/newsfirstlive-kannada/media/post_attachments/wp-content/uploads/2024/07/SHIRURU_GUDDA_ESHWAR.jpg)
ಶಿರೂರು ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಡ್ರೈವರ್​ ಅರ್ಜುನ್ ನಾಪತ್ತೆಯಾಗಿದ್ದರು. ಅಂದು ಗಂಗಾವಳಿ ನೀರಿನ ರಭಸ ಜೋರಿದ್ದ ಕಾರಣ ಅರ್ಜುನ್​ ಮತ್ತು ಲಾರಿಯನ್ನು ಹುಡುಕಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಮುಳುಗು ತಜ್ಞ ಈಶ್ವರ್​ ಮಲ್ಪೆ ನೀರಿಗೆ ಇಳಿದು ಅರ್ಜುನ್​ಗಾಗಿ ಹುಡುಕಾಡಿದರು. ಅವರಿಗೂ ಸಹ ಗಂಗಾವಳಿ ನದಿಯ ರಭಸ ಕಾರ್ಯಚರಣೆಗೆ ಅಡ್ಡಿ ಮಾಡಿತ್ತು. ಕೊನೆಗೆ ಈಶ್ವರ್ ಮಲ್ಪೆ ನೀರಿನ ರಭಸ ಕಡಿಮೆಯಾದಂತೆ ಹುಡುಕಿ ಕೊಡುವುದಾಗಿ ಅರ್ಜುನ್​ ಫ್ಯಾಮಿಲಿಗೆ ಭರವಸೆ ನೀಡಿದ್ದರು.
ಕೊಟ್ಟ ಮಾತಿಗೆ ತಪ್ಪದ ಈಶ್ವರ್​ ಮಲ್ಪೆ ಮತ್ತೆ ಗಂಗಾವಳಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಲಾರಿ ಜಾಕ್ ಜೊತೆಗೆ ಲೋಹದ ಸಾಮಾಗ್ರಿ ಪತ್ತೆಯಾಗಿದೆ. ಆದರೀಗ ಪತ್ತೆಯಾದ ಸಾಮಾಗ್ರಿ​​ ಕುರಿತಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
/newsfirstlive-kannada/media/post_attachments/wp-content/uploads/2024/07/KWR-SHIRUR-1.jpg)
ಶುಕ್ರವಾರದಂದು ಈಶ್ವರ್​ ಮಲ್ಪೆ ನದಿ ಆಳಕ್ಕೆ ಹೋಗಿ 15 ಕೆಜಿ ತೂಕದ ಸಾಮಾಗ್ರಿಯೊಂದನ್ನು ಪತ್ತೆಹಚ್ಚಿ ತೆಗೆದುಕೊಂಡು ದಡಕ್ಕೆ ಬಂದಿದ್ದರು. ಆದರೀಗ ಈ ಸಾಮಾಗ್ರಿ​ ಅರ್ಜುನ್​ ಲಾರಿಯದ್ದಲ್ಲ ಎಂಬ ಸತ್ಯ ಹೊರಬಿದ್ದಿದೆ. ಲಾರಿ ಮಾಲೀಕ ಇದು ತನ್ನ ಲಾರಿಯದ್ದಲ್ಲ ಎಂದು ಹೇಳಿದ್ದಾರೆ.
ಸದ್ಯ ಲಾರಿ ಸಾಮಾಗ್ರಿ​ ಪತ್ತೆಯಾದಾಗಿನಿಂದ ಸ್ಥಳೀಯರಿಗೆ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ನೀರಿನಡಿಯಲ್ಲಿ ಮತ್ತೊಂದು ಲಾರಿ ಇದೆಯಾ ಎಂಬ ಪ್ರಶ್ನೆ ಕಾಡಿದೆ.
/newsfirstlive-kannada/media/post_attachments/wp-content/uploads/2024/07/Shirur-4.jpg)
ಇನ್ನು ಶಿರೂರು ಗುಡ್ಡ ಕುಸಿತದಲ್ಲಿ 3 ಗ್ಯಾಸ್​​ ಟ್ಯಾಂಕರ್​ ನದಿ ಪಾಲಾಗಿತ್ತು. ಸದ್ಯ ಆ ಮೂರರಲ್ಲಿ ಒಂದು ಲಾರಿಯ ಸಾಮಾಗ್ರಿ​ ಇದಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಈ ಸಾಮಾಗ್ರಿ​ ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us