟ್ ಕೀಪರ್ ನಿರಾಕರಣೆ ಮಾಡಿದ್ದಾರೆ.
ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಕಾಲಿನ ಗಾಯಕ್ಕೆ ಒಳಗಾಗಿದ್ದರು. ಚೆಂಡು ಬಲವಾಗಿ ಬಡಿದಿದ್ದರಿಂದ ಪಂತ್ ಕಾಲಿನಿಂದ ರಕ್ತ ಚಿಮ್ಮಿತ್ತು. ಹೀಗಾಗಿ ಅವರು ಸರಣಿಯಿಂದ ಹೊರಗುಳಿದಿದ್ದಾರೆ. ಈ ಸ್ಥಾನಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಮೊದಲ ಆಯ್ಕೆಯಾಗಿ ಯುವ ವಿಕೆಟ್ ಕೀಪರ್ ಇಶನ್ ಕಿಶನ್ ಅವರನ್ನು ಆಯ್ಕೆ ಮಾಡಿತ್ತು. ಇಂಗ್ಲೆಂಡ್ಗೆ ಬರಲು ಆಗುವುದಿಲ್ಲ ಎಂದು ಇಶನ್ ಕಿಶನ್ ಕಾರಣ ನೀಡಿ ಆಫರ್ ರಿಜೆಕ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕೊಹ್ಲಿಯಂತೆ ಕಠಿಣ ಡಯಟ್.. ಕೇವಲ 2 ತಿಂಗಳು, 17 Kg ತೂಕ ಇಳಿಸಿದ ಸರ್ಫರಾಜ್ ಖಾನ್!
ಟೀಮ್ ಇಂಡಿಯಾದಲ್ಲಿ ಪಂತ್ಗೆ ಗಾಯವಾದ ಕಾರಣ ಬಿಸಿಸಿಐ ತನ್ನ ಮೊದಲ ಆಯ್ಕೆಯಾಗಿ ವಿಕೆಟ್ ಕೀಪರ್ ಇಶನ್ ಕಿಶನ್ರನ್ನ ಆಯ್ಕೆ ಮಾಡಿ ಸಂಪರ್ಕ ಮಾಡಿತ್ತು. ಈ ವೇಳೆ ಎಡಗಾಲಿನ ಪಾದದ ಗಾಯ (Ankle Injury) ದಿಂದ ಬಳಲುತ್ತಿದ್ದೇನೆ. ಹೀಗಾಗಿ ಬ್ರಿಟನ್ಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಫೈನಲ್ ಟೆಸ್ಟ್ನಲ್ಲಿ ಆಡುವ ಅವಕಾಶವನ್ನ ಇಶನ್ ಕಿಶನ್ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಭಾರತದ ಯುವ ವಿಕೆಟ್ ಕೀಪರ್ ಆಗಿರುವ ಇಶನ್ ಕಿಶನ್ ಅವರು ಸ್ಕೂಟಿಯಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಇಶನ್ ಅವರ ಕಾಲಿನ ಪಾದಕ್ಕೆ ಗಂಭೀರವಾದ ಗಾಯವಾಗಿದೆ. ಈ ಗಾಯಕ್ಕೆ ವೈದ್ಯರು ಹೊಲಿಗೆ ಕೂಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಮೈದಾನದಲ್ಲಿ ಆಡಲು ಆಗುವುದಿಲ್ಲ. ಹೀಗಾಗಿಯೇ ಮುಂದಿನ ಪಂದ್ಯಕ್ಕೆ ಬರಲು ಆಗುವುದಿಲ್ಲ ಎಂದು ಇಶನ್ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ