newsfirstkannada.com

ಮಾಸ್ಕೋ ಮೇಲಿನ ದಾಳಿ ಹೊಣೆ ಹೊತ್ತ ISIS ಭಯೋತ್ಪಾದಕ ಸಂಘಟನೆ.. ನರಮೇಧ ಮಾಡಿದ್ದು ನಾವೇ ಎಂದ ಉಗ್ರರು

Share :

Published March 23, 2024 at 8:10am

Update March 23, 2024 at 10:01am

    ಸಂಗೀತ ನಡೆಯುತ್ತಿದ್ದ ಹಾಲ್​ಗೆ ನುಗ್ಗಿ ಜನರ ಮೇಲೆ ನಿರಂತರ ಫೈರಿಂಗ್

    ಹಾಲ್​ನೊಳಗೆ ನುಗ್ಗಿ ಸ್ಫೋಟಕಗಳನ್ನು ಎಸೆದು ಬ್ಲಾಸ್ಟ್ ಮಾಡಿದ್ದಾರೆ

    ಕ್ಷಣಾರ್ಧದಲ್ಲೇ ಇಡೀ ಮಾಲ್​ ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು

ರಷ್ಯಾದ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್​ನಲ್ಲಿ ಭಯೋತ್ಪಾದಕರು ಗನ್​ನಿಂದ ಮನಸೋ ಇಚ್ಛೆ ಫೈರಿಂಗ್ ಮಾಡಿದ್ದರಿಂದ 60 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 145ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ದಾಳಿಯ ಹೊಣೆಯನ್ನು ನಾವೇ ಮಾಡಿದ್ದೇವೆ ಎಂದು ISIS ಭಯೋತ್ಪಾಕ ಸಂಘಟನೆ ಹೇಳಿದೆ.

ಕ್ರೋಕಸ್ ಸಿಟಿ ಹಾಲ್​ನಲ್ಲಿ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು ಏಕಕಾಲದಲ್ಲಿ ಸಂಗೀತ ನಡೆಯುವ ಹಾಲ್​ಗೆ ನುಗ್ಗಿ ಏಕಾಏಕಿ ಫೈರಿಂಗ್ ಮಾಡಿದ್ದಾರೆ. ಪರಿಣಾಮ 60 ಜನ ಸಾವನ್ನಪ್ಪಿದ್ದು 145ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನು ಓದಿ: ಸಂಗೀತ ಸಮ್ಮೇಳನದಲ್ಲಿ ಉಗ್ರರ ಪೈಶಾಚಿಕ ಕೃತ್ಯ.. 60 ಮಂದಿ ದಾರುಣ ಸಾವು, 145ಕ್ಕೂ ಹೆಚ್ಚು ಜನ ಗಂಭೀರ

ಸಭಾಂಗಣಕ್ಕೆ ಭಯೋತ್ಪಾದಕರು ನುಗ್ಗಿ ಸ್ಫೋಟಕಗಳನ್ನು ಎಸೆದು ಬ್ಲಾಸ್ಟ್ ಮಾಡಿದ್ದಾರೆ. ಗನ್​​ಗಳಿಂದ ನಿರಂತರ ಫೈರಿಂಗ್ ಮಾಡಿದ್ದಾರೆ. ಕ್ಷಣಾರ್ಧದಲ್ಲೇ ಬೆಂಕಿ ಮಾಲ್​ಗೆ ವ್ಯಾಪಿಸಿಕೊಂಡು ಧಗಧಗಿಸಿದೆ. ಈ ಬೆಂಕಿಯಿಂದ ಕೆಲ ಜನ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ಭದ್ರತಾ ಪಡೆ, ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರು ರಕ್ಷಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಕ್ರೋಕಸ್ ಸಿಟಿ ಹಾಲ್​ ಅತ್ಯಂತ ದೊಡ್ಡದಾಗಿದ್ದು ಸುಮಾರು 6,000 ಜನ ಒಟ್ಟಿಗೆ ಭಾಗವಹಿಸಬಹುದಾದ ಸ್ಥಳ. ಸಂಗೀತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಭಯೋತ್ಪಾದಕರು ಯೋಜನೆಯಂತೆ ಹಾಲ್​ನೊಳಗೆ ನುಗ್ಗಿ ಕೃತ್ಯ ನಡೆಸಿದ್ದಾರೆ. ರಷ್ಯಾದ ಮೇಲೆ ನಡೆದಂತೆ ಈ ಭಯಾನಕ ದಾಳಿಯನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು ಖಂಡಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಸ್ಕೋ ಮೇಲಿನ ದಾಳಿ ಹೊಣೆ ಹೊತ್ತ ISIS ಭಯೋತ್ಪಾದಕ ಸಂಘಟನೆ.. ನರಮೇಧ ಮಾಡಿದ್ದು ನಾವೇ ಎಂದ ಉಗ್ರರು

https://newsfirstlive.com/wp-content/uploads/2024/03/RUSSIA_4.jpg

Load More