Advertisment

6,6,6,6,6,6; ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಇಶಾನ್​ ಕಿಶನ್​

author-image
Ganesh Nachikethu
Updated On
ಕಿಶನ್, ಹೆಡ್​ ಮಿಂಚಿನ ಬ್ಯಾಟಿಂಗ್; ಹೈದ್ರಾಬಾದ್ ಬಿಗ್ ಟಾರ್ಗೆಟ್ ಮುಂದೆ ತಲೆ ಬಾಗಿದ ರಾಜಸ್ಥಾನ್​
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 2ನೇ ಪಂದ್ಯ!
  • ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್ ಮುಖಾಮುಖಿ
  • ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ 287 ರನ್​ಗಳ ಬಿಗ್​ ಟಾರ್ಗೆಟ್

ಇಂದು ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 2ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳು ಮುಖಾಮುಖಿ ಆಗಿವೆ.

Advertisment

ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ಟೀಮ್​ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ ಬರೋಬ್ಬರಿ 286 ರನ್​ ಕಲೆ ಹಾಕಿದೆ. ಈ ಮೂಲಕ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ 287 ರನ್​ಗಳ ಬಿಗ್​ ಟಾರ್ಗೆಟ್​ ನೀಡಿದೆ.

ಇಶಾನ್​ ಕಿಶನ್​ ಅಬ್ಬರ

ಸನ್​ರೈಸರ್ಸ್​ ಹೈದರಾಬಾದ್​ ಪರ ಓಪನಿಂಗ್​ ಬ್ಯಾಟರ್​ ಅಭಿಷೇಕ್​ ಶರ್ಮಾ ಔಟ್​ ಆದ ನಂತರ ಸ್ಟಾರ್​ ಬ್ಯಾಟರ್​​ ಇಶಾನ್​ ಕಿಶನ್​​ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಒನ್​ ಡೌನ್​​ನಲ್ಲಿ ಕಣಕ್ಕಿಳಿದ ಇಶಾನ್​ ಕಿಶನ್​​ ಅವರು ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ಅಬ್ಬರಿಸಿದರು.

ಕೊನೆಯವರೆಗೂ ಕ್ರೀಸ್​​ನಲ್ಲೇ ನಿಂತು ಬ್ಯಾಟ್​ ಬೀಸಿದ ಇಶಾನ್​ ಕಿಶನ್​ ಅವರು ಸ್ಫೋಟಕ ಶತಕ ಸಿಡಿಸಿದರು. ತಾನು ಎದುರಿಸಿದ 47 ಬಾಲ್​ನಲ್ಲಿ 107 ರನ್​ ಚಚ್ಚಿದ್ರು. ಭರ್ಜರಿ 6 ಸಿಕ್ಸರ್​, 11 ಫೋರ್​ ಸಮೇತ ಶತಕ ದಾಖಲಿಸಿದರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 225ಕ್ಕೂ ಹೆಚ್ಚಿತ್ತು.

Advertisment

ಇದನ್ನೂ ಓದಿ:RCB ನಯಾ ಶೇರ್ ಯಾರು.. ಕೊಹ್ಲಿ ಅಲ್ಲ, ಬೆಂಗಳೂರು ಫ್ರಾಂಚೈಸಿ ಸೂಚಿಸಿದ ಹೆಸರು ಯಾರದ್ದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment