ಕೆಟ್ಟ ಮೇಲೆ ಬುದ್ಧಿ ಕಲಿತ ಸ್ಟಾರ್; ಅಂದು ಬಿಸಿಸಿಐ ಮಾತಿಗೆ ಕಿಮ್ಮತ್ತು ಕೊಡದವ ಈಗ ಬದಲಾದ!

author-image
Ganesh
Updated On
ಕಿಶನ್​​​ಗೆ ವಾರ್ನ್​ ಮಾಡಿ ಕೃಪೆ ತೋರಿದ ಜಯ್ ಶಾ.. ಯಾಕೆ ಹೀಗೆ ಮಾಡಿತು ಬಿಸಿಸಿಐ..?
Advertisment
  • ರಣಜಿ ಟ್ರೋಫಿ ಆಡಲು ನೋ ಎಂದಿದ್ದ ಆರಂಭಿಕ ಆಟಗಾರ
  • ಬಿಸಿಸಿಐ ಎಚ್ಚರಿಕೆ ನೀಡಿದ್ದರೂ ಕ್ಯಾರೇ ಎಂದಿರಲಿಲ್ಲ ಸ್ಟಾರ್
  • ಟೀಂ ಇಂಡಿಯಾದಲ್ಲಿ ಸ್ಥಾನ ಕಳ್ಕೊಂಡ ಬೆನ್ನಲ್ಲೇ ಎಚ್ಚೆತ್ತ

ಕಳೆದ ವರ್ಷ ಬಿಸಿಸಿಐ ಬಾಸ್​ಗಳ ಮಾತಿಗೆ ಕ್ಯಾರೇ ಅನ್ನದೇ ರಣಜಿ ಟ್ರೋಫಿ ಟೂರ್ನಿಯನ್ನಾಡಲು ನೋ ಎಂದಿದ್ದ ಇಶಾನ್​ ಕಿಶನ್​ ಕೆಟ್ಟ ಮೇಲೆ ಬುದ್ಧಿ ಕಲಿತಂತಿದೆ.

ಡೊಮೆಸ್ಟಿಕ್​ ಕ್ರಿಕೆಟ್​ ಆಡಲ್ಲ ಎಂದು ಮೊಂಡುತನ ಸಾಧಿಸಿದ್ದ ಇಶಾನ್​ ಕಿಶನ್​, ಟೀಮ್​ ಇಂಡಿಯಾದಿಂದ ದೂರವಾಗಿದ್ರು. ಡೊಮೆಸ್ಟಿಕ್​ ಕ್ರಿಕೆಟ್​ ಆಡಿದ್ರೆ ಮಾತ್ರ, ಸ್ಥಾನ ಸಿಗೋದು ಎಂದು ಬಿಸಿಸಿಐ ಎಚ್ಚರಿಕೆ ನೀಡಿತ್ತು. ಇದೀಗ ಕೆಟ್ಟ ಮೇಲೆ ಬುದ್ಧಿ ಕಲಿತಿರೋ ಕಿಶನ್​ ಡೊಮೆಸ್ಟಿಕ್​ ಕ್ರಿಕೆಟ್​ಗೆ ಮರಳಿದ್ದು ದುಲೀಪ್​ ಟ್ರೋಫಿಯಲ್ಲಿ ಆಡಲಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ಗಳ ಜೊತೆ ಸಭೆ ನಡೆಸಿದ್ದ ಕೋಚ್​ ಗೌತಮ್​​ ಗಂಭೀರ್​​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಮುಂಬರೋ ಟೆಸ್ಟ್​ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ರು. ಸಿದ್ಧತೆಯ ಭಾಗವಾಗಿ ದುಲೀಪ್​ ಟ್ರೋಫಿಯಲ್ಲಿ ಸ್ಟಾರ್​ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ದರು. ಸೆಪ್ಟೆಂಬರ್​ 5ರಿಂದ ಆರಂಭವಾಗೋ ಟೂರ್ನಿಗೆ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿ ಟೀಮ್​ ಅನೌನ್ಸ್​ ಮಾಡಿದೆ.

ಇದನ್ನೂ ಓದಿ:ನೀರಜ್ ಬಗ್ಗೆ ಕೇಳ್ತಿದ್ದಂತೆ ನಾಚಿಕೊಂಡ ಮನು ಭಾಕರ್.. ಪ್ರೀತಿ, ಮದುವೆ ಬಗ್ಗೆ ಮೌನ ಮುರಿದ ಅಥ್ಲೀಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment