/newsfirstlive-kannada/media/post_attachments/wp-content/uploads/2023/12/ISHAN_KISHAN_SMILE.jpg)
ಐಪಿಎಲ್ 2025ರ ಮೆಗಾ ಆಕ್ಷನ್ ನ. 24 ಹಾಗೂ 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ಈ ಮಹತ್ವದ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಿಗೆ ಬೇಕಾದ ಆಟಗಾರರನ್ನ ಖರೀದಿ ಮಾಡುತ್ತಿವೆ. ತಮ್ಮ ಟೀಮ್ ಅನ್ನು ಬಲಪಡಿಸಲು ಬಲಿಷ್ಠ ಪ್ಲೇಯರ್ಗಳ ಮೇಲೆ ಬಿಡ್ ಮಾಡಲಾಗುತ್ತಿದೆ. ಅದರಂತೆ ಈ ಹರಾಜಿನಲ್ಲಿ ಇಶನ್ ಕಿಶನ್ ಕೂಡ ಉತ್ತಮ ಮಟ್ಟದ ಹಣವನ್ನು ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ಇಶನ್ ಕಿಶನ್ ಅವರು ಈ ಹಿಂದೆ ಮುಂಬೈ ಟೀಮ್ನಲ್ಲಿದ್ದರು. ಆದರೆ ಈ ಬಾರಿ ಅವರನ್ನು ಕೈ ಬಿಡಲಾಗಿದ್ದು ಹರಾಜಿನಲ್ಲಿ ಇಶನ್ ಕಿಶನ್ ಅವರ ಹೆಸರನ್ನು ಕರೆಯಲಾಗಿತ್ತು. ಅದರಂತೆ ಒಳ್ಳೆಯ ದುಡ್ಡಿಗೆ ಕಿಶನ್ ಮಾರಾಟ ಆಗಿದ್ದಾರೆ. ಮೊದಲಿಂದಲೂ ಹೆಸರನ್ನು ನಿರಂತವಾಗಿ ಕರೆಯಲಾಯಿತು. ಡೆಲ್ಲಿ ಹಾಗೂ ಪಂಜಾಬ್ ನಡುವೆ ಕಿಶನ್ಗಾಗಿ ಒಳ್ಳೆಯ ಬಿಡ್ ನಡೆದಿತ್ತು. ಮೊದಲು ಬಿಡ್ ಮಾಡಿದ ಮುಂಬೈ ಫ್ರಾಂಚೈಸಿ ಆ ಮೇಲೆ ಇಶನ್ ಹೆಸರನ್ನೇ ಮರೆತು ಹೋಯಿತು.
ಇದನ್ನೂ ಓದಿ:IPL Auction; ಕೆ.ಎಲ್ ರಾಹುಲ್ಗೆ ಕೈ ಕೊಟ್ಟ RCB; ವೆಂಕಟೇಶ್ ಅಯ್ಯರ್ಗೆ 23 ಕೋಟಿ ಬಿಡ್ ಮಾಡಿದ್ದೇಕೆ?
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 10 ಕೋಟಿಗಳನ್ನು ಕರೆದಿತ್ತು. ಇದೇ ವೇಳೆ ಹೈದ್ರಾಬಾದ್ ಟೀಮ್ 10.25 ಕೋಟಿ ರೂಪಾಯಿಗಳನ್ನ ಕರೆಯಿತು. ನಂತರ ಹರಾಜು ಕರೆಯಲು ಫ್ರಾಂಚೈಸಿಗಳು ಆಲೋಚನೆ ಮಾಡತೊಡಗಿದವು. ಪಂಜಾಬ್ ಮತ್ತೆ ತಗ್ಗಲಿಲ್ಲ. 11 ಕೋಟಿಗಳನ್ನ ಕರೆಯಿತು. ಆದರೆ ಕೊನೆಯದಾಗಿ ಹೈದ್ರಾಬಾದ್ 11.25 ಕೋಟಿ ರೂಪಾಯಿ ನೀಡಿ ಇಶನ್ ಕಿಶನ್ ಅವರನ್ನು ಕೊಂಡುಕೊಳ್ಳಿತ್ತು.
ಐಪಿಎಲ್ನಲ್ಲಿ 105 ಮ್ಯಾಚ್ಗಳನ್ನು ಆಡಿರುವ ಇಶನ್ ಕಿಶನ್ ಒಟ್ಟು 2644 ರನ್ಗಳನ್ನು ಗಳಿಸಿದ್ದಾರೆ. ಶತಕ ಸಿಡಿಸಿಲ್ಲವಾದರೂ 16 ಬಾರಿ ಹಾಫ್ಸೆಂಚುರಿಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಮುಂಬೈ ಟೀಮ್ನಲ್ಲಿ ಇಶನ್ ಕಿಶನ್ ಈ ಸಲ ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಹರಾಜಿನಲ್ಲಿ 11.25 ಕೋಟಿ ರೂಪಾಯಿಗೆ ಹೈದ್ರಾಬಾದ್ ಖರೀದಿ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ