newsfirstkannada.com

KL ರಾಹುಲ್​ ಸೇರಿ ಈ ಪ್ಲೇಯರ್ಸ್​ ಓವರ್​ಟೇಕ್​ ಮಾಡ್ತಾರಾ.. ಕಿಶನ್ ಮುಂದಿರೋ 4 ಚಾಲೆಂಜ್​ಗಳೇನು? ​

Share :

Published August 5, 2024 at 2:20pm

    ಟೀಮ್ ಇಂಡಿಯಾ ಕಮ್​​ಬ್ಯಾಕ್​ ಹಾದಿ ಕಿಶನ್​ಗೆ ಸುಲಭನಾ..?

    ಹೆಜ್ಜೆ ಹೆಜ್ಜೆಗೂ ಸವಾಲಿನ ಚಕ್ರವ್ಯೂಹ, ಹೇಗೆದೆ ಬಿಗ್ ಚಾಲೆಂಜ್?

    ಬಿಸಿಸಿಐ ಆಜ್ಞೆಗೆ ತಲೆ ಬಾಗಿರುವ ಭಾರತದ ಯಂಗ್ ಬ್ಯಾಟರ್

ಯಂಗ್​​​​ ಕ್ರಿಕೆಟರ್​​ ಇಶನ್ ಕಿಶನ್​ಗೆ ಕೆಟ್ಟ ಮೇಲೆ ಕೊನೆಗೂ ಬುದ್ಧಿ ಬಂದಂತಿದೆ. ಬಿಸಿಸಿಐ ಮಾತನ್ನೇ ದಿಕ್ಕರಿಸಿದ್ದ ಕಿಶನ್​​, ವಿಧಿಯಿಲ್ಲದೇ ಇದೀಗ ಅದೇ ಬಿಗ್​​ಬಾಸ್​​ಗಳಿಗೆ ಬೆಂಡ್​ ಆಗಿದ್ದಾರೆ. ಬಿಸಿಸಿಐ ಆಜ್ಞೆಯಂತೆ ಡೊಮೆಸ್ಟಿಕ್​​​​ ಕ್ರಿಕೆಟ್​ ಆಡಲು ಸಜ್ಜಾಗಿದ್ದಾರೆ. ಆ ಮೂಲಕ ಟೀಮ್ ಇಂಡಿಯಾಗೆ ಎಂಟ್ರಿಕೊಡುವ ತವಕದಲ್ಲಿದ್ದಾರೆ. ಆದ್ರೆ ಅದು ಕಲ್ಲು ಮುಳ್ಳಿನ ಹಾದಿಯಾಗಿದೆ. ಹೆಜ್ಜೆ ಹೆಜ್ಜೆಗೂ ಸವಾಲಿನ ಚಕ್ರವ್ಯೂಹವಿದೆ.

ಕೆಟ್ಟ ಮೇಲೆ ಬುದ್ಧಿ ಕಲಿತ್ರಾ ಜಾರ್ಖಂಡ್​ ಪುತ್ತರ್​​​..?

ಸ್ವಯಂಕೃತ ಅಪರಾಧದಿಂದ ಯಂಗ್​​​ಗನ್ ಕಿಶನ್​​​ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ಸೆಂಟರ್ ಕಾಂಟ್ರ್ಯಾಕ್ಟ್​ ಲಿಸ್ಟ್​​​​​​​​ನಿಂದಲೂ ಔಟ್​ ಆಗಿದ್ದಾರೆ. ಎಲ್ಲೂ ಸಲ್ಲದ ಕಿಶನ್​ ಕೆಟ್ಟ ಮೇಲೆ ಬುದ್ಧಿ ಕಲಿತಿದ್ದಾರೆ. ಅಂದು ಯಾವ ಬಿಸಿಸಿಐ ಮಾತನ್ನ ತಿರಸ್ಕರಿಸಿ ಟೀಮ್ ಇಂಡಿಯಾದಿಂದ ಹೊರಬಿದ್ರೋ, ಅದೇ ಕಿಶನ್ ಇದೀಗ ಬಿಗ್​ಬಾಸ್​ಗಳ ಮಾತಿಗೆ ಬೆಲೆ ಕೊಟ್ಟು ಡೊಮೆಸ್ಟಿಕ್ ಕ್ರಿಕೆಟ್​​ ಆಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಕೇರಳದ ಕಣ್ಣೀರು.. ಮೃತದೇಹದ ಜೊತೆ ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ, ಚಿನ್ನಾಭರಣ ಪತ್ತೆ; ಆಮೇಲೇನಾಯ್ತು?

ಯಂಗ್ ಪ್ಲೇಯರ್​​ ಮುಂದಿವೆ ಸಾಲು ಸಾಲು ಚಾಲೆಂಜ್​ಗಳು

2024-25ನೇ ಸಾಲಿನ ಡೊಮೆಸ್ಟಿಕ್ ಸೀಸನ್​​ ಸೆಪ್ಟೆಂಬರ್​​ನಿಂದ ಅರಂಭಗೊಳ್ಳಲಿದೆ. ಅಕ್ಟೊಬರ್​​ 11 ರಿಂದ ಶುರುವಾಗಲಿರೋ ರಣಜಿ ಟ್ರೋಫಿಯಲ್ಲಿ ತಾವು ಜಾರ್ಖಂಡ್​ ಪರ ಆಡುವುದಾಗಿ ಹೇಳಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಅಬ್ಬರಿಸಿ ಮತ್ತೆ ಭಾರತ ತಂಡಕ್ಕೆ ಎಂಟ್ರಿ ಕೊಡುವ ಇರಾದೆಯಲ್ಲಿದ್ದಾರೆ. ಕಿಶನ್​ ಏನೋ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹಂಬಲಿಸ್ತಿದ್ದಾರೆ. ಆದರೆ ಕಮ್​​ಬ್ಯಾಕ್ ಹಾದಿ​​​ ಸುಲಭವಿಲ್ಲ. ಹೆಜ್ಜೆ ಹೆಜ್ಜೆಗೂ ಹೊಸ ಸವಾಲುಗಳಿವೆ.

ಚಾಲೆಂಜ್​​​ ನಂ.1- ಫಾರ್ಮ್ ಕಂಡುಕೊಳ್ಳುವಿಕೆ

ಕಿಶನ್​ ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ದೂರ ಉಳಿದು 9 ತಿಂಗಳಾಗಿದೆ. ಸುದೀರ್ಘ ಕಾಲ ಕ್ರಿಕೆಟ್ ಆಡದ ಲೆಫ್ಟಿ ಬ್ಯಾಟರ್ ಡೊಮೆಸ್ಟಿಕ್​​​ನಲ್ಲಿ ಫಾರ್ಮ್​ ಕಂಡುಕೊಳ್ಳುವುದು ಬಹುಮುಖ್ಯ. ರಣಜಿ, ವಿಜಯ್​ ಹಜಾರೆ ಹಾಗೂ ಸಯ್ಯದ್​​ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರನ್​ ಗಳಿಸಿ ಆಯ್ಕೆಗಾರರನ್ನ ಇಂಪ್ರೆಸ್ ಮಾಡಬೇಕಿದೆ.

ಚಾಲೆಂಜ್​​​ ನಂ.2- ಫಿಟ್ನೆಸ್​ ಪ್ರೂವ್​ ಮಾಡುವುದು

ಟೀಮ್ ಇಂಡಿಯಾಗೆ ಕಮ್​ಬ್ಯಾಕ್​​​​ಗೆ ಫಾರ್ಮ್​ ಒಂದೇ ಸಾಕಾಗಲ್ಲ. ಫಿಟ್ನೆಸ್​ ಕೂಡ ಪ್ರೂವ್​ ಮಾಡುವ ಅಗತ್ಯವಿದೆ. ನೂತನ ಹೆಡ್​ಕೋಚ್​ ಗಂಭೀರ್​​ ಫಿಟ್ನೆಸ್​​​​ಗೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಫಾರ್ಮ್​ ಇದ್ದೂ ಫಿಟ್​​ ಇಲ್ಲವಾದ್ರೆ ತಂಡದಲ್ಲಿ ಜಾಗವಿಲ್ಲ. ಹೀಗಾಗಿ ಕಿಶನ್​ ಎರಡನ್ನೂ ಕಾಯ್ದುಕೊಳ್ಳಬೇಕಿದೆ.

ಚಾಲೆಂಜ್​​​ ನಂ.3- ನಡವಳಿಕೆಯಲ್ಲಿ ಬದಲಾವಣೆ

ಕಿಶನ್​ ತಂಡದಿಂದ ಹೊರಬೀಳಲು ಅವರ ನಡವಳಿಕೆ ಕಾರಣವಾಗಿತ್ತು. ಕಳೆದ ವರ್ಷ ದಕ್ಷಿಣ ಪ್ರವಾಸದ ನಡುವೆ ತಂಡ ತೊರೆದು ದೇಶಕ್ಕೆ ವಾಪಸಾಗಿದ್ರು. ಬಳಿಕ ಬಿಸಿಸಿಐ ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಸೂಚಿಸಿದ್ರು ಕ್ಯಾರೇ ಅಂದಿರ್ಲಿಲ್ಲ. ಈ ನಡವಳಿಕೆ ಬಿಸಿಸಿಐ ಕಣ್ಣು ಕೆಂಪಾಗಿಸಿತ್ತು. ಇನ್ಮುಂದೆ ಇಂತಹ ನಡವಳಿಕೆ ರಿಪೀಟ್ ಆಗದಂತೆ ಎಚ್ಚರವಹಿಸಬೇಕಿದೆ.

ಇದನ್ನೂ ಓದಿ: ಕೊನೆಗೂ ಟೀಮ್ ಇಂಡಿಯಾದ ವೀಕ್​​ನೆಸ್​ ಬಟಾ ಬಯಲು.. ರೋಹಿತ್ ಪಡೆಗೆ ಕಾಡ್ತಿದೆ ಆ ಒಂದು ಸಮಸ್ಯೆ! 

ಚಾಲೆಂಜ್​​​ ನಂ.4- ಸ್ಥಾನಕ್ಕಾಗಿ ತೀವ್ರ ಪೈಪೋಟಿ

ಕಿಶನ್​​ ಡೊಮೆಸ್ಟಿಕ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್​ ನೀಡಿದ್ರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರಬಲ ಪೈಪೋಟಿ ಎದುರಿಸಬೇಕಿದೆ. ಈಗಾಗ್ಲೇ ತಂಡದಲ್ಲಿ ಸಿಕ್ಕಾಪಟ್ಟೆ ಸ್ಫರ್ದೆ ಇದೆ. ವಿಕೆಟ್ ಕೀಪರ್​ಗಳಾಗಿ ರಿಷಬ್​ ಪಂತ್​​​, ಕೆಎಲ್ ರಾಹುಲ್​ ಹಾಗೂ ಸಂಜು ಸ್ಯಾಮ್ಸನ್​​​ ತಂಡದಲ್ಲಿದ್ದಾರೆ. ಇವರನ್ನ ಓವರ್​​ಟೇಕ್​ ಮಾಡಿ ಚಾನ್ಸ್ ಗಿಟ್ಟಿಸಿಕೊಳ್ಳುವುದು ಸುಲಭವಿಲ್ಲ. ಕಿಶನ್​ರಿಂದ EXTRAORDINARY ಪರ್ಫಾಮೆನ್ಸ್​ ಮೂಡಿ ಬಂದರಷ್ಟೇ ಅದು ಸಾಧ್ಯ.

ಇದನ್ನೂ ಓದಿ: ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ

ಕಮ್​ಬ್ಯಾಕ್​ಗೆ ಪಣತೊಟ್ಟಿರೋ ರೆಬೆಲ್​ ಇಶನ್​ ಕಿಶನ್​ ಮುಂದೆ ಸಾಲು ಸಾಲು ಸವಾಲಿದೆ. ಆ ಚಾಲೆಂಜಸ್​ಗಳನ್ನ ಯಶಸ್ವಿಯಾಗಿ ಮೆಟ್ಟಿ ನಿಲ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​ ಸೇರಿ ಈ ಪ್ಲೇಯರ್ಸ್​ ಓವರ್​ಟೇಕ್​ ಮಾಡ್ತಾರಾ.. ಕಿಶನ್ ಮುಂದಿರೋ 4 ಚಾಲೆಂಜ್​ಗಳೇನು? ​

https://newsfirstlive.com/wp-content/uploads/2024/08/KL_RAHUL_ISHAN.jpg

Load More