/newsfirstlive-kannada/media/post_attachments/wp-content/uploads/2025/06/ishitha.jpg)
ಕಿರುತೆರೆಯ ಜನಪ್ರಿಯ ನಟಿ ಇಶಿತಾ ವರ್ಷಾ ಅಗ್ನಿಸಾಕ್ಷಿಯ ಮಾಯಾ ಪಾತ್ರದ ಮೂಲಕ ಸತತ 7 ವರ್ಷಗಳ ಕಾಲ ವೀಕ್ಷಕರನ್ನ ರಂಜಿಸಿದ್ದಾರೆ. ಸದ್ಯ ಅಮೃತಧಾರೆಯಲ್ಲಿ ಅಭಿನಯಿಸುತ್ತಿದ್ದಾರೆ ನಟಿ. ಇಶಿತಾ ನಟನೆಗಿಂತ ಹೆಚ್ಚಾಗಿ ಚರ್ಚೆ ಆಗ್ತಿರೋದು ದಾಂಪತ್ಯದ ವಿಚಾರಕ್ಕೆ.
ಇದನ್ನೂ ಓದಿ:ರೈತರಿಗೆ ಸಿಹಿ ಸುದ್ದಿ.. KRS ಡ್ಯಾಮ್ ತುಂಬಲು ಇನ್ನೂ ಎಷ್ಟು ಅಡಿ ನೀರು ಬೇಕು..?
ಅಗ್ನಿಸಾಕ್ಷಿ ಮುಕ್ತಾಯದ ನಂತರ ಡ್ಯಾನ್ಸರ್ ಮುರಗ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ನಟಿ. ಇಬ್ಬರೂ 8 ವರ್ಷ ಪ್ರೀತಿಸಿ ಅದ್ಧೂರಿಯಾಗಿ ಮದುವೆ ಆಗಿದ್ರು. ರಾಜಾರಾಣಿ ಶೋ ಮೂಲಕ ಈ ಜೋಡಿ ಸಖತ್ ಫೇಮಸ್ ಆಯ್ತು. ಮುರುಗನಿಗೆ ಮನೆ ಮನೆ ಮುರು ಅಂತ ತಮಾಷೆ ಮಾಡುತ್ತಾ ಎಲ್ಲರೂ ಕಾಲ್ ಎಳಿತಿದ್ರು. ಇನ್ನೂ ಶೋನಿಂದ ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಿತ್ತು ಈ ಜೋಡಿ.
ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಖಾತೆ ಮೂಲಕ ತಿಳಿದ್ತಿದ್ರು. ಜೊತೆಗಿನ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ರು. ಆದ್ರೆ, ಕಳೆದ ವರ್ಷದಿಂದ ಒಟ್ಟಿಗೆ ಕಾಣಿಸಿಕೊಳ್ಳೋದನ್ನ ನಿಲ್ಲಿಸಿಬಿಟ್ರು. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ಯಾಕೆ ನೀವಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲಾ? ದೂರ ಆಗಿದ್ದೀರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಓಡಾಡ್ತಿದ್ದೀವು. ಯಾವ್ದೇ ಫೋಟೋ, ವಿಡಿಯೋ ಶೇರ್ ಮಾಡಿದ್ರು ಎಲ್ಲಿ ಮುರಗ? ಎಲ್ಲಿ ಇಶಿತಾ ಅಂತ ವೀಕ್ಷಕರು ಕೇಳುತ್ತಿದ್ದರು.
ಮತ್ತೊಂದೆಡೆ ನಟಿ ಟ್ರಾವಲ್ ಫೋಟೋಗ್ರಾಫಿ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟರು. ಅಪರೂಪಕ್ಕೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ವಿಚ್ಛೇದನ ಆಗ್ತಿದ್ಯಾ? ಏನು ಅಂತಲ್ಲಾ ಗುಸು ಗುಸು ನಡೀತಾನೆ ಇತ್ತು. ಇದಕ್ಕೆ ಈಗ ಉತ್ತರ ಕೊಟ್ಟಿದ್ದಾರೆ ನಟಿ. ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರೋ ಇಶಿತಾ, ಮಾರ್ಮಿಕವಗಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಥಗ್ ಲೈಫ್ ಬಿಡುಗಡೆ ಮಾಡಿದರೆ ಸಂಪೂರ್ಣ ರಕ್ಷಣೆ ನೀಡುತ್ತೇವೆ -ಕರ್ನಾಟಕ ಸರ್ಕಾರ ಅಫಿಡವಿಟ್
ನಮ್ಮ ವೈಯಕ್ತಿಕ ಬದುಕನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸೋ ಅಗತ್ಯ ಇಲ್ಲ. ನಮ್ಮ ಪ್ರೈವೆಸಿಯನ್ನು ನೀವು ಗೌರವಿಸ್ತೀರ ಅನ್ಕೊಂಡಿದ್ದೀವಿ. ನಿಮಗೆ ಅವರ ಡ್ಯಾನ್ಸ್, ಮುರಗನ ಕೆಲಸದ ಬಗ್ಗೆ ಅಪ್ಡೇಟ್ ಬೇಕು ಅಂದ್ರೇ ಅವರ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿ ಎಂದಿದ್ದಾರೆ ನಟಿ. ಅಂದ್ಹಾಗೆ, ಇತ್ತಿಚೀಗೆ ವೈಷ್ಣವಿಗೌಡ ಅವರ ಮದುವೆಯಲ್ಲಿ ಇಶಿತಾ ಮುರುಗ ಅಪರೂಪಕ್ಕೆ ಒಟ್ಟಿಗೆ ಕಾಣಿಸಿಕೊಂಡಿದ್ರು. ಈ ಜೋಡಿ ಚನ್ನಾಗಿದ್ರೇ ಅಷ್ಟೇ ಸಾಕು ಅನ್ನೋದು ಅವರ ಕಟ್ಟಾ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ