ಹಲವು ಅನುಮಾನಗಳಿಗೆ ಕಾರಣವಾಗಿದೆ ಇಶಾನ್ ಕಿಶಾನ್ ನಡೆ
ದುಲೀಪ್ ಟ್ರೋಫಿಯಿಂದ ಇಶಾನ್ ದೂರ ಸರಿದಿರೋದ್ಯಾಕೆ?
ಆವೇಶದಲ್ಲಿ ಇಂಥಾ ನಿರ್ಣಯ ಕೈಗೊಂಡ್ರಾ ಇಶಾನ್ ಕಿಶಾನ್
ಇಶಾನ್ ಕಿಶನ್, ಟೀಮ್ ಇಂಡಿಯಾದ ಎಕ್ಸ್ಪ್ಲೋರಿವ್ ಬ್ಯಾಟರ್. 24 ವರ್ಷದ ಈ ಯಂಗ್ ಮಿಸೈಲ್ ಮುಗಿಬಿದ್ರೆ, ಎದುರಾಳಿ ನಿಜಕ್ಕೂ ಖಲ್ಲಾಸ್ ಆಗ್ತಾನೆ. ವಿಕೆಟ್ ಹಿಂದೆಯೂ ಛಾಪು ಮೂಡಿಸಿರೋ ಈ ಜಾರ್ಖಂಡ್ ಪ್ರತಿಭೆ, ಏಕದಿನ ಕ್ರಿಕೆಟ್ನಲ್ಲಿ ಡಬಲ್ ಸೆಂಚೂರಿ ಸ್ಟಾರ್. ಇನ್ಫ್ಯಾಕ್ಟ್ ಟಿ20 ಫಾರ್ಮೆಟ್ನಲ್ಲಿ ಮೋಸ್ಟ್ ಡಿಸ್ಟ್ರಕ್ಟಿವ್ ಬ್ಯಾಟರ್ ಆಗಿರೋ ಇಶಾನ್, ಟೆಸ್ಟ್ ಕ್ರಿಕೆಟ್ನಲ್ಲಿ ಚಾಫು ಮೂಡಿಸೋಕೆ ರೆಡಿಯಾಗಿದ್ದಾರೆ. ಆದರೀಗ ಇಶಾನ್ರ ಒಂದು ನಡೆ ಕೆಲ ಪ್ರಶ್ನೆಗಳ ಜೊತೆ ಜೊತೆಗೆ ಹಲವು ಅನುಮಾನಗಳಿಗೆ ಕಾರಣವಾಗ್ತಿದೆ. ಅಂದಹಾಗೆಯೇ ಆ ನಡೆಯೇ ದುಲೀಪ್ ಟ್ರೋಫಿಯಿಂದ ಇಶಾನ್ ದೂರ ಸರಿದಿರೋದು.
ಹೌದು! ಇದೇ ಜೂನ್ 28ರಿಂದ ದುಲೀಪ್ ಟ್ರೋಫಿ ಆರಂಭವಾಗಲಿದ್ದು, East Zone ತಂಡದ ಪರ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ. ಆದ್ರೆ, ರೆಡ್ಬಾಲ್ನ ಕಾಂಪಿಟೇಷನ್ನಿಂದಲೇ ಇಶಾನ್ ದೂರ ಸರಿದಿದ್ದಾರೆ. ಇಂಜುರಿ ಹೊರತಾಗಿಯೂ ಈ ಕಾಂಪಿಟೇಷನ್ನಿಂದ ದೂರ ಉಳಿದಿದ್ದಾರೆ. ಇದು ಯಾಕೆ ಎಂಬ ಚರ್ಚೆ ಈಗ ಕ್ರಿಕೆಟ್‌ನ ಪಡೆ ಸಾಲೆಯಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ.
WTC ಫೈನಲ್ನಲ್ಲಿ ಸ್ಥಾನ ಸಿಗದಕ್ಕೆ ಮುನಿಸಿಕೊಂಡ್ರಾ ಇಶಾನ್..?
ಇತ್ತಿಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೆ.ಎಸ್.ಭರತ್ ಜೊತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಇಶಾನ್, ಟೆಸ್ಟ್ ಫಾರ್ಮೆಟ್ನಲ್ಲಿ ಡೆಬ್ಯೂ ಮಾಡೋ ನಿರೀಕ್ಷೆಯಲ್ಲಿದ್ದರು. ಆದ್ರೆ, ಕೊನೆ ಕ್ಷಣದಲ್ಲಿ ಕೆ.ಎಸ್.ಭರತ್ಗೆ ಗ್ಲೌಸ್ ನೀಡಿತ್ತು. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಮೇಲೆ ಮುನಿಸಿಕೊಂಡೇ ಇಂಥದ್ದೊಂದು ತೀರ್ಮಾನಕ್ಕೆ ಮುಂದಾದ್ರಾ ಎಂಬ ಅನುಮಾನ ಹುಟ್ಟಿಹಾಕಿದೆ.
ಆವೇಶದ ನಿರ್ಣಯ ಕೈಗೊಂಡರಾ ಇಶಾನ್ ಕಿಶನ್..?
ಸದ್ಯ WTC ಫೈನಲ್ ಮುಗಿಸಿರೋ ಟೀಮ್ ಇಂಡಿಯಾ, ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದೆ. ಈ ವೇಳೆ 2 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿರೋ ಟೀಮ್ ಇಂಡಿಯಾಗೆ ಪಂತ್, ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಕೆ.ಎಸ್.ಭರತ್ ಹಾಗೂ ಇಶಾನ್ ಕಿಶನ್ ಮೊದಲೆರೆಡು ಆಯ್ಕೆಯಾಗಿದ್ದಾರೆ. ವಿಂಡೀಸ್ ಟೂರ್ಗೂ ಮುನ್ನ ರೆಡ್ಬಾಲ್ ಟೂರ್ನಿಯಲ್ಲಿ ಆಡಿ ಪ್ರಿಪೇರ್ ಆಗಬೇಕಿರೋ ಇಶಾನ್, ಈಗ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದು ನಿಜಕ್ಕೂ ಆವೇಶದ ನಿರ್ಣಯವೇ ಆಗಿದೆ.
ಇಶಾನ್ ನಡೆ ಕೆ.ಎಸ್.ಭರತ್ಗೆ ಮತ್ತಷ್ಟು ಲಾಭ..?
ಪಂತ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾದ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಕೆ.ಎಸ್.ಭರತ್ ಆಗಿದ್ದಾರೆ ನಿಜ. ಆದ್ರೆ, ಸಿಕ್ಕ ಅವಕಾಶ ಎನ್ಕ್ಯಾಶ್ ಮಾಡಿಕೊಳ್ಳುವಲ್ಲಿ ಭರತ್ ವಿಫಲರಾಗಿದ್ದಾರೆ. ಇಂಥಹ ವೇಳೆ ಇಶಾನ್ ದುಲೀಪ್ ಟ್ರೋಫಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಎಲ್ಲಾ ಚಾನ್ಸ್ ಇತ್ತು. ಆದ್ರೆ, ಏಷ್ಯನ್ ಕಂಡೀಷನ್ಸ್ನಲ್ಲಿ ಆಡಿರೋ ಅನುಭವ ಹೊಂದಿರೋ ಕೆ.ಎಸ್.ಭರತ್ ಮತ್ತೆ ಸ್ಥಾನವನ್ನ ರಿಟೈನ್ ಮಾಡಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.
ರೆಡ್ ಬಾಲ್ ಕ್ರಿಕೆಟ್ ಮೇಲೆ ಇಶಾನ್ಗೆ ಇಲ್ವಾ ಇಂಟ್ರೆಸ್ಟ್..?
ಸಹಜವಾಗೇ ಈ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಕಾಡ್ತಿದೆ. ಈಗಾಗಲೇ ವೈಟ್ಬಾಲ್ ಕ್ರಿಕೆಟ್‌ನ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಇಶಾನ್, ಏಕದಿನ ಹಾಗೂ ಟಿ20 ಫಾರ್ಮೆಟ್ನಲ್ಲಿ ಅಟ್ಯಾಕಿಂಗ್ ಅಪ್ರೋಚ್ ಆಫ್ ಬ್ಯಾಟಿಂಗ್ ಶೈಲಿಯಿಂದ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ.! ಕಳೆದ ರಣಜಿ ಟ್ರೋಫಿ ವೇಳೆಯೂ ಟೀಮ್ ಇಂಡಿಯಾ ಜೊತೆಯೇ ಟ್ರಾವೆಲ್ ಮಾಡಿದ್ದ ಇಶಾನ್, ಸರ್ವೀಸಸ್ ಎದುರು ಆಡಿದ್ದ ಒಂದೇ ಒಂದು ರಣಜಿ ಪಂದ್ಯದಲ್ಲೂ ವಿಫಲರಾಗಿದ್ದರು. ಆದ್ರೆ, ಈ ಬೆನ್ನಲ್ಲೇ ಬಾಂಗ್ಲಾ ಪ್ರವಾಸದ ಏಕದಿನ ಪಂದ್ಯದಲ್ಲಿ ಡಬಲ್ ಸೆಂಚೂರಿ ಸಿಡಿಸಿದ್ದ ಇಶಾನ್, ಕೇವಲ ವೈಟ್ಬಾಲ್ನತ್ತಲೇ ದೃಷ್ಟಿ ನಟ್ಟಿದ್ದಾರಾ ಎಂಬ ಅನುಮಾನ ಮನೆ ಮಾಡಿದೆ.
ಒಟ್ನಲ್ಲಿ ರಿಯಲ್ ಕ್ರಿಕೆಟ್ ಅಂತಾನೇ ಕರೆಸಿಕೊಳ್ಳುವ ರೆಡ್ಬಾಲ್ ಕ್ರಿಕೆಟ್ನಿಂದ ಇಶಾನ್, ದೂರ ಸರಿಯುವ ನಿರ್ಧಾರ ಮುಂದಿನ ದಿನಗಳಲ್ಲಿ ಮುಳ್ಳಾದರೂ ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ