/newsfirstlive-kannada/media/post_attachments/wp-content/uploads/2025/03/Ishan_Kishan_TALK.jpg)
ತವರಿನ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ತಂಡದ ಯುವ ಬ್ಯಾಟರ್ ಇಶನ್ ಕಿಶನ್ ಅತ್ಯದ್ಭುತವಾದ ಸೆಂಚುರಿ ಸಿಡಿಸಿ, ಸಂಭ್ರಮಿಸಿದ್ದಾರೆ. ಇವರ ಈ ಶತಕದಿಂದಾಗಿ ಹೈದ್ರಾಬಾದ್ ಟೀಮ್ ತಮ್ಮ ಆರಂಭದ ಪಂದ್ಯದಲ್ಲಿ 2ನೇ ಅತ್ಯಧಿಕ ರನ್ (286/6) ಗಳಿಸಿ, ಇತಿಹಾಸ ನಿರ್ಮಿಸಿದೆ. ಭರ್ಜರಿ ಬ್ಯಾಟಿಂಗ್ ಮಾಡಿದ ಬಳಿಕ ಇಶನ್ ಕಿಶನ್ ಏನೆಂದು ಮಾತಾಡಿದ್ದಾರೆ ಎಂದರೆ..
ಪಂದ್ಯ ಮುಗಿದ ಮೇಲೆ ಮಾತನಾಡಿದ ಇಶನ್ ಕಿಶನ್ ಅವರು, ಕೆಲ ದಿನಗಳಿಂದ ನೋಡಿದರೆ ಇದು ಒಳ್ಳೆಯ ಫೀಲ್ ಆಗಿದೆ. ಕಳೆದ ಸೀಸನ್ ಅಲ್ಲೇ ಈ ಸಂತಸ ಪಡೆಯಲು ಬಯಸಿದ್ದೆ, ಆದರೆ ಈ ಬಾರಿ ಟೂರ್ನಿಯಲ್ಲಿ ಮೊದಲ ಶತಕ ಬಾರಿಸಿರುವುದು ನನಗೆ ಹ್ಯಾಪಿ. ಟೀಮ್ ನನ್ನ ಮೇಲೆ ನಂಬಿಕೆ ಇಟ್ಟಿದ್ದನ್ನ ಉಳಿಸಿಕೊಂಡೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಿಶನ್ ಸೆಂಚುರಿ ಸೆಲೆಬ್ರೆಷನ್.. ರಾಯಲ್ಸ್ಗೆ 286 ರನ್ಗಳ ಬಿಗ್ ಟಾರ್ಗೆಟ್ ಕೊಟ್ಟ ಹೈದ್ರಾಬಾದ್
ಹೈದ್ರಾಬಾದ್ ಕ್ಯಾಪ್ಟನ್ ತುಂಬಾ ಫ್ರೀಡಂ ಮತ್ತು ಕಾನ್ಫಿಡೆನ್ಸ್ ಕೊಟ್ಟಿದ್ದರು. ಅಲ್ಲದೇ ಹೈದ್ರಾಬಾದ್ ಮ್ಯಾನೇಜ್ಮೆಂಟ್ಗೆ ಧನ್ಯವಾದಗಳು. ಅಭಿಷೇಕ್ ಮತ್ತು ಹೆಡ್ ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಡಗೌಟ್‌ನಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಧೈರ್ಯ ಬಂರುತ್ತೆ. ನಾವೆಲ್ಲಾ ಯಾಕೆ ಹೀಗೆ ಬ್ಯಾಟಿಂಗ್ ಮಾಡಬಾರದು ಎಂದನಿಸಿತು. ಬೌಲರ್ಸ್ ಚೆನ್ನಾಗಿಯೇ ಬೌಲಿಂಗ್ ಮಾಡಿದರೂ, ಪಿಚ್ ಚೆನ್ನಾಗಿ ಗೊತ್ತಿದ್ದರಿಂದ ರಾಜಸ್ಥಾನ್ ಬೌಲರ್ಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್ ಮಾಡಲಾಗಿತ್ತು. ಬಾಲ್ ಪಾಯಿಂಟ್ ನೋಡಿ ಸಿಂಪಲ್ ಆಗಿಯೇ ಬ್ಯಾಟಿಂಗ್ ಮಾಡಿದೆ ಎಂದು ಇಶನ್ ಕಿಶನ್ ಹೇಳಿದ್ದಾರೆ.
ಇಶನ್ ಕಿಶನ್ ಅವರ ದಿನ ಚೆನ್ನಾಗಿತ್ತು ಅನಿಸುತ್ತದೆ. ಹೀಗಾಗಿಯೇ ಈ ವರ್ಷದ ಐಪಿಎಲ್ ಸೀಸನ್ ಅಲ್ಲಿ ಮೊಟ್ಟ ಮೊದಲು ಸೆಂಚುರಿ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಬೌಲರ್ಗಳ ಬೌಲಿಂಗ್ಗೆ ಹೇಗೆಂದರೆ ಹಾಗೇ ಬ್ಯಾಟ್ ಬೀಸಿದ ಕಿಶನ್ ಕೇವಲ 45 ಬಾಲ್ಗಳಲ್ಲಿ ಶತಕ ಸಿಡಿಸಿ, ಮೈದಾನದಲ್ಲಿ ಓಡಾಡಿ ಸಂಭ್ರಮಿಸಿದರು. 90 ರನ್ ಬಾರಿಸಿದಾಗಲೂ ಭಯ ಬೀಳದ ಕಿಶನ್ ಸಿಕ್ಸರ್ ಹೊಡೆದಿರುವುದು ಎಲ್ಲರೂ ಮೆಚ್ಚುವಂತಹದ್ದಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ