Advertisment

ಇಶಾನ್​ ಕಿಶನ್​​ಗೆ ಕ್ಯಾಪ್ಟನ್ಸಿ ಪಟ್ಟ.. ಟೀಮ್​ ಇಂಡಿಯಾಗೆ ಕಮ್​ಬ್ಯಾಕ್ ಮಾಡಲು​​​ ಸುವರ್ಣಾವಕಾಶ!

author-image
Ganesh Nachikethu
Updated On
ಕೇವಲ 2 ಬಾಲ್​ಗಳನ್ನ ಮಾತ್ರ ಆಡಿದ್ದ ಇಶನ್​ ಕಿಶನ್​ ಟೀಮ್​ ಇಂಡಿಯಾಕ್ಕೆ ಸೆಲೆಕ್ಟ್ ಆಗಿದ್ದೇ ಇಂಟ್ರೆಸ್ಟಿಂಗ್..!
Advertisment
  • ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದ ಇಶಾನ್​ ಕಿಶನ್​​..!
  • ರಾಹುಲ್​ ದ್ರಾವಿಡ್​ ಮಾತಿಗೆ ಮನ್ನಣೆ ನೀಡದೆ ಇದ್ದ ಯುವ ಬ್ಯಾಟರ್​​
  • ತಪ್ಪು ಅರಿತು ದೇಶೀಯ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿರೋ ಇಶಾನ್​​​

ಸೌತ್​ ಆಫ್ರಿಕಾ ಸೀರೀಸ್​ ನಂತರ ಟೀಮ್ ಇಂಡಿಯಾದ ಯುವ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಕ್ರಿಕೆಟ್​ನಿಂದ ಹೊರಗುಳಿದಿದ್ದರು. ಅಂದಿನ ಕೋಚ್​​ ಆಗಿದ್ದ ರಾಹುಲ್​ ದ್ರಾವಿಡ್​ ಅವರು ಇಶಾನ್‌ ಕಿಶನ್‌ಗೆ ದೇಶೀಯ ಟೂರ್ನಿಗಳಲ್ಲಿ ಆಡುವಂತೆ ಸಲಹೆ ನೀಡಿದ್ದರು. ಆದರೆ ಅಂದು ಇಶಾನ್​​ ಕಿಶನ್​ ದ್ರಾವಿಡ್​ ಅವರ ಸಲಹೆಯನ್ನು ಪರಿಗಣಿಸಿರಲಿಲ್ಲ. ಈಗ ತನ್ನ ತಪ್ಪನ್ನು ತಿದ್ದುಕೊಂಡಿರೋ ಇಶಾನ್​ ಮತ್ತೆ ದೇಶೀಯ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

Advertisment

ಟೀಮ್ ಇಂಡಿಯಾಗೆ ಮತ್ತೆ ಕಮ್​ಬ್ಯಾಕ್​ ಮಾಡಲು ದೇಶೀಯ ಟೂರ್ನಿ ಗತಿ ಅನ್ನೋದು ಇಶಾನ್​ ಕಿಶನ್​ಗೆ ಅರಿವಾಗಿದೆ. ಹಾಗಾಗಿ ಜಾರ್ಖಂಡ್ ತಂಡದ ಪರ ಬ್ಯಾಟ್ ಬೀಸಲು ಇಶಾನ್‌ ಕಿಶನ್‌ ರೆಡಿಯಾಗಿದ್ದಾರೆ. ಇಶಾನ್​ ಅವರೇ ಬುಚ್ಚಿ ಬಾಬು ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿ ಆಗಸ್ಟ್​​ 15ನೇ ತಾರೀಕಿನಿಂದ ಶುರುವಾಗಲಿದೆ.

ಕ್ಯಾಪ್ಟನ್ ಆಗಿ ಜಾರ್ಖಂಡ್ ತಂಡವನ್ನು ಮುನ್ನಡೆಸಲಿರೋ ಇಶಾನ್​​!

ಇಶಾನ್‌ ಕಿಶನ್‌ ಅಂಡರ್‌ 19 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಜತೆಗೆ ತವರು ತಂಡವಾದ ಜಾರ್ಖಂಡ್​ ಟೀಮ್​​ ಕ್ಯಾಪ್ಟನ್​ ಕೂಡ ಆಗಿದ್ದರು. ಸದ್ಯದಲ್ಲೇ ಚೆನ್ನೈನಲ್ಲಿ ಜಾರ್ಖಂಡ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ತಾವು ದೇಶೀಯ ಟೂರ್ನಿಗಳಿಗೆ ಲಭ್ಯವಿರುವುದಾಗಿ ಜಾರ್ಖಂಡ್‌ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದಾರೆ. ಅಲ್ಲದೆ ಈ ವರ್ಷ ರಣಜಿ ಟ್ರೋಫಿಯಲ್ಲೂ ಜಾರ್ಖಂಡ್ ಪರ ಆಡುವ ಸಾಧ್ಯತೆ ಇದೆ. ಇದು ಇಶಾನ್‌ ಕಿಶನ್‌ ಸುಮಾರು ಎರಡು ವರ್ಷಗಳ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ.

ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದು ಇಶಾನ್‌ ಕಿಶನ್‌ ಕನಸು. ಮುಂದಿನ ತಿಂಗಳಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ, ನ್ಯೂಜಿಲೆಂಡ್, ಮತ್ತು ಆಸ್ಟ್ರೇಲಿಯಾ ವಿರುದ್ಧ ಒಟ್ಟು 10 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಇಶಾನ್‌ ಕಿಶನ್‌ ರೆಡ್‌ ಬಾಲ್‌ ಕ್ರಿಕೆಟ್ ಆಡಲು ತಯಾರಾಗಿದ್ದಾರೆ.

Advertisment

ಇದನ್ನೂ ಓದಿ:IPL 2025: KL ರಾಹುಲ್​ RCB ಕ್ಯಾಪ್ಟನ್​ ಆಗಲೇಬೇಕು ಎಂದು ಪಟ್ಟು ಹಿಡಿದ ಕೊಹ್ಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment